Breaking News

ಸಚಿವ ಪ್ರಲ್ಹಾದ್‌ ಜೋಶಿ ಕರೆದ ಸಭೆಗೆ ಜಗದೀಶ್‌ ಶೆಟ್ಟರ್‌ ಸಹೋದರ ಹಾಗೂ ಆಪ್ತ ಗೈರಾಗಿದ್ದಾರೆ….

ಹುಬ್ಬಳ್ಳಿ: ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿ ಹಿರಿಯ ನಾಯಕರೇ ಸ್ವಪಕ್ಷದ ನಾಯಕರ ವಿರುದ್ಧ ಬುಸುಗುಡುತ್ತಿದ್ದಾರೆ. ಕಳೆದ ಚುನಾವಣೆ ವೇಳೆ ಪಕ್ಷದಲ್ಲಿ ಹುಟ್ಟಿಕೊಂಡ ಅಸಮಾಧಾನ ಹಾಗೂ ಭಿನ್ನಮತ ಮತ್ತೆ ಮುಂದುವರೆದಿದ್ದು, ಭಿನ್ನಮತ ಶಮನಕ್ಕೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಕರೆದ ಸಭೆಗೆ ಜಗದೀಶ್‌ ಶೆಟ್ಟರ್‌ ಸಹೋದರ ಹಾಗೂ ಆಪ್ತ ಗೈರಾಗಿದ್ದಾರೆ.

ಒಂದು ಕಾಲದಲ್ಲಿ ಹುಬ್ಬಳ್ಳಿ-ಧಾರವಾಡ ಬಿಜೆಪಿಯ ಭದ್ರಕೋಟೆಯಾಗಿತ್ತು. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದೇ ಸೇರಿದ್ದು ಹುಬ್ಬಳ್ಳಿ-ಧಾರವಾಡ ಬಿಜೆಪಿಯ ಕೋಟೆ ಒಡೆದ ಮನೆಯಂತಾಗಿದೆ. ಲೋಕಸಭೆ ಚುನಾವಣೆಗೆ ಶೆಟ್ಟರ್ ದಾಳ ಉರುಳಿಸಿದ್ದು, ಬಿಜೆಪಿಯಲ್ಲಿ ಇನ್ನೂ ಮುನಿಸು ಮರೆಯಾಗಿಲ್ಲ. ಮಂಗಳವಾರ ಜೋಶಿ ಕರೆದ ಸಭೆಗೆ ಟ್ಟರ್ ಆಪ್ತ ಹಾಗೂ ಮಾಜಿ ಸಚಿವ ಮುನೇನಕೊಪ್ಪ ಹಾಗೂ ಪ್ರದೀಪ್‌ ಶೆಟ್ಟರ್‌ ಗೈರಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ಹಿಂದೆ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್ ಆಪ್ತ ಹಾಗೂ ಮಾಜಿ ಸಚಿವ ಮುನೇನಕೊಪ್ಪ ಸ್ವಪಕ್ಷ ಬಿಜೆಪಿ ವಿರುದ್ಧ ಕೆಂಡಕಾರಿದ್ದರು. ಅಷ್ಟೇ ಅಲ್ಲ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್ ಬಿಜೆಪಿ ವಿರುದ್ಧ ನೇರವಾಗಿ ಅಸಮಾಧಾನ ಹೊರಹಾಕಿದ್ದರು. ಇದೀಗ ಈ ಮುನಿಸನ್ನ ಶಮನಗೊಳಿಸಿ ಲೋಕಸಭಾ ಚುನಾವಣೆಗೆ ತಯಾರಿ ನಡೆಸುವ ಉದ್ದೇಶದಿಂದಾಗಿ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಮಹತ್ವದ ಕೋರ್ ಕಮಿಟಿ ಸಭೆ ಕರೆದಿದ್ದು, ಸಭೆಗೆ ಗೈರಾಗುವ ಮೂಲಕ ಬಿಜೆಪಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

Share News

About BigTv News

Check Also

ಎನಿ ಕಂಡೀಶನ್… ಹುಬ್ಬಳ್ಳಿಗೆ ನಾಳೆ ನೂತನ ಕಮಿಷನರ್ ಎಂಟ್ರಿ! ಬೆಳಗ್ಗೆಯೇ ಅಧಿಕಾರ ಸ್ವೀಕಾರ…!

ಭೂಷಣ್ ಬೋರ್ಸೆ ಹೆಗಲಿಗೆ ಅವಳಿ ನಗರದ ಖಾಕಿ ಹೊಣೆ! ನಾಳೆಯಿಂದ ಹುಬ್ಬಳ್ಳಿ–ಧಾರವಾಡಕ್ಕೆ ಹೊಸ ಕಮಿಷನರ್! ಹುಬ್ಬಳ್ಳಿಗೆ ನಾಳೆ ನೂತನ ಕಮಿಷನರ್ …

Leave a Reply

Your email address will not be published. Required fields are marked *