Breaking News

ಕಮಲ ಅರಳಲಿದೆ, ಕಾಂಗ್ರೆಸ್‌ ಮುಳಗಲಿದೆ ಎಂದು ರಾಜ್ಯ ಬಿಜೆಪಿ ಟ್ವೀಟ್‌ ಮೂಲಕ ಭವಿಷ್ಯ…

ಬೆಂಗಳೂರು: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದಾಖಲೆಯ ಬಹುಮತದೊಂದಿಗೆ ಮಗದೊಮ್ಮೆ ವಿರಾಜಮಾನರಾಗಿ ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ದುಡಿಯುವುದು ಶತಸಿದ್ಧ. ಕಮಲ ಅರಳಲಿದೆ, ಕಾಂಗ್ರೆಸ್‌ ಮುಳಗಲಿದೆ ಎಂದು ರಾಜ್ಯ ಬಿಜೆಪಿ ಟ್ವೀಟ್‌ ಮೂಲಕ ಭವಿಷ್ಯ ನುಡಿದಿದೆ. ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ರಾಜ್ಯದ ಅಭಿವೃದ್ಧಿಯನ್ನೇ ಯೋಚಿಸದೆ ಅರಾಜಕತೆ ಸೃಷ್ಟಿಸಿ ಸಮಸ್ಯೆಗಳ ಸಾಗರವನ್ನೇ ಹುಟ್ಟು ಹಾಕಿ ಎಲ್ಲಾ ವರ್ಗದ ಜನರಿಂದ ಜನಾಕ್ರೋಶ ಎದುರಿಸುತ್ತಿದೆ. ಜನರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿರುವ ಸಿದ್ದರಾಮಯ್ಯರವರಿಗೆ ತಮ್ಮ ದುರಾಡಳಿತದಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲು ಖಚಿತವಾಗುತ್ತಿದ್ದಂತೆಯೇ ದೆಹಲಿಗೆ ಓಡಿ ಹೋಗಿ ಸಮಸ್ಯೆಗಳನ್ನು ಬದಿಗೊತ್ತಿ ಈಗ ವಿಷಯಾಂತರಕ್ಕೆ ಕೈ ಹಾಕಿರುವುದು ಮತಿಗೇಡಿತನ. ಸಿದ್ದರಾಮಯ್ಯರವರೇ, ತಾವು ಎಷ್ಟೇ ಸುಳ್ಳಿನ ಸರಪಳಿಯನ್ನು ಸೃಷ್ಟಿಸಿದರೂ ನಾಡಿನ ಜನ ನಂಬುವುದಿಲ್ಲ ಎಂದು ಬಿಜೆಪಿ ಹೇಳಿದೆ.

Share News

About BigTv News

Check Also

ಪೊಲೀಸ್ ಸಮವಸ್ತ್ರದಲ್ಲಿ ರೀಲ್ಸ್, ಫೋಟೋಶೂಟ್ ಪೋಸ್ಟ್‌ಗೆ ಬ್ರೇಕ್..? ಡಿಜಿಪಿಗೆ ಶಿಫಾರಸು ಪತ್ರ..

ಪೊಲೀಸ್ ಸಮವಸ್ತ್ರದಲ್ಲಿ ರೀಲ್ಸ್ ಬೇಡ..! ಖಾಕಿಯ ಘನತೆ ಉಳಿಸಲು ಕಠಿಣ ನಿಯಮಕ್ಕೆ ಶಿಫಾರಸು… ಬೆಂಗಳೂರು: ಪೊಲೀಸ್ ಸಮವಸ್ತ್ರ ಧರಿಸಿ ರೀಲ್ಸ್, …

Leave a Reply

Your email address will not be published. Required fields are marked *