ಹುಬ್ಬಳ್ಳಿ: ಇಲ್ಲಿ ಲವ್ ಜಿಹಾದ್, ಮತಾಂತರದ ಟ್ರೈನಿಂಗ್ ಸೆಂಟೆರ್ ಇದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪಿಸಿದರು.ಮೃತ ನೇಹಾಳ ಮನೆಗೆ ಭೇಟಿ ನೀಡಿ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು,ಇದೊಂದು ರಾಕ್ಷಸಿ ಕೃತ್ಯ. ಸರ್ಕಾರದ ವ್ಯವಸ್ಥೆ ಸರಿ ಇಲ್ಲದಿದ್ದಾಗ ಈ ರೀತಿಯ ಮನಸ್ಥಿತಿ ಬರಲು ಸಾಧ್ಯ. ಉತ್ತರ ಪ್ರದೇಶ ಗೂಂಡಾ ರಾಜ್ಯ ಎನಿಸಿಕೊಂಡಿತ್ತು. ಅದೇ ಉತ್ತರ ಪ್ರದೇಶದಲ್ಲಿ ಶಾಂತಿ ವಾತಾವರಣ ಇದೆ. ಇದಕ್ಕೆ ಯೋಗಿ ಆಡಳಿತ ಕಾರಣ ಎಂದರು. ಅಲ್ಪಸಂಖ್ಯಾತರ ತುಷ್ಟಿಕರಣ ಇದಕ್ಕೆ ಕಾರಣ. ಲವ್ ಜಿಹಾದ್ ಟ್ರೈನಿಂಗ್ ಸೆಂಟರ್ ಇಲ್ಲಿರಬೇಕು.ಸಿಒಡಿ ಇತ್ಯಾದಿ ತನಿಖೆ ಮಾಡಬೇಕು.ಯಾವ ರೀತಿ ತನಿಖೆ ಮಾಡಿದ್ದರೋ ಗೊತ್ತಾಗ್ತಿಲ್ಲ. ಇನ್ನೂ ಐದು ಜನ ಇದಾರೆ ಅಂತ ಅವರ ತಂದೆ ಹೇಳ್ತಿದ್ದಾರೆ. ಅದ್ರ ಬಗ್ಗೆ

ಯಾವುದೇ ರೀತಿಯ ಕ್ರಮವಿಲ್ಲ. ನೇಹಾ ಳ ಕ್ಯಾರೆಕ್ಟರ್ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರೆ. ತನಿಖೆ ನಡೆವಾಗಲೇ ಸಿಎಂ, ಗೃಹ ಸಚಿವರು ವೈಯಕ್ತಿಕ ಘಟನೆ ಅಂತ ಹೇಳಿಕೆ ಕೊಟ್ಟಿದ್ದಾರೆ. ಅದರ ದುಷ್ಪರಿಣಾಮ ನೋಡಿ ರಿಯಾಕ್ಟ್ ಮಾಡಬೇಕು. ಯಾರನ್ನೋ ಬಚಾವ್ ಮಾಡಲು ಈ ರೀತಿಯ ಹೇಳಿಕೆ ನೀಡಬಾರದು. ಘಟನೆಯ ಹಿಂದಿರೋ ಎಲ್ಲರ ಬಂಧನವಾಗಬೇಕು ಎಂದು ಅವರು ಹೇಳಿದರು.ಸಿಎಂ ಗೆ ಕುಟುಂಬಸ್ಥರಿಗೆ ಸಾಂತ್ವನ ಹೇಳುವಷ್ಟು ಟೈಮ್ ಇಲ್ಲವೇ..? ಅವ್ರಿಗೆ ವ್ಯವಧಾನವೇ ಇಲ್ಲ ಅಂದ್ರೆ ಹೇಗೆ..? ಇವ್ರು ತುಷ್ಟಿಕಾರಣ ರಾಜಕಾರಣಕ್ಕೆ ಜೋತುಬಿದ್ದಿದ್ದಾರೆ. ಇದ್ರಲ್ಲಿ ರಾಜಕಾರಣ ಮಾಡೋ ಪ್ರಶ್ನೆಯೇ ಇಲ್ಲ. ನಿಷ್ಪಕ್ಷಪಾತ ತನಿಖೆ ಆಗಬೇಕು. ಎನ್ ಕೌಟರ್ ಕಾನೂನು ಜಾರಿಗೆ ತರಬೇಕು. ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ಕೊಡಬೇಕು. ತಕ್ಷಣ ಏನಾದ್ರೂಂದು ಶಿಕ್ಷೆ ಆಗಬೇಕು. ಎನ್ಕೌಂಟರ್ ಮೂಲಕ ಎಚ್ಚರಿಕೆ ಗಂಟೆ ಬಾರಿಸಬೇಕು ಎಂದು ನೇಹಾ ನಿವಾಸಕ್ಕೆ ಭೇಟಿ ಕೊಟ್ಟ ವೇಳೆ ಶೆಟ್ಟರ್ ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

