Breaking News

ನಟಿ ಕಾರ್ತಿಕಾ ನಾಯರ್‌ ನಮ್ಮ ರಾಯಲ್ ಫೇರಿಟೇಲ್ ಬಿಗಿನ್ಸ್ ಬ್ಲೆಸ್ಡ್ ಎಂದು ಬರೆದುಕೊಂಡಿದ್ದಾರೆ…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಬೃಂದಾವನ’ ಸಿನಿಮಾದ ಮೂಲಕ ಪರಿಚಯವಾದವರು ನಟಿ ಕಾರ್ತಿಕಾ ನಾಯರ್‌ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಲವಾರು ನಟಿ-ನಟಿಯರುಈ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನವಜೋಡಿಗೆ ಶುಭ ಕೋರಿದರು. ನಟಿ ಕಾರ್ತಿಕಾ ನಾಯರ್ ಹಿರಿಯ ನಟಿ ರಾಧಾ ಅವರ ಪುತ್ರಿ.
ನಟಿ ಕಾರ್ತಿಕಾ ತನ್ನ ನಿಶ್ಚಿತ ವರ ರೋಹಿತ್ ಮೆನನ್ ಅವರನ್ನು ಕೇರಳದಲ್ಲಿ ವಿವಾಹವಾದರು. ಸಮಾರಂಭದ ಚಿತ್ರಗಳನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ಕೇರಳದ ತಿರುವನಂತಪುರದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವಿವಾಹವಾಗಿದ್ದು, ದಕ್ಷಿಣ ಚಿತ್ರರಂಗದ ಅನೇಕ ದೊಡ್ಡ ತಾರೆಯರು ಭಾಗವಹಿಸಿದ್ದರು. ಮೆಗಾಸ್ಟಾರ್ ಚಿರಂಜೀವಿ, ಜಾಕಿ ಶ್ರಾಫ್, ರಾಧಿಕಾ ಶರತ್‌ಕುಮಾರ್, ಸುಹಾಸಿನಿ ಮಣಿರತ್ನಂ, ರೇವತಿ, ಮೇನಕಾ ಸೇರಿದಂತೆ ಹಲವರು ಈ ಅದ್ಧೂರಿ ವಿವಾಹದಲ್ಲಿ ಪಾಲ್ಗೊಂಡಿದ್ದರು.

ನಟಿ ಕಾರ್ತಿಕಾ ನಾಯರ್‌ ಮೊದಲು ನಟಿಸಿದ್ದು ತೆಲುಗು ಸಿನಿಮಾದಲ್ಲಿ. ಆನಂತರ ತಮಿಳಿನ ‘ಕೋ’ ಚಿತ್ರದಲ್ಲಿ ನಟಿಸಿದರು. 17ನೇ ವಯಸ್ಸಿಗೆ ನಾಯಕಿಯಾದ ಕಾರ್ತಿಕಾ, ಕಡಿಮೆ ಸಮಯದಲ್ಲಿ ದಕ್ಷಿಣ ಭಾರತದ ತಮಿಳು, ತೆಲುಗು, ಮಲಯಾಳಂ, ಕನ್ನಡ ಭಾಷೆಗಳಲ್ಲಿ ಮಿಂಚಿದರು. ಹಿಂದಿಯ ‘ಆರಂಭ್‌’ ಎಂಬ ಸೀರಿಯಲ್‌ನಲ್ಲೂ ಕಾರ್ತಿಕಾ ನಟಿಸಿದ್ದರು. ಇನ್‌ಸ್ಟಾಗ್ರಾಂನಲ್ಲಿ ಕಾರ್ತಿಕಾ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ‘ನಮ್ಮ ರಾಯಲ್ ಫೇರಿಟೇಲ್ ಬಿಗಿನ್ಸ್. ಬ್ಲೆಸ್ಡ್’ ಎಂದು ಬರೆದುಕೊಂಡಿದ್ದಾರೆ

Share News

About BigTv News

Check Also

ಅಭಿಮಾನಿಗಳಿಗೆ ಶಾಕ್ ಡಾಲಿ

ಡಾಲಿ ಧನಂಜಯ್ ಹುಟ್ಟುಹಬ್ಬದ ಹಿನ್ನೆಲೆ ತನ್ನ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಈ ಬಾರಿ ತಾವು ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಗುವುದಿಲ್ಲ ಎಂದು …

Leave a Reply

Your email address will not be published. Required fields are marked *