ಸಾಮಾನ್ಯವಾಗಿ ನಾವು ಆಟೋ ರಿಕ್ಷಾಗಳ ಹಿಂದೆ ಕವಿತೆಗಳು, ಕವನಗಳು, ತಾತ್ಪರ್ಯಗಳು, ಅಪ್ಪ ಅಮ್ಮನ ಆಶೀರ್ವಾದ ಈ ರೀತಿಯ ಬರಹಗಳನ್ನು ನೋಡುತ್ತೇವೆ. ಇನ್ನೂ ಕೆಲವು ಆಟೋ ಡ್ರೈವರ್ ಗಳು ಕನ್ನಡ ಅಭಿಮಾನ, ನೆಚ್ಚಿನ ನಟರ ಚಿತ್ರಗಳ ಹೆಸರು, ಫೋಟೊಗಳನ್ನು ಹಾಕಿಕೊಂಡಿರುತ್ತಾರೆ. ಆದರೆ ಇಲ್ಲೊಬ್ಬ ಆಟೋ ಚಾಲಕ ಮಾತ್ರ ತಾನು ತೆಗೆದುಕೊಂಡ ಅಟೋ ಮೇಲೆ ಅದನ್ನು ಖರೀದಿ ಮಾಡದಂತೆ ಬರೆದಿದ್ದು ವ್ಯಾಪಕ ವೈರಲ್ ಆಗಿದೆ.
ಆಟೋರಿಕ್ಷಾಗಳ ಹಿಂದೆ ಜಾಹೀರಾತು ಕೂಡ ನೀಡುವುದು ಸಾಮಾನ್ಯವಾಗಿದೆ. ಬೆಂಗಳೂರಿನ ಆಟೋರಿಕ್ಷಾವೊಂದು “ಈ ವಾಹನವನ್ನು ಖರೀದಿಸದಂತೆ ಇತರರನ್ನು ಎಚ್ಚರಿಸಲು” ಆಯ್ಕೆ ಮಾಡಿದೆ.ಬೆಂಗಳೂರಿನ ವಕೀಲರಾದ ಆಶಿಶ್ ಕೃಪಾಕರ್ ಅವರು ಈ ಫೋಟೋವನ್ನು ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ. ಆಟೋರಿಕ್ಷಾ ಚಾಲಕನು ತನ್ನ ವಾಹನದ ಹಿಂಭಾಗದಲ್ಲಿ “ಕಚಡಾ ವಾಹನ ಖರೀದಿಸಬೇಡಿ” ಎಂದು ಬರೆದಿದ್ದು, ಈ ಚಿತ್ರ ವ್ಯಾಪಕವಾಗಿ ವೈರಲ್ ಆಗಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news





