Breaking News

ಮತದಾನ ಜಾಗೃತಿಗೆ ವಿನೂತನ ಅಭಿಯಾನ: ಅಂತರರಾಷ್ಟ್ರೀಯ ಶೂಟರ್ಸ್ ಈಗ ರಾಯಭಾರಿ..!

ಹುಬ್ಬಳ್ಳಿ: ಅದೆಷ್ಟೋ ಮಾತದಾನದ ಬಗ್ಗೆ ಜಾಗೃತಿ ಮೂಡಿಸಿದರು ಬಹುತೇಕ ಜನರು ಮತದಾನದಿಂದ ದೂರ ಉಳಿಯುತ್ತಿದ್ದರು‌.‌ ಈ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ನಾನಾ ಕಸರತ್ತು ನಡೆಸುತ್ತಿರುವ ಸ್ವಿಪ್‌ ಕಮಿಟಿ, ಇದೀಗ ಮತದಾನ ಹೆಚ್ಚಿಸುವುದಕ್ಕಾಗಿ ರಾಯಬಾರಿಗಳನ್ನಾಗಿ ಅಂತಾರಾಷ್ಟ್ರೀಯ ಪ್ಯಾರಾ ಶೂಟರ್ಸ್‌ಗಳನ್ನು ಆಯ್ಕೆ ಮಾಡಿದೆ.

ಹೌದು..ಪ್ರತಿ ಚುನಾವಣೆಗಳಲ್ಲೂ ಮತದಾನದ ಪ್ರಮಾಣ ಮಾತ್ರ ಹೆಚ್ಚಿಗೆ ಆಗುತ್ತಲೇ ಇಲ್ಲ. ಅದರಲ್ಲೂ ಸುಶಿಕ್ಷಿತರೇ ಮತದಾನದಿಂದ ದೂರ ಉಳಿಯುವುದು ಮಾಮೂಲಿ ಎಂಬಂತಾಗಿದೆ. ಹೀಗಾಗಿ ಚುನಾವಣಾ ಆಯೋಗವೂ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಜಿಪಂ ಸಿಇಒ ನೇತೃತ್ವದಲ್ಲಿ ಸ್ವೀಪ್‌ ಕಮಿಟಿಯನ್ನೂ ನಿರ್ಮಿಸಿದೆ. ಸ್ವೀಪ್‌ ಕಮಿಟಿ ಕೂಡ ಬೀದಿ ನಾಟಕ, ಜಾಗೃತಿ ಜಾಥಾ, ವಿವಿಧೆಡೆ ಸಂವಾದ, ಬೈಕ್‌ ರ್‍ಯಾಲಿ ಸೇರಿದಂತೆ ಹಲವು ಬಗೆಯ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇದೀಗ ಮತದಾನದ ಬಗ್ಗೆ

ಜಾಗೃತಿ ಮೂಡಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ಯಾರಾ ಶೂಟರ್ಸ್‌ಗಳನ್ನು ರಾಯಬಾರಿಗಳನ್ನು ಮಾಡಿಕೊಂಡಿದೆ. ಇವರ ಮೂಲಕವೂ ಇದೀಗ ಜಾಗೃತಿ ಕಾರ್ಯವನ್ನು ಮಾಡುತ್ತಿದೆ.ಜ್ಯೋತಿ ಸಣ್ಣಕ್ಕಿ ಹಾಗೂ ರಾಕೇಶ ನಿಡಗುಂದಿ ಎಂಬಿಬ್ಬರನ್ನು ರಾಯಬಾರಿಗಳನ್ನಾಗಿ ಮಾಡಿಕೊಳ್ಳಲಾಗಿದೆ. ಇವರಿಬ್ಬರು ಅಂಗವಿಕಲರು. ಆದರೆ ಮನಸು ಮಾಡಿದರೆ ಸಾಧನೆಗೆ ಅಂಗವಿಕಲತೆ ಸಮಸ್ಯೆಯಾಗುವುದಿಲ್ಲ ಎಂಬುದಕ್ಕೆ ಈ ಇಬ್ಬರು ಉತ್ತಮ ಉದಾಹರಣೆ. ಈ ಇಬ್ಬರಿಗೂ ನಡೆಯಲು ಬಾರದು. ವ್ಹೀಲ್‌ ಚೇರ್‌ ಅವಲಂಬಿತರು. ಆದರೆ ಶೂಟರ್ಸ್‌ನಲ್ಲಿ ಮಾತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದವರು.‌ ಈ ಇಬ್ಬರನ್ನು ಮತದಾನ ಜಾಗೃತಿಗಾಗಿ ಇದೀಗ ಚುನಾವಣಾ ಆಯೋಗವೂ ಧಾರವಾಡ ಜಿಲ್ಲೆಯ ರಾಯಭಾರಿಗಳನ್ನಾಗಿ ನೇಮಿಸಿದೆ. ಇವರು ಕೂಡ ಖುಷಿ ಪಟ್ಟಿದ್ದು, ಸಂತಸದಿಂದಲೇ ಮತದಾನ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇವೆ. ಮತದಾನ ಎಲ್ಲರ ಹಕ್ಕು, ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈ ಸಲವಾದರೂ ಮತದಾನದ ಪ್ರಮಾಣ ಹೆಚ್ಚಾಗಲಿ ಎಂಬುದು ಪ್ರಜ್ಞಾವಂತರ ಆಶಯ.

Share News

About Shaikh BigTv

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *