Breaking News

9 ರಂದು ಛಾಯಾಗ್ರಾಹಕರಿಗೆಕಾನೂನು ಅರಿವು ಕೌಶಲ್ಯಾಭಿವೃದ್ಧಿಗಾಗಿ ಜಿಲ್ಲಾ ಮಟ್ಟದ ಕಾರ್ಯಾಗಾರ.

ಧಾರವಾಡ ಛಾಯಾಗ್ರಾಹಕರ ಕೌಶಲ್ಯಾಭಿವೃದ್ಧಿಗಾಗಿ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು 9 ಸೋಮವಾರ ಬೆಳಿಗ್ಗೆ 10:00 ಗಂಟೆಯಿಂದ ಸಾಯಂಕಾಲ 4:30ರ ವರಿಗೆ ಸುವರ್ಣ ಸಮ್ಮುಚಯ ಭವನ, ರಂಗಾಯಣ, ಧಾರವಾಡದಲ್ಲಿ ಆಯೋಜಿಸಲಾಗುತ್ತಿದೆ.ಎಂದು
ಧಾರವಾಡ ಫೋಟೂ ಮತ್ತು ವಿಡಿಯೋಗ್ರಾಫರ ಸಂಘದ
ಅಧ್ಯಕ್ಷ ರಾಹುಲ್ ದತ್ತಪ್ರಸಾದ ತಿಳಸಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು
ಓಡುತ್ತಿರುವ ಆಧುನಿಕ ತಂತ್ರಜ್ಞಾನದಲ್ಲಿ ಅತೀ ಹೆಚ್ಚು ಸವಾಲುಗಳು ಎದುರಾಗುತ್ತಿರುವುದು ವೃತ್ತಿಪರ ಛಾಯಾಗ್ರಾಹಕರಿಗೆ ಕಾರ್ಯಕ್ರಮ ಸಂಘ ಹಮ್ಮಿಕೊಂಡಿದೆ ಎಂದರು.

ಸತತ 17 ವರ್ಷಗಳಿಂದ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸುತ್ತ ಸಮಾಜಮುಖಿಯಾಗಿ ಹಲವಾರು ಕಾರ್ಯಕ್ರಮಗಳನ್ನು ನಿರ್ವಹಿಸುತ್ತ ಬಂದಿರುವ ಧಾರವಾಡ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಸಂಘ (ರಿ) ವತಿಯಿಂದ ಕರ್ನಾಟಕ ರಾಜ್ಯ ವೃತ್ತಿಪರ ಛಾಯಾಗ್ರಾಹಕರ ಒಕ್ಕೂಟದ ಸಹಯೋಗದೊಂದಿಗೆ ಮತ್ತು ಹುಬಳ್ಳಿ, ನವಲಗುಂದ, ಕುಂದಗೋಳ, ಅಳ್ಳಾವರ ಮತ್ತು ಅಣ್ಣಿಗೇರಿ ಛಾಯಾಗ್ರಾಹಕರ ಸಂಘಗಳ ಸಹಕಾರದಿಂದ ತರಬೇತುದಾರರಾಗಿ ರಾಜ್ಯದ ಖ್ಯಾತ ತರಬೇತುದಾರ ಬಾಬು ಜಿ.ಎಸ್. (ಮೈಸೂರು ಬಾಬು) ಅವರು ಆಧುನಿಕ ಕ್ಯಾಮರಾ ಸೆಟಿಂಗ್, ಲೈಟರೂಮ್ ಸ್ಟೀಲ್ ಮತ್ತು ಡೆಟಾ ರಿಕವರಿ ವಿಷಯ ಕುರಿತು ತರಬೇತಿ ನೀಡುತ್ತಿದ್ದು ಹಾಗೂ ಛಾಯಾಗ್ರಾಹಕರಿಗೆ ಕಾನೂನು ಅರಿವು” ವಿಶೇಷ ವಿಷಯದ ಕುರಿತು ಉಪನ್ಯಾಸಕರಾಗಿ ನ್ಯಾಯವಾದಿಗಳಾದ ಸೋಮಣ್ಣ ಜಾಡರ ರವರು ಆಗಮಿಸುತ್ತಿದ್ದು, ಧಾರವಾಡ ಜಿಲ್ಲಾ ವೃತ್ತಿಪರ ಭಾಂಧವರು ಇದರ ಸದುಪಯೋಗ ಪಡೆದುಕೊಳ್ಳಲು ತಿಳಸಿದರು.

ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ವೃತ್ತಿಪರ ಛಾಯಾಗ್ರಾಹಕರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರು ವಿಲ್ಸನ್ ಜಾರ್ಜ್ ಗೊನ್ಸಾಲ್ವಿನ್ ಅವರು ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆ

ರಾಹುಲ್ ದತ್ತಪ್ರಸಾದ ಅಧ್ಯಕ್ಷರು, ಧಾರವಾಡ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಸಂಘ ವಹಿಸುವರು , ಮುಖ್ಯ ಅಥಿತಿಗಳಾಗಿ ವಿಜಯ ಕುಮಾರ್ ಜಾಧವ ಕಾರ್ಯದರ್ಶಿ ವೃತ್ತಿಪರ ಛಾಯಾಗ್ರಾಹಕರ ಸಂಘಟನೆಗಳ ಒಕ್ಕೂಟ, ದಿನೇಶ ದಾಬಡೇ ಉಪಾಧ್ಯಕ್ಷರು, ಹುಬ್ಬಳ್ಳಿ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಸಂಘ, ಆಗಮಿಸುವರು.
ಪೃಥ್ವಿರಾಜ ಮಿಸ್ಕಿನ್, ಮುರಳಿ ಮಲಜಿ, ಶ್ರೀನಿವಾಸ ಮಲಜಿ, ಹಾಗೂ ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ನವಲಗುಂದ, ಕುಂದಗೋಳ, ಅಲ್ಪಾವರ ಮತ್ತು ಅಣ್ಣಿಗೇರಿ ತಾಲೂಕು ಛಾಯಾಗ್ರಾಹಕರ ಸಂಘಗಳ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಉಪಸ್ಥಿತಿತರಿರುವರು.

ರವಿ ಯಾಲಕ್ಕಿ ಶೆಟ್ಟರ್, ಲಕ್ಷ್ಮಣ ದಾನಪ್ಪಗೌಡರ ಮತ್ತು ಮೋಹನ ಕರಾಟೆ, ಉಮೇಶ್ ಚಿಕ್ಕೋಡಿ, ಪತ್ರಿಕಾ ಗೋಷ್ಠಿಯಲ್ಲಿ
ಉಪಸ್ಥಿತರಿದ್ದರು.

Share News

About BigTv News

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *