Breaking News

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಊದಿನೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ವಿಶಿಷ್ಟ ಕಾರಣ ಗಳಿಗಾಗಿ ಸುದ್ದಿ….

ಮಂಗಳೂರು: ಈ ಶಾಲೆಯ ಮಕ್ಕಳಿಗೆ ಬಸ್ ವ್ಯವಸ್ಥೆಯ ಅನಿವಾರ್ಯತೆಯಿಲ್ಲ, ಟ್ರಾಫಿಕ್ ಜಾಮ್‌ನಲ್ಲಿ ಸಿಲುಕುವ ಟೆನ್ಷನ್ ಇಲ್ಲ. ಈ ಶಾಲೆಯ ಮಕ್ಕಳೆಲ್ಲಾ ಸಾರಿಗೆಗಾಗಿ ನೆಚ್ಚಿಕೊಂಡಿರೋದು ತಮ್ಮ ಸೈಕಲ್‌ಗಳನ್ನು ಮಾತ್ರ. ಕೇರಳದ ಸೈಕಲ್ ಶಾಲೆ ಎಂದೇ ಗುರುತಿಸಲ್ಪಟ್ಟಿರುವ ಈ ಶಾಲೆಯು ಇಕೋ ಫ್ರೆಂಡ್ಲಿ ಶಾಲೆಯಾಗಿಯೂ ಮಾರ್ಪಟ್ಟಿದೆ.
ಇದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಊದಿನೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ. ಈ ಶಾಲೆಯ ವಿದ್ಯಾರ್ಥಿಗಳು ವಿಶಿಷ್ಟ ಕಾರಣ ಗಳಿಗಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಾಗುತ್ತಿದ್ದಾರೆ. ಈ ಶಾಲೆಗೆ ಬರುವ ಬಹುತೇಕ ವಿದ್ಯಾರ್ಥಿಗಳು ಸೈಕಲ್ ಏರಿ ಶಾಲೆಗೆ ಬರುವ ಕಾರಣ ಬೆಳಗ್ಗೆ ಹಾಗೂ ಶಾಲೆ ಬಿಡುವ ಸಂಜೆ ಅವಧಿಯಲ್ಲಿ ಇಡೀ ಊರಿಗೆ ಊರೇ ಸೈಕಲ್‌ ಮಯವಾಗುತ್ತಿದೆ.

ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ ಈ ಹಿಂದೆ ರಾಜ್ಯದ ಎಲ್ಲಾ ಶಾಲೆಯ ವಿದ್ಯಾರ್ಥಿಗಳಿಗೆ ಸೈಕಲ್ ನೀಡುವ ಯೋಜನೆಯನ್ನು ಜಾರಿಗೆ ತಂದಿತ್ತು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅತ್ಯಂತ ಸಹಕಾರಿಯಾಗಿದ್ದ ಈ ಯೋಜನೆ ಬಳಿಕದ ದಿನಗಳಲ್ಲಿ ನಿಂತು ಹೋಗಿತ್ತು. ಸರಕಾರ ನೀಡುತ್ತಿದ್ದ ಈ ಸೈಕಲ್ ಯೋಜನೆ ಎಷ್ಟು ಪ್ರಮಾಣದಲ್ಲಿ ಉಪಯೋಗಿಯಾಗಿತ್ತೋ, ಅದರಷ್ಟೇ ದುರುಪಯೋಗವೂ ಆಗಿತ್ತು. ಆದರೆ ಈ ಶಾಲೆಯ ಮಕ್ಕಳಿಗೆ ಸರಕಾರದಿಂದ ಸೈಕಲ್ ಪೂರೈಕೆಯಾಗುತ್ತಿಲ್ಲ. ಆದರೂ ಈ ಶಾಲೆಯ ಸುಮಾರು 90 ಶೇಕಡಾ ಮಕ್ಕಳು ಸೈಕಲ್‌ನಲ್ಲೇ ಶಾಲೆಗೆ ಬರೋದು ಇಲ್ಲಿನ ವಿಶೇಷತೆಯಾಗಿದೆ.

Share News

About BigTv News

Check Also

ಸಿವಿಲ್ ವ್ಯಾಜ್ಯದಲ್ಲಿ ಖಾಕಿ ದರ್ಬಾರ್‌ಗೆ ಹೈಕೋರ್ಟ್ ಬ್ರೇಕ್..! ಅಧಿಕಾರ ಮೀರಿದರೆ ಪೊಲೀಸರಿಗೇ ಶಿಸ್ತು ಕ್ರಮದ ಬಿಸಿ..!!

ಆಸ್ತಿ ವ್ಯಾಜ್ಯದಲ್ಲಿ ಪೊಲೀಸರ ಆಟಕ್ಕೆ ಕಡಿವಾಣ..! ಸುತ್ತೋಲೆ ಉಲ್ಲಂಘಿಸಿದರೆ ಅಧಿಕಾರಿಗಳೇ ನೇರ ಹೊಣೆ — ಇಲಾಖೆಯ ಖಡಕ್ ವಾರ್ನಿಂಗ್..! ಸಿವಿಲ್ …

Leave a Reply

Your email address will not be published. Required fields are marked *