ತಮಿಳು ಸ್ಟಾರ್ ಸೂರ್ಯ ಅವರ ಮುಂಬರುವ ಬಹುನಿರೀಕ್ಷಿತ ಸಿನಿಮಾ ‘ಕಂಗುವ’ ಸೆಟ್‌ನಲ್ಲಿ ಆಕಸ್ಮಿಕವಾಗಿ ಗಾಯಗೊಂಡಿದ್ದಾರೆ. ಚಿತ್ರೀಕರಣದ ವೇಳೆ ರೋಪ್ ಕ್ಯಾಮೆರಾ ಭುಜದ ಮೇಲೆ ಬಿದ್ದಿದ್ದು, ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿತ್ತು. ಇದು ಅವರ ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಸದ್ಯ ನಟ ಸೂರ್ಯ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಚೆನ್ನೈನ ಹೊರಗಡೆ ಇರುವ ಇವಿಪಿ ಫಿಲ್ಮ್ ಸಿಟಿಯಲ್ಲಿ ಸಿರುತೈ ಶಿವ ನಿರ್ದೇಶನದ ‘ಕಂಗುವ’ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ. ಈ ಅವಘಡದ ನಂತರ, ನಟ ಸೂರ್ಯ ಕೆಲವು ದಿನಗಳ ಕಾಲ ಶೂಟಿಂಗ್‌ನಿಂದ ವಿರಾಮ ತೆಗೆದುಕೊಳ್ಳಲಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ನಟನ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸೂರ್ಯ ಆರೋಗ್ಯದ ಮಾಹಿತಿ ಕೇಳುತ್ತಿದ್ದರು.
ಈ ದುರ್ಘಟನೆಯಿಂದಾಗಿ ಸೂರ್ಯ ಶೂಟಿಂಗ್ ಸೆಟ್‌ನಲ್ಲಿ ಮೂರ್ಛೆ ಹೋಗಿದ್ದರು ಎಂಬ ಮಾಹಿತಿ ಬಂದಿತ್ತು. ಇದು ಅವರ ಫ್ಯಾನ್ಸ್‌ಗೆ ಭಾರಿ ಆತಂಕ ತಂದಿತ್ತು. ಇನ್ನು, ಗಾಯ ಚಿಕ್ಕದಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಯಾವುದೇ ಔಪಚಾರಿಕ ದೂರು ಬಂದಿಲ್ಲ ಎಂದು ಪೊಲೀಸರು ಕೂಡ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





