ಮುಂದಿನ ವರ್ಷ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಪಾಕಿಸ್ತಾನ ಇಸ್ಲಾಂ ರಾಷ್ಟ್ರ ಅಂತ ಈಗಾಗ್ಲೆ ಘೋಷಿಸಿಕೊಂಡಿದೆ. ಆದರೆ ಅಲ್ಲಿಯೂ ಹಿಂದೂ ಜನಾಂಗ ವಾಸವಿದೆ. ಇದೀಗ ಇದೇ ಮೊದಲ ಬಾರಿಗೆ ಹಿಂದೂ ಮಹಿಳೆಯೊಬ್ಬರು ಅಲ್ಲಿನ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಪಾಕಿಸ್ತಾನದಲ್ಲಿ ಮಾತ್ರವಲ್ಲ ಭಾರತದಲ್ಲೂ ಅವರು ಸದ್ದು ಮಾಡ್ತಿದ್ದಾರೆ. ಫೆಬ್ರವರಿ 8, 2024 ರಂದು ಅಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಅಭ್ಯರ್ಥಿಗಳ ನಡುವೆ ಭಾರೀ ಪೈಪೋಟಿ ಇದೆ. ಇತ್ತ ಭಾರತಲ್ಲೂ ಈ ಚುನಾವಣೆ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ. ಹಿಂದೂ ಮಹಿಳೆಯೊಬ್ಬರು ಅಲ್ಲಿನ ಸಾರ್ವತ್ರಿಕ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಅವರೇ ಸವೇರಾ ಪ್ರಕಾಶ್.
ಇದೆ ಮೊದಲ ಬಾರಿಗೆ ಖೈಬರ್-ಪಖ್ತುಂಖ್ವಾ ಕ್ಷೇತ್ರದಿಂದ ಹಿಂದೂ ಮಹಿಳೆಯೊಬ್ಬರು ನಾಮಪತ್ರ ಸಲ್ಲಿಸಿದ್ದಾರೆ. 25 ವರ್ಷದ ಡಾ.ಸವೇರಾ ಪ್ರಕಾಶ್ ಅವರಿಗೆ ಬಿಲಾವಲ್ ಭುಟ್ಟೋ ಜರ್ದಾರಿ ಅವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಖೈಬರ್ ಪಖ್ತುಂಖ್ವಾ ಪ್ರಾಂತ್ಯದಿಂದ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡಿದೆ. ಸವೇರಾ ಬುನೇರ್ ಜಿಲ್ಲೆಯಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಅವರ ತಂದೆ ಓಂ ಪ್ರಕಾಶ್ ಈ ಕುರಿತು ಸಂತಸ ಹಂಚಿಕೊಂಡಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news





