ಚಿಕ್ಕಬಳ್ಳಾಪುರ: ಇಶಾ ಫೌಂಡೇಶನ್’ನಿಂದ ಚಿಕ್ಕಬಳ್ಳಾಪುರದ ಬಳಿ ಆದಿಯೋಗಿ ಪ್ರತಿಮೆ ಸ್ಥಾಪನೆಯಾಗುತ್ತಿದ್ದಂತೆ ಬೆಂಗಳೂರು ಸೇರಿದಂತೆ ವಿವಿಧ ಕಡೆಯಿಂದ ಚಿಕ್ಕಬಳ್ಳಾಪುರಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.ಇದನ್ನೇ ಬಂಡವಾಳ ಮಾಡಿಕೊಂಡ ಬೆಂಗಳೂರಿನ ಸ್ಕೈಬರ್ಡ್ ಅಡ್ವೆಂಚರಸ್ ಸಂಸ್ಥೆ ಇಶಾ ಫೌಂಡೇಶನ್ ಸಮೀಪ ಪ್ಯಾರಾಗ್ಲೈಡಿಂಗ್ ಹಾರಾಟ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಪ್ಯಾರಾಗ್ಲೆಡಿಂಗ್ ಮಾಡುವಾಗ ಆದಿಯೋಗಿ ಪ್ರತಿಮೆಯನ್ನು ಮೇಲಿನಿಂದ ಪಕ್ಷಿಯಂತೆ ಹಾರಿ ವೀಕ್ಷಿಸಬಹುದಾಗಿದೆ. ಈಗ ಮೊದಲ ಹಂತದ ಪ್ರಾಯೋಗಿಕ ಹಾರಾಟ ಚಿಕ್ಕಬಳ್ಳಾಪುರದಲ್ಲಿ ಯಶಸ್ವಿಯಾಗಿದೆ.ಬುಧವಾರ ಪ್ರಾಯೋಗಿಕವಾಗಿ ಪ್ಯಾರಾಗ್ರೇಡಿಂಗ್ ಹಾರಾಟವನ್ನು ಯಶಸ್ವಿಯಾಗಿ ನಡೆಸಿದ್ದು, ಉತ್ತರ ಭಾರತದ ಹಿಮಾಚಲ ಪ್ರದೇಶದಲ್ಲಿ ಕಾಣುತ್ತಿದ್ದ ಪ್ಯಾರಾಗ್ಲೆಡಿಂಗ್ ಸಾಹಸ ಕ್ರೀಡೆ ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರದಲ್ಲಿಯೂ ಕಾಣಬಹುದಾಗಿದೆ. ಜೊತೆಗೆ ಹಾರಾಟ ಕೂಡ ಮಾಡಿ ಪ್ರವಾಸಿಗರು ಆನಂದಿಸಬಹುದಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





