Breaking News

ಜಯ ಮೃತ್ಯುಂಜಯ ಸ್ವಾಮೀಜಿಯಿಂದ 13ನೆ ತಾರೀಕು ಮತ್ತೊಂದು ಸುತ್ತಿನ ಹೋರಾಟ…

ಧಾರವಾಡ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗದೆ ಹೋದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ರಾ ಷ್ಟ್ರೀಯ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಜಯ ಸ್ವಾಮೀಜಿ ಹೇಳಿದ್ದಾರೆ. ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಕಳೆದ ಮೂರು ವರ್ಷಗಳಿಂದ ನಾವು ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವೆ. ಕಳೆದ ಸರ್ಕಾರ ಕೊನೆ ಘಳಿಗೆಯಲ್ಲಿ ನಮಗೆ 2ಡಿ ಮೀಸಲಾತಿ ನೀಡಿತು. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದು ಆದೇಶ ಪತ್ರ ನಮ್ಮ ಕೈ ಸೇರಲೇ ಇಲ್ಲ. ಈಗ ಹೊಸ ಸರ್ಕಾರ ಬಂದಿದೆ. ನಮ್ಮ ಸಮಾಜದ ಶಾಸಕರು, ಸಚಿವರು ಮೀಸಲಾತಿಗಾಗಿ ಮತ್ತೆ ಸಿ ಎಂ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿದ್ದಾರೆ. ಆದರೆ, ಸಿದ್ದರಾಮಯ್ಯನವರು ಬಜೆಟ್ ಅಧಿವೇಶನ ಮುಗಿದ ಮೇ ಲೆ ನಮ್ಮ ಸಮಾಜದ ಮುಖಂಡರ ಸಭೆ ಕರೆಯುವುದಾಗಿ ಹೇಳಿ
ಇಂದಿ ಗೂ ಸಭೆ ಕರೆದಿಲ್ಲ. ಇದರಿಂದಾಗಿ ಮತ್ತೆ ನಾವು ಹೋರಾಟ ಆರಂಭಿಸಿದ್ದೇವೆ. ಈಗಾಗಲೇ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಷ್ಟಲಿಂಗ ಪೂ ಜೆ ಮಾಡುವ ಮೂಲಕ ಸರ್ಕಾರದ ಗಮನಸೆಳೆದಿದ್ದೇವೆ ಎಂದರು.

ಬೆಳಗಾವಿಯಲ್ಲೇ ನಮ್ಮ ಸಮಾಜದ ಮುಖಂಡರ ಸಭೆ ಕರೆದು ಮೀಸ ಲಾತಿ ವಿಚಾರವಾಗಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸಿಎಂ ಅವರ ಮೇಲೆ ಒತ್ತಡ ಹಾಕುತ್ತಿದ್ದೇವೆ.
ಆದರೆ, ಸಿಎಂ ಅವರು ಮತ್ತೆ ಈಗ ಅಧಿವೇಶನ ಮುಗಿದ ಮೇಲೆ ಮಾ ತನಾಡೋಣ ಎನ್ನುತ್ತಿದ್ದಾರೆ. ಇಲ್ಲೇ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಿ ಎಂದು ಪರಿ ಪರಿಯಾಗಿ ಬೇಡಿಕೊಂಡರೂ ಅಧಿವೇಶನ ಮುಗಿದ ಮೇಲೆ ಬೆಂಗಳೂರಿನಲ್ಲಿ ಸಭೆ ಕರೆಯುತ್ತೇನೆ ಎಂದಿದ್ದಾರೆ. ಸಿಎಂ ಅವರ ಈ ನಕಾರಾತ್ಮಕ ಸ್ಪಂದನೆ ವಿರುದ್ಧ ನಾವು ಇದೇ ಡಿ. 13 ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ. ಸಿಎಂ ಅವರ ನಿರ್ಲಕ್ಷ್ಯ ಧೋರಣೆಯಿಂದಾಗಿ ಈ ಹೋರಾಟ ಹಮ್ಮಿಕೊಂಡಿದ್ದೇವೆ. ರಾಣಿ ಚೆನ್ನಮ್ಮ ವೃತ್ತದಿಂದ ಸುವರ್ಣಸೌಧಕ್ಕೆ ನಮ್ಮ ಪ್ರತಿಭಟನೆ ಹೋಗಲಿದೆ. ಸಾಧ್ಯವಾದರೆ ಸುವರ್ಣಸೌಧದ ಮುಂದೆ ಇರುವ ರಾಣಿ ಚೆನ್ನ ಮ್ಮ ಹಾಗೂ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಎದುರು ಧರಣಿ ಸ ಹ ಕುಳಿತುಕೊಳ್ಳಲಿದ್ದೇನೆ ಎಂದರು. ತಮ್ಮದೇ ಸಮುದಾಯದ ಮುಖಂಡರ ಮೇಲೆ ಅಸಮಾಧಾನಗೊಂಡ್ರಾ ಜಮೃತ್ಯುಂಜಯ ಸ್ವಾಮೀಜಿ?

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ತಮ್ಮ ಸಮುದಾಯದ ಮುಖಂಡರನ್ನು ಒಗ್ಗೂಡಿಸಿಕೊಂಡು ಹೋರಾಟ ನಡೆಸಿದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ, ಈಗ ತಮ್ಮದೇ ಸಮುದಾಯದ ಮುಖಂಡರ ಮೇಲೆ ಅಸಮಾಧಾನಗೊಂಡರಾ ಎಂಬ ಪ್ರಶ್ನೆ ಮೂಡಿದೆ.ಸ್ವಾಮೀಜಿ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಜಿ ಆಗಿದ್ದ ನಮ್ಮ ಸಮಾಜದ ಮುಖಂಡರು ತಾವು 24 ಗಂಟೆಯಲ್ಲಿ ಪಂ ಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಕೊಡಿಸುವ ಮಾತುಗಳನ್ ನು ಅತ್ಯಂತ ಹುರುಪಿನಿಂದಲೇ ಆಡಿದ್ದರು. ಆದರೆ, ಈಗ ಅವರು ಮೌನವಾಗಿದ್ದಾರೆ. ಜನ ಈಗ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಮೊದಲಿನಂತೆ ಹುರುಪಿನಿಂದ ಮಾತನಾಡಿ ಎಂದು ಕೇಳುತ್ತಿದ್ದಾರೆ. ಈ ಸಂಬಂಧ ನಮ್ಮ ಸಮುದಾಯದ ಶಾಸಕರ ಸಭೆ ಕರೆದು ಹೇಳಿದ್ದೇ ವೆ ಎಂದರು.

ಮಾಜಿ ಇದ್ದಾಗ ಭಾವನಾತ್ಮಕವಾಗಿ ಮಾತನಾಡಿದ ಮಾತುಗಳನು ನಮ್ಮ ಸಮಾಜದ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಬಸನಗೌಡ ಪಾಟೀಲ ಯತ್ನಾಳ ಅವರು ಅಂದು ಒಂಟಿ ಸಲಗನಂತೆ ಹೋ ರಾಟ ಮಾಡಿದ್ದರು. ಈಗಿನ ಶಾಸಕರೂ ಅವರಂತೆಯೇ ಮೀಸಲಾತಿ ಸಲುವಾಗಿ ಹೋರಾಟ ಮಾಡಬೇಕಿದೆ. ಈಗ ಈ ಹೋರಾಟದ ಜವಾಬ್ದಾರಿಗನ್ನು ವಿನಯ್ ಕುಲಕರ್ಣಿ ತೆ ಗೆದುಕೊಳ್ಳಲಿ ಎಂದು ಯತ್ನಾಳ“ ಹೇಳಿದ್ದಾರೆ. ಮಂತ್ರಿಯಾಗುವ ಕನಸು ಕಾಣಬೇಡ. ಸಮಾಜದ ಜೊತೆ ನೀನು ಇರಬೇಕು ಎಂದು ಯತ್ನಾಳ ಅವರು ವಿನಯ್ ಅವರಿಗೆ ಹೇಳಿದ್ದಾರೆ. ವಿನಯ್ ಅವರು ಕೂಡ ಅಧಿವೇಶನದಲ್ಲಿ ಈ ಸಂಬಂಧ ಮಾತನಾಡುವಾದಾಗಿ ಹೇಳಿದ್ದಾರೆ. ಅವರಿಗೆ ನಮ್ಮ ಸಮಾಜದ ಉಳಿದ ಶಾಸಕರು ಕೂಡ ಧ್ವನಿಗೂಡಿಸವ ಕೆಲಸ ಮಾಡಬೇಕು ಎಂದರು.

Share News

About BigTv News

Check Also

ನಕಲಿ ಔಷಧ ದಂಧೆಯ ಕಿಂಗ್​ಪಿನ್ ಕೊನೆಗೂ ಸೆರೆ: ಅಜರ್ ಬೈಜಾನ್​ನಿಂದ ವಾಪಸಾದ ವೇಳೆ ಏರ್​ಪೋರ್ಟ್​ನಲ್ಲಿ ಪ್ರಶಾಂತ್ ರಂಜನ್​ ಬಾಬು ಬಂಧನ…

ನಕಲಿ ಔಷಧ ದಂಧೆಗೆ ಬಿಗ್ ಶಾಕ್..! ಕಿಂಗ್‌ಪಿನ್‌ ಪ್ರಶಾಂತ್ ರಂಜನ್ ಬಾಬು ಏರ್‌ಪೋರ್ಟ್‌ನಲ್ಲೇ ಬಂಧನ..! ರಾಮನಗರದ ದೊಡ್ಡೇರಿ ಫಾರ್ಮ್‌ಹೌಸ್‌ನಲ್ಲಿ ಪತ್ತೆಯಾದ …

Leave a Reply

Your email address will not be published. Required fields are marked *