ಕುಂದಗೋಳ : ತಾಲೂಕಿನ ಯರಿನಾರಾಯಣಪೂರ ಗ್ರಾಮದ ಯುವ ಮು ಖಂಡ ಶಂಕರಗೌಡ ದೊಡಮನಿ ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಹನುಮಂತಪ್ಪ ಆಲ್ನೋಡ್ ಹಾಗೂ ಕೆ.ಎನ್.ಗಡ್ಡಿ ಇವರ ನೇತ್ರತ್ವದಲ್ಲಿ ಜೆಡಿಎಸ್ ಸೇರ್ಪಡೆಗೊಂಡರು. ಶಂಕರಗೌಡ ದೊಡಮನಿ ಕುಂದಗೋಳ ತಾಲೂಕಾ ಜೆಡಿಎಸ್ ತಾಲೂಕಾಧ್ಯಕ್ಷರಾಗಿದ್ದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ತೊರೆದಿದ್ದರು. ಇದೀಗ ಮತ್ತೆ ಜೆಡಿಎಸ್‌ಗೆ ಸೇರ್ಪಡೆಗೊಂಡಿದ್ದು ಹರ್ಷ ತಂದಿದೆ ಎಂದು ಹನುಮಂತಪ್ಪ ಆಲ್ನೋಡ್ ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರ ವೀರಭದ್ರಪ್ಪ ಹಾಲಹರವಿ, ಗುರುರಾಜ ಹುಣಸಿಮರದ ಇತರರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





