ಡಿಸೆಂಬರ್ ತಿಂಗಳು ಕನ್ನಡ ಚಿತ್ರರಂಗಕ್ಕೆ ಅಶುಭ ಅನ್ನೋದು ಮತ್ತೊಮ್ಮೆ ಸಾಬೀತಾಗುತ್ತಿದೆ. ಇತ್ತೀಚೆಗೆ ಹಿರಿಯ ನಟಿ ಲೀಲಾವತಿ ಅಪಾರ ಅಭಿಮಾನಿಗಳನ್ನು ಅಗಲಿದ್ದರು. ಇನ್ನೇನು ಸಿನಿಪ್ರೇಮಿಗಳು ಆ ನೋವನ್ನು ಮರೆಯಲು ಯತ್ನಿಸುತ್ತಿರುವಾಗಲೇ ಮತ್ತೊಂದು ಶಾಕಿಂಗ್ ನ್ಯೂಸ್ ಬಂದಿದೆ.
ಕನ್ನಡ ಸೇರಿದಂತೆ ಹಲವು ಭಾಷೆಯ ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡಿದ್ದ ಜನಪ್ರಿಯ ಸ್ಟಂಟ್ ಡೈರೆಕ್ಟರ್ ಜಾಲಿ ಬಾಸ್ಟಿನ್ ನಿಧನರಾಗಿದ್ದಾರೆ. ಮಂಗಳವಾರ (ಡಿಸೆಂಬರ್ 26)ಹೃದಯಾಘಾತದಿಂದ ಜಾಲಿ ಬಾಸ್ಟಿನ್ ನಿಧನರಾಗಿದ್ದಾರೆ. 57 ವರ್ಷ ಜಾಲಿ ಬಾಸ್ಟಿನ್ ಕನ್ನಡದ ಹಲವು ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ಇವರ ಹಠಾತ್ ನಿಧನ ಚಿತ್ರರಂಗಕ್ಕೆ ಶಾಕ್ ಆಗಿದೆ.ಜಾಲಿ ಬಾಸ್ಟಿನ್ ಸುಮಾರು 850ಕ್ಕೂ ಅಧಿಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಬೈಕ್ ಮೆಕಾನಿಕ್ ಆಗಿದ್ದ ಜಾಲಿ ಬಾಸ್ಟಿನ್ ಬೈಕ್ ಸ್ಟಂಟ್‌ಗಳನ್ನು ಮಾಡುವುದಕ್ಕೆ ನಿಸ್ಸೀಮರಾಗಿದ್ದರು. ಮೂಲತ: ಕೇರಳದ ಅಲೆಪ್ಪೆಯವರಾದ ಜಾಲಿ ಬಾಸ್ಟಿನ್ 1966ರಲ್ಲಿ ಜನಿಸಿದ್ದರು. ಕೇರಳದಲ್ಲಿ ಜನಿಸಿದರೂ, ಬೆಳೆದಿದ್ದು ಬೆಂಗಳೂರಿನಲ್ಲಿಯೇ.
bigtvnews | Hubli Dharwad News | Kannada News | Karnataka News Hubli News | News In Hubli | Local news





