Breaking News

ಕರ್ಕಶ ಶಬ್ದ ಮಾಡುವ ಬೈಕ್ ಗಳಿಗೆ ಬಿಸಿ: ಸೈಲೆನ್ಸರ್ ವಶಕ್ಕೆ ಪಡೆದ ಹುಬ್ಬಳ್ಳಿ ಪೊಲೀಸರು..

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಈಗ ಶಬ್ದ ಮಾಲಿನ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದೆ. ಬೈಕ್ ಮೂಲಕ ಕರ್ಕಶ ಶಬ್ದ ಮಾಡಿ ಅವಳಿನಗರದಲ್ಲಿ ಶಬ್ದ ಮಾಲಿನ್ಯ ಮಾಡುವ ಬೈಕ್ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ.

ಹೌದು.. ಡಿಸಿಪಿ ಟ್ರಾಫಿಕ್ ಆ್ಯಂಡ್ ಕ್ರೈಮ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಕರ್ಕಶ ಶಬ್ದ ಮಾಡುವ ಬೈಕ್ ಸವಾರರ ಬೈಕ್ ಸೈಲೆನ್ಸರ್ ವಶಕ್ಕೆ ಪಡೆದು ರೋಡ್ ರೂಲರ ಮೂಲಕ ಪುಡಿ ಪುಡಿ ಮಾಡಿ ಬೈಕ್ ಮೂಲಕ ಶಬ್ದ ಮಾಲಿನ್ಯ ಮಾಡದಂತೆ ಬಿಸಿ ಮುಟ್ಟಿಸಿದ್ದಾರೆ.ಈಗಾಗಲೇ ಬೇಕಾಬಿಟ್ಟಿಯಾಗಿ

ಶಬ್ದ ಮಾಡಿ ಬೈಕ್ ಚಾಲನೆ ಮಾಡುವ ಮೂಲಕ ಜನರಿಗೆ ತೊಂದರೆ ಕೊಡುವ ಬೈಕ್ ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆದು ಸಂಚಾರಿ ಪೊಲೀಸರು ಖಡಕ್ ಎಚ್ಚರಿಕೆ ನೀಡಿದರು.

Share News

About Shaikh BigTv

Check Also

ವೆಂಕಟಗಿರಿಕೋಟೆ ಗಲಾಟೆ 7 ಮಂದಿ ವಿರುದ್ಧ ಪ್ರಕರಣ

ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಏ.13ರಂದು ಸಂಜೆ ಕೈಕೈ ಮಿಲಾಯಿಸಿದವರನ್ನು ಗಸ್ತಿನಲ್ಲಿದ್ದ ಪೊಲೀಸರು ತಡೆದು ಬುದ್ಧಿ ಹೇಳಿದರೂ ಕೇಳದೆ ಮುಂದುವರಿದು …

Leave a Reply

Your email address will not be published. Required fields are marked *