Breaking News

ಬಿಜೆಪಿಗೆ ಜಗದೀಶ ಶೆಟ್ಟರ ಸೇರಿದ್ದು ಖುಷಿ: ಲಾಡ್‌..

ಜಗದೀಶ ಶೆಟ್ಟರ ಅವರು ಬಿಜೆಪಿ ಸೇರಿದ್ದು ವೈಯಕ್ತಿಕವಾಗಿ ಬಹಳ ಖುಷಿಯಾಗಿದೆ. ಯಾಕೆ ಕಾಂಗ್ರೆಸ್‌ಗೆ ಬಂದರು, ಬಿಜೆಪಿಗೆ ಯಾಕೆ ವಾಪಸ್‌ ಹೋದರು ಎಂದು ಅವರನ್ನೇ ಕೇಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಪ್ರತಿಕ್ರಿಯಿಸಿದರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ತೊರೆದಾಗ ಏನೋ ಹೇಳಿದ್ದರು, ಈಗ ವಾಪಸ್‌ ಹೋಗುವಾಗ ಏನು ಹೇಳುತ್ತಾರೆ.

ರಾಜಕಾರಣದಲಿ ಇದೆಲ್ಲ ಸಾಮಾನ್ಯ’ ಎಂದು ಹೇಳಿದರು.

‘ಕಾಂಗ್ರೆಸ್‌ ಅವರಿಗೆ ಗೌರವ ನೀಡಿ, ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಿತ್ತು. ಪಕ್ಷದ ಎಲ್ಲ ಸಭೆಗಳಲ್ಲಿ ಹಿರಿಯರ ಜೊತೆ ಕುಳಿತುಕೊಳ್ಳುವ ಅವಕಾಶ ನೀಡಲಾಗಿತ್ತು. ಅವರು ಈಗ ದಿಢೀರಾಗಿ ಬಿಜೆಪಿಗೆ ವಾಪಸಾಗಿರುವುದು ನನಗೆ ಬಹಳ ಸಂತೋಷವಾಗಿದೆ’ ಎಂದು ಮತ್ತೆ ಹೇಳಿದರು.

‘ಜಗದೀಶ ಶೆಟ್ಟರ ಅವರು ಬಿಜೆಪಿ ಸೇರುತ್ತಾರೆ ಅಂಥಾ ‘ಹೊಗೆ’ ಇತ್ತು. ಅವರು ಪಕ್ಷ ತೊರೆದಿರುವುದರಿಂದ ಕಾಂಗ್ರೆಸ್‌ಗೆ ನಷ್ಟ ಇಲ್ಲ. ಕಾಂಗ್ರೆಸ್‌ ಬಾಗಿಲು ಇಲ್ಲದ ಪಕ್ಷ, ಸಿಟಿ ಬಸ್‌ ಇದ್ದಂತೆ ಯಾರು ಬೇಕಾದರೂ ಹತ್ತಬಹುದು, ಎಲ್ಲಿಗೆ ಬೇಕಾದರೂ ಹೋಗಬಹುದು’ ಎಂದು ಉತ್ತರಿಸಿದರು.

‘ಮುಂದಿನ ದಿನಗಳಲ್ಲಿ ಕೆಲವು ಶಾಸಕರು ಕಾಂಗ್ರೆಸ್‌ ಪಕ್ಷ ಸೇರಲಿದ್ಧಾರೆ. ಕಾಲ ಬಂದಾಗ ಯಾರು ಸೇರಲಿದ್ದಾರೆ ಎಂಬುದು ಹೇಳುತ್ತೇವೆ’ ಎಂದರು.

Share News

About Shaikh BigTv

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *