Breaking News

ವರ್ಷಾಂತದ ಹಿನ್ನಲೆ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ…

ಬೆಂಗಳೂರು: ವರ್ಷಾಂತದ ಹಿನ್ನಲೆ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಒಂದೇ ದಿನದಲ್ಲಿ ಲಕ್ಷಾಂತರ ಜನ ಮೆಟ್ರೋದಲ್ಲಿ ಸಂಚಾರ ಮಾಡಿದ್ದಾರೆ. ನಿನ್ನೆ ಒಂದೇ ದಿನ ಅಂದರೆ ಡಿಸೆಂಬರ್ 31ರಂದು ತಡರಾತ್ರಿಯವರಿಗೆ ಮೆಟ್ರೋದಲ್ಲಿ 6,26,202 ಜನ ಸಂಚಾರ ಮಾಡಿದ್ದಾರೆ. ಹೊಸ ವರ್ಷದ ಹಿನ್ನಲೆ ತಡರಾತ್ರಿ 2.15ರವರೆಗೆ ನಮ್ಮ ಮೆಟ್ರೋ ಸಂಚಾರ ಮಾಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನ ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಎಂಜಿ ರೋಡ್ ಮೆಟ್ರೋ ಮಾರ್ಗದಲ್ಲಿ ಹೆಚ್ಚು ಜನ ಸಂಚಾರ ಮಾಡಿದ್ದಾರೆ. ಇಂದಿರಾ ನಗರ ಸೇರಿದಂತೆ ನಗರದ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ನಗರದ ಹೃದಯ ಭಾಗ ಮೆಜೆಸ್ಟಿಕ್ ನಿಂದಲೂ ಹೆಚ್ಚು ಜನ ಸಂಚಾರ ಮಾಡಿದ್ದಾರೆ.

ಹೊಸ ವರ್ಷ ನಮ್ಮ ಮೆಟ್ರೋ ಸಮಯ ವಿಸ್ತರಣೆ ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್‌ ರೋಡ್‌, ಚರ್ಚ್‌ ಸ್ಟ್ರೀಟ್‌ ಸೇರಿದಂತೆ ಇನ್ನು ಹಲವೆಡೆ ಡಿಸೆಂಬರ್‌ 31ರ ರಾತ್ರಿ ಜನ ಹೊಸ ವರ್ಷದ ಸಂಭ್ರಾಮಾಚರಣೆಗೆ ಸೇರುತ್ತಾರೆ. ಆದ್ದರಿಂದ ಈ ಮಾರ್ಗಗಳಲ್ಲಿ ಮೆಟ್ರೋ, ಹೆಚ್ಚುವರಿ ಬಿಎಂಟಿಸಿ ಬಸ್‌ಗಳ ವ್ಯವಸ್ಥೆಯನ್ನು ಸಹ ಮಾಡಲಾಗುತ್ತದೆ. ಹಾಗೆಯೇ ಹೊಸ ವರ್ಷದ ಸಂಭ್ರಮಾಚರಣೆಗೆ ಅನುಕೂಲವಾಗುವಂತೆ ಡಿಸೆಂಬರ್‌ 31ರ ರಾತ್ರಿ ಮೆಟ್ರೋ ರೈಲು ಸಂಚಾರವನ್ನು ರಾತ್ರಿ 2 ಗಂಟೆಯವರೆಗೆ ವಿಸ್ತರಣೆ ಮಾಡಲಾಗಿತ್ತು.

Share News

About BigTv News

Check Also

ಧಾರವಾಡನಲ್ಲಿ ಪ್ರತಿಭಟನೆಯ ಬೆನ್ನಲ್ಲೇ 24 ಸಾವಿರ ಹುದ್ದೆಗಳಿಗೆ ಮಂಜೂರಾತಿ…

ಬೆಂಗಳೂರು : ಕರ್ನಾಟಕದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ Dharwadನಲ್ಲಿ ಯುವಕರ ಪ್ರತಿಭಟನೆ ಜೋರಾಗುತ್ತಿದ್ದಂತೆಯೇ ರಾಜ್ಯ …

Leave a Reply

Your email address will not be published. Required fields are marked *