ಸರ್ಕಾರಿ ಶಾಲೆಯಲ್ಲಿ ಓದಿದವರಿಗೆ ಹೆಚ್ಚು ಸಂಬಳ ಸಿಗುವ ನೌಕರಿ ಸಿಗುವುದಿಲ್ಲ ಎಂದು ಪೋಷಕರು ಮಕ್ಕಳನ್ನು ಇಂಗ್ಲೀಷ್ ಮೀಡಿಯಂನಲ್ಲಿ ಲಕ್ಷ ಲಕ್ಷ ಶುಲ್ಕ ನೀಡಿ ಓದಿಸುತ್ತಾರೆ. ಸರ್ಕಾರಿ ಶಾಲೆ ಎಂದರೆ ಮೂಗು ಮುರಿದು ಮುಂದೆ ಸಾಗುವವರೇ ಹೆಚ್ಚಾಗಿದ್ದಾರೆ. ಆದರೆ ಇಲ್ಲೊಬ್ಬಳು ಸರ್ಕಾರಿ ಶಾಲೆಯಲ್ಲಿ ಓದಿ ಸಾಫ್ಟ್‌ವೇರ್ ಕಂಪನಿಯಲ್ಲಿ ಯಾರು ಊಹಿಸದ ವೇತನಕ್ಕೆ ಆಯ್ಕೆಯಾಗಿದ್ದಾಳೆ.
ಹರಿಯಾಣದ ಫತೇಹಾಬಾದ್‌ನ ಕಾಜಲ್ ಎಂಬಾಕೆ ಈಗ ಮೈಕ್ರೋಸಾಫ್ಟ್‌ನಲ್ಲಿ ನೌಕರಿ ಗಿಟ್ಟಿಸಿದ್ದು ಆಕೆಗೆ ವಾರ್ಷಿಕವಾಗಿ ಕಂಪನಿ 31 ಲಕ್ಷ ರೂ.ಗಳ ಆಕರ್ಷಕ ವೇತನ ನೀಡಲು ಮುಂದಾಗಿದೆ. ನಾಲ್ಕು ವರ್ಷಗಳಲ್ಲಿ ಅವರ ಪಟ್ಟುಬಿಡದ ಬದ್ಧತೆಯು ಐಐಟಿ ಬಾಂಬೆಯಲ್ಲಿ ಓದು ಮುಗಿಸಿದ್ದ ಆಕೆ ಈ 25 ವರ್ಷದ ಅವಧಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿ ಮೈಕ್ರೋಸಾಫ್ಟ್‌ಗೆ ಆಯ್ಕೆಯಾದ ಮೊದಲ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ.ಕಾಜಲ್ ತಾಯಿ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಆಕೆಯ ತಂದೆ ಟಾಟಾ ಸ್ಟೀಲ್‌ನಲ್ಲಿ ಉದ್ಯೋಗಿಯಾಗಿದ್ದಾರೆ. ಕಾಜಲ್ ತಾಯಿಗೆ ಮಗಳನ್ನು ದೊಡ್ಡ ಹುದ್ದೆಯಲ್ಲಿ ನೋಡುವ ಕನಸಿತ್ತು. ಹೀಗಾಗಿ ಆರಂಭಿಕ ಶಿಕ್ಷಣ ಸರ್ಕಾರಿ ಶಾಲೆಯಲ್ಲಿಯೇ ಕೊಡಿಸಿದ್ದರು. ಬಳಿಕ ಕಷ್ಟ ಪಟ್ಟಿ ಆಕೆ ಐಐಟಿ ಬಾಂಬೆಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಹಗಲು ರಾತ್ರಿ ಓದು ಮುಂದುವರೆಸಿದ್ದಳು.
bigtvnews | Hubli Dharwad News | Kannada News | Karnataka News Hubli News | News In Hubli | Local news





