Breaking News

ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು: ಹೆಲ್ಮೆಟ್ ಧರಿಸಿ ಬಂದು ಎಕ್ಸ್‌ಪ್ರೆಸ್ ಬಸ್ ಎಗರಿಸಿದ ಖತರ್ನಾಕ್ ಕಳ್ಳರು

ಉಡುಪಿ: ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಮಂಗಳೂರು-ಕುಂದಾಪುರ ಖಾಸಗಿ ಎಕ್ಸ್‌ಪ್ರೆಸ್ ಬಸ್‌ನ್ನು ಇಬ್ಬರು ಕಳ್ಳರು ಕದ್ದೊಯ್ದ ಘಟನೆ ಚಿಟ್ಪಾಡಿಯಲ್ಲಿ ನಡೆದಿದೆ. ಸಿಬ್ಬಂದಿಯಂತೆ ಸಮವಸ್ತ್ರ ಧರಿಸಿ, ಹೆಲ್ಮೆಟ್ ಹಾಕಿಕೊಂಡಿದ್ದ ಕಳ್ಳನೊಬ್ಬ ಬಸ್‌ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ಇನ್ನೊಬ್ಬ ಕಳ್ಳ ಸ್ಕೂಟಿಯಲ್ಲಿ ಬಸ್‌ನ್ನು ಹಿಂಬಾಲಿಸಿದ್ದು, ಕಳವು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಸ್‌ ಕಳವಾದ ಬಗ್ಗೆ ದೂರು ಬಂದ ಬಳಿಕ ಉಡುಪಿ ನಗರ ಪೊಲೀಸರು ಜಿಪಿಎಸ್‌ ಆಧರಿಸಿ ಹುಡುಕಾಟ ನಡೆಸಿದ್ದಾರೆ. ಕಾಪು ತಾಲೂಕಿನ ಮುದರಂಗಡಿ ಸಮೀಪದ ಮುದ್ದಾಡಿಯಲ್ಲಿ ಬಸ್‌ ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಸ್‌ ಕದ್ದು ಪರಾರಿಯಾಗಿರುವ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಸಾಲದ ವಿಚಾರಕ್ಕೆ ಪತಿ-ಪತ್ನಿ ಕಲಹ : ಮಕ್ಕಳ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

ಕಲಬುರಗಿ: ಸಾಲದ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ನಡುವೆ ನಡೆದ ಕಲಹ ದುರಂತಕ್ಕೆ ಕಾರಣವಾಗಿದ್ದು, ತಾಯಿ ತನ್ನ ಇಬ್ಬರು ಪುತ್ರಿಯರೊಂದಿಗೆ ಬಾವಿಗೆ …

Leave a Reply

Your email address will not be published. Required fields are marked *