ಜೀ ಕನ್ನಡದ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ನಾಯಕ ನಟ ಅನಿರುದ್ಧ್ಗೆ ಸೀರಿಯಲ್ನಿಂದ ಗೇಟ್ ಪಾಸ್ ನೀಡಲಾಗಿದೆ. ಅವರನ್ನು ಮುಂದಿನ ಎರಡು ವರ್ಷಗಳ ಕಾಲ ಯಾವುದೇ ಧಾರಾವಾಹಿಗಳಲ್ಲಿ ಅವಕಾಶ ನೀಡದಂತೆ ಎಲ್ಲಾ ನಿರ್ಮಾಪಕರು ನಿರ್ಧರಿಸಿದ್ದಾರೆ.
ಅನಿರುದ್ಧ್ ವಿರುದ್ಧ ನಿರ್ಮಾಪಕ ಆರೂರು ಜಗದೀಶ್ ಆರೋಪಗಳ ಸುರಿಮಳೆಗೈದಿದ್ದಾರೆ. ಈ ಆರೋಪಗಳ ಬಗ್ಗೆ ಸುದ್ದಿಗೋಷ್ಠಿ ಕರೆದು ನಟ ಅನಿರುದ್ಧ್ ಸ್ಪಷ್ಟನೆ ನೀಡಿದ್ದಾರೆ. ಧಾರಾವಾಹಿ ನಂಗೆ ವೈಯಕ್ತಿಕವಾಗಿ ತುಂಬಾ ಕೊಟ್ಟಿದೆ. ಇದು ನನ್ನ ಅದೃಷ್ಟ ಎಂದು ಭಾವಿಸುವೇ, ಜೊತೆ ಜೊತೆಯಲ್ಲಿ ನನ್ನಿಂದ ನಡೆಯುತ್ತಿದೆ ಎಂದು ನಾನು ಭಾವಿಸಿಲ್ಲ. ದೇವರ ಸ್ವರೂಪ ಆಗಿರೋ ಪ್ರೇಕ್ಷಕರಿಂದ ಈ ಯಶಸ್ಸು ಸಿಕ್ಕಿದೆ ಎಂದು ಹೇಳಿದ್ದಾರೆ.
‘ನನಗೆ ಯಶಸ್ಸು ಸಿಕ್ಕಿದ್ದು ವೀಕ್ಷಕರಿಂದ. ದುರಹಂಕಾರ ಅಂತ ಹೇಳುತ್ತಾರೆ, ನನಗೆಲ್ಲಿದೆ ದುರಹಂಕಾರ, ನನ್ನಲ್ಲಿ ದುರಹಂಕಾರ ಇದ್ದಿದ್ದರೆ, ಅಭಿನಯದಲ್ಲೂ ಕಾಣಿಸುತ್ತಿತ್ತು. ಈ ಪಾತ್ರಕ್ಕಾಗಿ ನಾನು 12 ಕೆಜಿ ತೂಕ ಇಳಿಸಿಕೊಂಡಿದ್ದೇನೆ. ಇದಕ್ಕೆ ತುಂಬಾ ಕಷ್ಟ ಪಟ್ಟಿದ್ದೇನೆ. ಯಾವುದಕ್ಕಾಗಿ ಇದೆಲ್ಲ ಮಾಡಿದ್ದು. ಅಷ್ಟು ಸುಲಭ ಅಲ್ಲ ಇದು. ಇದನ್ನ ನಾನು ಮಾಡಿದ್ದು ಪಾತ್ರಕ್ಕಾಗಿ ಅಷ್ಟೆ ಎಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

