Breaking News

ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್‌ಗೆ ಎಂಪಿ ಟಿಕೆಟ್‌ ಕೊಡುವ ಆಫರ್‌…

ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಮೂರು ಪಕ್ಷಗಳಿಂದಲೂ ಈಗಿನಿಂದಲೇ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇನ್ನು ಕಾಂಗ್ರೆಸ್‌ನಿಂದ ಡಿಸಿಎಂ ಡಿ.ಕೆ.ಶಿವಕುಮಾರ್‌ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು (ಡಿಸೆಂಬರ್‌ 10) ಹಮ್ಮಿಕೊಂಡಿದ್ದ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್‌ಗೆ ಎಂಪಿ ಟಿಕೆಟ್‌ ಕೊಡುವ ಆಫರ್‌ ನೀಡಿದರು.

ಅರಮನೆ ಮೈದಾನದಲ್ಲಿ ಇಂದು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ ಹಾಗೂ ಈಡಿಗ ಮತ್ತು 25 ಪಂಗಡಗಳ ಬೃಹತ್ ಜಾಗೃತ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್‌ ಅವರು ಮಾತನಾಡಿ, ನೀನು ರೆಡಿಯಾಗಪ್ಪ ಪಾರ್ಲಿಮೆಂಟ್‌ಗೆ ನಿಂತುಕೊಳ್ಳೋಕೆ, ಎಲ್ಲಿ ಬೇಕೋ ಅಲ್ಲಿ ಸೀಟ್‌ ಕೋಡಿಸುತ್ತೇನೆ ಎಂದು ನಟ ಶಿವರಾಜ್‌ಕುಮಾರ್‌ಗೆ ಆಫರ್‌ ನೀಡಿದ್ದಾರೆ.

ಆದರೆ ಅವರು 5, 6 ಸಿನಿಮಾ ಒಪ್ಪಿಕೊಂಡಿದ್ದೇನೆ ಅಂದ್ರು. ಸಿನಿಮಾ ಯಾವತ್ತು ಬೇಕಾದ ಮಾಡಬಹುದು. ಆದ್ರೆ ಪಾರ್ಲಿಮೆಂಟ್‌ಗೆ ಹೋಗೋದು ಯಾರ್ಗೂ ಯೋಗ ಬರೋದಿಲ್ಲ. ಆ ಯೋಗ ಮನೆಗೆ ಬಂದಿಗೆ, ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ನಮ್ಮ ಸರ್ಕಾರ ನಿಮ್ಮ ಜೊತೆ ಇದೆ ನೀವು ಯಾವಾಗ್ಲೂ ನಮ್ಮ ಜೊತೆ ಇರಬೇಕು ಎಂದು ಹೇಳಿದರು.

Share News

About BigTv News

Check Also

ಇನ್ಸ್‌ಪೆಕ್ಟರ್ ಪೋಲಿ ಮಾತು ವೈರಲ್! ರಾಸಲೀಲೆ ಆರೋಪ ಸದ್ದು!

ಯಶು ಬೇಬಿ ಆಡಿಯೋ ಲೀಕ್! ಇನ್ಸ್‌ಪೆಕ್ಟರ್ ಪೋಲಿ ಮಾತು ವೈರಲ್.. ಯಶು ಬೇಬಿ ಆಡಿಯೋ ಲೀಕ್! ಖಾಕಿ ಮೇಲೆ ಕಪ್ಪು …

Leave a Reply

Your email address will not be published. Required fields are marked *