ಹೊಸದುರ್ಗ ರೈಲು ನಿಲ್ದಾಣದಲ್ಲಿ ನಿಲ್ಲಿಸಿದಾಗ ಆಹಾರ ಖರೀದಿಸಲೆಂದು ಅವರು ರೈಲಿನಿಂದ ಇಳಿದಿದ್ದು, ಆಹಾರ ಖರೀದಿಸಿ ಬರುವಷ್ಟರಲ್ಲಿ ರೈಲು ಹೊರಟಿತ್ತು. ಚಲಿಸುತ್ತಿದ್ದ ರೈಲನ್ನೇರಲು ಯತ್ನಿಸಿದಾಗ ಆಯ ತಪ್ಪಿ ಬಿದ್ದು ಪಾಲಕ್ಕಾಡ್ ಮುಳಿಯಕಾವ್ ನಿವಾಸಿ ಸುಂದರ (39) ಗಂಭೀರ ಗಾಯಗೊಂಡಿದ್ದಾರೆ.ಅವರನ್ನು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯ ಬಳಿಕ ಕಲ್ಲಿಕೋಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕನ ಎಡಗಾಲು ಮತ್ತು ಹೆಗಲಿಗೆ ಗಂಭೀರ ಗಾಯವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

