ಧಾರವಾಡ 28 ಆಗಸ್ಟ್ 2022 ರಲ್ಲಿ ಆರಂಭಿಸಿದ ಈ ಮಾಸಪತ್ರಿಕೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ
ಅನುಕೂಲಕರ ಆಗಲಿದೆ ಎಂದು ರಾಜಶೇಖರ ಬಿಸನಳ್ಳಿ ತಿಳಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಇದೊಂದು ಇಂಟರಾಕ್ಟಿವ್ ಮಲ್ಟಿಮೀಡಿಯಾ Magazine ಆಗಿದ್ದು, ಈ ಮಾಸಪತ್ರಿಕೆಯನ್ನು ಎಂ.ಕೃಷ್ಣಪ್ಪ (ಮಾಜಿ ಪೊಲೀಸ್ ವರಿಷ್ಠಾಧಿಕಾರಿ) ಎಂಬುವರು ಆರಂಭಿಸಿದ್ದಾರೆ ಎಂದರು
ಸ್ಪರ್ಧಾ ಅರಿವು ಎಂದರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಂತೆ ಅರಿವು ಮೂಡಿಸುವುದು.
ಈ ಮಾಸ ಪತ್ರಿಕೆಯನ್ನು ಯುಪಿಎಸ್ಸಿ, ಕೆಪಿಎಸ್ಸಿ ಸೇರಿದಂತೆ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನ ಹೊಂದಿರುವಂತಹ ಅಭ್ಯರ್ಥಿಗಳ ಮಾರ್ಗದರ್ಶನದ ಮೇರೆಗೆ ತಯಾರಿಸಲಾಗುತ್ತದೆ. ಜೊತೆಗೆ ನಿವೃತ್ತ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಂತಹ ಮಾರ್ಗದರ್ಶಕರು ಕೂಡ ನಮ್ಮ ಗುಂಪಿನಲ್ಲಿ ಇರುತ್ತಾರೆ ಎಂದರು
ಬೇರೆ ಮಾಸ ಪತ್ರಿಕೆಗಳಿಗೆ ಹೋಲಿಸಿದರೆ ನಮ್ಮ ಮಾಸ ಪತ್ರಿಕೆಯಲ್ಲಿ ವಿನೂತನ ವಿಶಿಷ್ಟ ಉಪಕ್ರಮಗಳನ್ನು ಸೇರಿಸಲಾಗಿದೆ. ಉದಾಹರಣೆಗೆ ನಮ್ಮ ಮಾಸಪತ್ರಿಕೆ QR Codes, Audio Podcasts, Infographics, Memes, Cartoons ಮುಂತಾದ ಸೌಲಭ್ಯ ಹೊಂದಿರುತ್ತದೆ ಅಲ್ಲದೆ
ಈ ಮಾಸಪತ್ರಿಕೆಯು FDA, SDA, ಪೊಲೀಸ್ ಕಾನ್ಸ್ಬಲ್, ಗ್ರೂಪ್ – ಸಿ ಸೇರಿದಂತೆ ಯುಪಿಎಸ್ಸಿ ಕೆಪಿಎಸ್ಸಿ ಪರೀಕ್ಷೆಗಳಿಗೂ ಅನುಕೂಲಕರವಾಗುವಂತೆ ತಯಾರಿಸಲಾಗಿದೆ.
ಕೇವಲ 60 ರೂಪಾಯಿಗಳಲ್ಲಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲಕರಾಗುವಂತೆ 100% Success Rate ಹೊಂದುವ ಹಾಗೆ ಈ ಪತ್ರಿಕೆಯನ್ನು ಕರ್ನಾಟಕದ ಪ್ರತಿ ಹಳ್ಳಿಗೂ ತಲುಪಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ತಿಳಿಸಿದರು. ಬಸವರಾಜ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news




