Breaking News

ನಾಲ್ವರ ಹತ್ಯೆಗೈದ ಆರೋಪಿ ಪ್ರವೀಣ್ ಚೌಗಲೇ ಹತ್ಯೆ ಮಾಡಿದ ಚೂರಿಯನ್ನು ಅಡುಗೆ ಮನೆಯಲ್ಲೇ ಇಟ್ಟು ಸಂಶಯ ಬರದಂತೆ ವರ್ತಿಸಿದ….

ಉಡುಪಿ: ಉಡುಪಿಯಲ್ಲಿ ನಾಲ್ವರ ಹತ್ಯೆಗೈದ ಆರೋಪಿ ಪ್ರವೀಣ್ ಚೌಗಲೇ ಹತ್ಯೆ ಮಾಡಿದ ಚೂರಿಯನ್ನು ಅಡುಗೆ ಮನೆಯಲ್ಲೇ ಇಟ್ಟು ಪತ್ನಿಗೆ ಸಂಶಯ ಬರದಂತೆ ವರ್ತಿಸಿದ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ. ನಾಲ್ವರ ಹತ್ಯೆ ಕುರಿತು ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಉಡುಪಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಡಾ.ಅರುಣ್, ಪ್ರವೀಣ್ ನಾಲ್ವರ ಕೊಲೆಗೈದು ಚೂರಿಯನ್ನು ಅಡುಗೆ ಮನೆಯಲ್ಲಿ ಇಟ್ಟಿದ್ದಾನೆ. ಪತ್ನಿಗೆ ಸಂಶಯ ಬರೆದ ಹಾಗೆ ಮನೆಯಲ್ಲಿ ಪ್ರವೀಣ್ ವರ್ತಿಸಿದ್ದಾನೆ. ಬುಧವಾರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದೇವೆ. ಆರೋಪಿ ಪ್ರವೀಣ್ ಹಾಗೂ ಆಯ್ನಾಜ್ ಎಂಟು ತಿಂಗಳಿಂದ ಪರಿಚಯವಿತ್ತು. ಇವರ ಮಧ್ಯೆ ಉತ್ತಮ ಸಂಬಂಧ ಇತ್ತು. ಪ್ರವೀಣ್ ತನ್ನ ದ್ವಿಚಕ್ರ ವಾಹನ ಬಳಸಲು ಆಯ್ನಾಜ್ ನೀಡಿದ್ದ. ಆದರೆ ಎರಡು ತಿಂಗಳಿಂದ ಮಾತಾಡುತ್ತಿರಲಿಲ್ಲ. ಪ್ರವೀಣ್ ಕೊಲೆ ಮಾಡುವ ದಿನ ತನ್ನ ಕಾರ್‌ಅನ್ನು ಪಡುಬಿದಿರೆ ಟೋಲ್ ಹಿಂದೆ ನಿಲ್ಲಿಸಿದ್ದ.

Share News

About BigTv News

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *