Breaking News

ಗ್ರಾ.ಪಂ ಗಳ ಕರೆ ಸಮಗ್ರ ಅಭಿವೃದ್ಧಿಗೆ ಸಿ.ಇ.ಓ. ಸ್ವರೂಪಾ ಆದೇಶ

ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ನರೇಂದ್ರ ಮತ್ತು ಗರಗ ಗ್ರಾಮ ಪಂಚಾಯಿತಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಸ್ವರೂಪಾ ಟಿ ಕೆ ರವರು ಭೇಟಿ ನೀಡಿದರು

ಈ ಸಂದರ್ಭದಲ್ಲಿ ನರೇಂದ್ರ ಗ್ರಾಮದ ಕುಂಭಾಪುರ ಕೆರೆ ಮತ್ತು ಕೆಂಪುಗೆರೆಯನ್ನು ಸಮಗ್ರ ಅಭಿವೃದ್ಧಿಪಡಿಸಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ತಿಳಿಸಿದರು ಅಲ್ಲದೆ ನರೇಂದ್ರ ಗ್ರಾಮದಲ್ಲಿರುವ 7 ಕೆರೆಗಳನ್ನು ಸರ್ವೆ ಮಾಡಲು ತಹಶಿಲ್ದಾರರಿಗೆ ನಿರ್ದೇಶನ ನೀಡಿದರು.

ನಂತರ ಗರಗ ಗ್ರಾಮದ ಪಾಳಗಟ್ಟಿ ಕೆರೆಗೆ ಭೇಟಿ ನೀಡಿ ಗರಗ ಗ್ರಾಮದ ಸಮಗ್ರ ಅಭಿವೃದ್ಧಿಯ ಮಾಡುವಂತೆ ತಿಳಿಸಲಾಯಿತು.ನಂತರ ಕೆರೆ ಅಭಿವೃದ್ದಿ ಮಾಡಲು ನಾಳೆ ದಿ. 6 ರಂದು ಸಂಜೆ 4:30 ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ಸಂಬಂಧಿಸಿದ ಅಧಿಕಾರಿಗಳ ಜೊತೆ ಕೆರೆ ಅಭಿವೃದ್ಧಿ ಕುರಿತು ಚರ್ಚಿಸಲು ಸಭೆಯನ್ನು ಕರೆಯಾಗಿದೆ.

ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರಾದ ಚಂದ್ರು ಪೂಜಾರ, ಆರ್.ಡಬ್ಲ್ಯೂ ಎಸ್ ( RWS) ಇಲಾಖೆಯ ಸಂಗೀತ ಕಲಬುರ್ಗಿ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು ಹಾಗೂ ಸಾರ್ವಜನಿಕರು ಹಾಜರಿದ್ದರು.

Share News

About BigTv News

Check Also

ಸಂಚಾರ ನಿಯಮ ಉಲ್ಲಂಘಿಸಿದ್ರೆ ಕೇಸ್ ಫಿಕ್ಸ್! 100% ಪ್ರಕರಣ ದಾಖಲಿಸಲು ಪೊಲೀಸರಿಗೆ ಖಡಕ್ ಸೂಚನೆ..

ಆಗಸ್ಟ್‌ನಲ್ಲಿ 100% ಸಾಧನೆ ಇಲ್ಲ! ಸಂಚಾರ ಪೊಲೀಸರಿಗೆ ಮೇಲಧಿಕಾರಿಗಳ ಖಡಕ್ ವಾರ್ನಿಂಗ್.. ನಿಯಮ ಉಲ್ಲಂಘನೆ ಕಂಡ್ರೆ ಕೇಸ್ ದಾಖಲಿಸಿ! ಪೊಲೀಸರಿಗೆ …

Leave a Reply

Your email address will not be published. Required fields are marked *