ಜನಪ್ರಿಯ ನಾಯಕ ಮತ್ತು ರಾಜಕಾರಣಿ ಕ್ಯಾಪ್ಟನ್ ವಿಜಯಕಾಂತ್ ಅವರ ಅಗಲಿಕೆ ಇಡೀ ಚಿತ್ರರಂಗ ಮತ್ತು ತಮಿಳುನಾಡಿನ ರಾಜಕೀಯಕ್ಕೆ ಒಂದು ತುಂಬಲಾರದ ನಷ್ಟ. ನಟನಿಗೆ ಶ್ರದ್ಧಾಂಜಲಿ ಅರ್ಪಿಸಲು ಶುಕ್ರವಾರ ಚೆನ್ನೈನ ಮರೀನಾ ಬೀಚ್ ಬಳಿಯ ಐಲ್ಯಾಂಡ್ ಮೈದಾನದಲ್ಲಿ ಅಭಿಮಾನಿಗಳ ಸಾಗರವೇ ನೆರೆದಿತ್ತು. ವಿಜಯಕಾಂತ್ ಅವರು ಪತ್ನಿ ಪ್ರೇಮಲತಾ, ಪುತ್ರರಾದ ವಿಜಯ ಪ್ರಭಾಕರನ್ ಮತ್ತು ಷಣ್ಮುಗ ಪಾಂಡಿಯನ್ ಅವರನ್ನು ಅಗಲಿದ್ದಾರೆ.
ಸೂಪರ್‌ಸ್ಟಾರ್ ರಜನಿಕಾಂತ್, ವಿಜಯ್, ಕಮಲ್ ಹಾಸನ್, ಮನ್ಸೂರ್ ಅಲಿ ಖಾನ್ ಸೇರಿದಂತೆ ಚಿತ್ರರಂಗದ ಗಣ್ಯರು ನಟ. ರಾಜಕಾರಣಿ ಕ್ಯಾಪ್ಟನ್ ವಿಜಯಕಾಂತ್ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಈ ವೇಳೆ ವಿಜಯಕಾಂತ್ ಅವರ ಕುಟುಂಬಸ್ಥರಿಗೆ ನಟ ರಜನಿಕಾಂತ್ ಸಮಾಧಾನ ಹೇಳಿದ್ದಾರೆ. ಇನ್ನು, ಇಲ್ಲಿನ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ. ನಟ ರಜನಿಕಾಂತ್ ಸದ್ಯಕ್ಕೆ ‘ವೆಟ್ಟೈಯನ್’ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಜೈ ಭೀಮ್ ಖ್ಯಾತಿಯ ನಿರ್ದೇಶಕ ಜೆ ಜ್ಞಾನವೇಲ್ ಅವರ ಜೊತೆಯಲ್ಲಿ ಸಿನಿಮಾ ಮಾಡುತ್ತಿದ್ದು, ವಿಜಯಕಾಂತ್ ಅವರ ನಿಧನದ ಹಿನ್ನೆಲೆಯಲ್ಲಿ ಚಿತ್ರೀಕರಣ ನಿಲ್ಲಿಸಲಾಗಿದೆ. ಶೂಟಿಂಗ್ ಕ್ಯಾನ್ಸಲ್ ಮಾಡಿ ಅಂತಿಮ ದರ್ಶನಕ್ಕೆ ಭಾಗಿಯಾಗಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





