ಮಂಗಳೂರು: ಸಿಟಿ ಮಕ್ಕಳಿಗೆ ಕೃಷಿಯ ಅರಿವು ಇಲ್ಲ, ಭತ್ತ, ಕಂಗು ತೆಂಗು ಹೊರತುಪಡಿಸಿ ಯಾವ ಬೆಳೆಯ ಬಗ್ಗೆಯೂ ಮಾಹಿತಿಯೇ ಇಲ್ಲ ಎಂಬ ಅಪವಾದ ಇದೆ. ಆದರೆ ಈ ಅಪವಾದ ವನ್ನು ಮಂಗಳೂರು ನಗರದಲ್ಲಿರುವ ಸರ್ಕಾರಿ ಶಾಲೆಯ ಮಕ್ಕಳು ತೊಡೆದು ಹಾಕಿದ್ದಾರೆ. ನಗರದ ಮಕ್ಕಳ ತರಕಾರಿ ಕೃಷಿ ಯಾವ ಕೃಷಿಕನಿಗೂ ಕಮ್ಮಿ ಇಲ್ಲದಂತೆ ಫಸಲು ನೀಡುತ್ತಿದ್ದು, ಮಕ್ಕಳು ಟಾರೆಸಿ ಮೇಲೆ ನೆಟ್ಟ ಗಿಡ ಈಗ ಮಧ್ಯಾಹ್ನದ ಬಿಸಿಯೂಟಕ್ಕೆ ತರಕಾರಿಗಳನ್ನು ಒದಗಿಸುತ್ತಿದೆ.ಶಾಲೆ ಜ್ಞಾನಾರ್ಜನೆಗೆ ಮಾತ್ರವಲ್ಲ ಮಕ್ಕಳ ಕೌಶಲ್ಯವನ್ನು ಬೆಳೆಸುವ ತಾಣವಾಗಬೇಕು. ಈ ಮಾತಿಗೆ ಪೂರಕವಾಗಿದೆ ನಗರದ ಬೊಕ್ಕಪಟ್ಣದ ಸರಕಾರಿ ಪ್ರಾಥಮಿಕ ಶಾಲೆ. ಇಲ್ಲಿ ಶಾಲೆಯ ಮಕ್ಕಳಿಂದಲೇ ತಾರಸಿತೋಟ ಮಾಡಿ ಉತ್ತಮ ಇಳುವರಿ ತೆಗೆಯಲಾಗಿದೆ.
ಶಾಲೆಯ ವರಾಂಡ ಮಾತ್ರವಲ್ಲದೆ ತಾರಸಿಯ ಪ್ರದೇಶದಲ್ಲೂ ಹಳೆಯ ಫ್ರಿಡ್ಜ್ ಪಳೆಯುಳಿಕೆಯಲ್ಲಿ ತರಕಾರಿ ಬೆಳೆಯಲಾಗುತ್ತಿದೆ. ಮುಖ್ಯಶಿಕ್ಷಕಿ ಹಾಗೂ ಇತರ ಶಿಕ್ಷಕರ ಮುತುವರ್ಜಿಯಿಂದ ವಿದ್ಯಾರ್ಥಿಗಳೇ ಇಲ್ಲಿ ತರಕಾರಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ತರಕಾರಿಯನ್ನು ಮಕ್ಕಳ ಬಿಸಿಯೂಟಕ್ಕೆ ಬಳಸಲಾಗುತ್ತಿದೆ. ಬಸಳೆ, ಹರಿವೆ, ಹೀರೆ, ಬೆಂಡೆ, ತೊಂಡೆ, ಬದನೆ, ಮೂಲಂಗಿ, ಮುಳ್ಳುಸೌತೆಗಳು ಮಕ್ಕಳ ಆರೈಕೆಯಲ್ಲಿ ಯಥೇಚ್ಛವಾಗಿ ಬೆಳೆದಿದ್ದು, ಬಿಸಿಯೂಟಕ್ಕೆ ಬಳಸಿ ಹೆಚ್ಚಾದ ತರಕಾರಿಗಳನ್ನು ಮಾರಾಟ ಮಾಡಿ ಗೊಬ್ಬರ ಖರೀದಿ ಮಾಡಲಾಗುತ್ತದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





