Breaking News
Featured Video Play Icon

ಸ್ಮಾರ್ಟ್ ಸಿಟಿ ಅವ್ಯವಸ್ಥೆ ಅನಾವರಣ ಮಾಡಿದ ವರುಣ: ಲ್ಯಾಮಿಂಗ್ಟನ್ ರಸ್ತೆಗೆ ಬಂದರೇ ಹುಷಾರ..!

ಹುಬ್ಬಳ್ಳಿ: ಸಣ್ಣದೊಂದು ಮಳೆಗೆ ಹುಬ್ಬಳ್ಳಿಯ ಸ್ಮಾರ್ಟ್ ಸಿಟಿಯ ಬಣ್ಣ ಬಯಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಿಂದ ಸಾಕಷ್ಟು ಭರವಸೆ ಇಟ್ಟುಕೊಂಡ ಜನರು ಒಂದು ಗಂಟೆ ಸುರಿದ ಮಳೆಯಲ್ಲಿ ವಾಹನ ಚಾಲನೆಗೆ ಸರ್ಕಸ್ ಮಾಡಿರುವುದನ್ನು ನೋಡಿದರೇ ನಿಜಕ್ಕೂ ಅರ್ಥವಾಗುತ್ತದೆ.. ಬಿರು ಬೇಸಿಗೆಯಿಂದ ತತ್ತರಿಸಿ ಹೋಗಿದ್ದ ವಾಣಿಜ್ಯ ನಗರೀ ಹುಬ್ಬಳ್ಳಿಯಲ್ಲಿ ಗುಡುಗು, ಬಿರುಗಾಳಿ ಸಹಿತ ಬಾರೀ ಆಲಿಕಲ್ಲು ಮಳೆ ಸುರಿಯಿತು. ಆದರೆ ಒಂದು ಗಂಟೆ ಸುರಿದ ಮಳೆ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯನ್ನು ಸಂಪೂರ್ಣ ಜಲಾವೃತ ಮಾಡಿದ್ದು, ನೀರು ಹರಿದು ಹೋಗಲು ಸಮರ್ಪಕವಾದ ವ್ಯವಸ್ಥೆ ಇಲ್ಲದ್ದರಿಂದ ಆಟೋ, ಬೈಕ್, ಕಾರ್, ಚಿಗರಿ ಹಾಗೂ ಬಸ್ ಚಾಲಕರು ಪರದಾಡಿದ್ದು, ನಿಜಕ್ಕೂ ಇಲ್ಲಿನ ಸಂಕಷ್ಟ ಅನುಭವಿಸಿದವರಿಗೆ ಗೊತ್ತು.ಇನ್ನೂ ಲ್ಯಾಮಿಂಗ್ಟನ್ ರಸ್ತೆಯ ಎರಡು ಭಾಗ ಸಂಪೂರ್ಣ ಜಲಾವೃತಗೊಂಡಿದ್ದು, ಕೆಲವೊಂದು ಆಟೋ ಹಾಗೂ ಬೈಕ್ ಗಳು ಕೆಟ್ಟು ನಿಂತಿವೆ. ಇನ್ನೂ ಕಾರಿನ ಚಾಲಕರು ವಾಹನ ಚಾಲನೆ ಮಾಡಲು ಹರಸಾಹಸ ಪಟ್ಟಿದ್ದಾರೆ. ಮಧ್ಯಾಹ್ನದವರೆಗೂ ಬಿರು ಬೇಸಿಗೆಯಲ್ಲಿ ಬೆಂದಿದ್ದ ಹುಬ್ಬಳ್ಳಿಯ ಮಂದಿ, ಮಳೆಯಿಂದಾಗಿ ನಿಟ್ಟುಸಿರು ಬಿಡುವಂತಾಗಿದ್ದು, ನಗರದ ಕೆಲವಡೆ ಭೀಕರ ಗಾಳಿಯಿಂದಾಗಿ ಪ್ಲೆಕ್ಸ್, ಬ್ಯಾನರ್ ಗಳು ಗಾಳಿಗೆ ಹಾರಿ ಹೋಗುತ್ತಿರುವ ದೃಶ್ಯಗಳು ಅಲ್ಲಲ್ಲಿ ಕಂಡು ಬಂದವು. ಆದರೆ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆ ಮಾತ್ರ ಸ್ಮಾರ್ಟ್ ಸಿಟಿಯ ಅವ್ಯವಸ್ಥೆ ಅನಾವರಣ ಮಾಡಿದೆ.

Share News

About Shaikh BigTv

Check Also

ಹಂಪಿ ಎಕ್ಸ್‌ಪ್ರೆಸ್ ರೈಲಿಗೆ ಆಕಸ್ಮಿಕ ಬೆಂಕಿ

ಬಳ್ಳಾರಿ : ಹಂಪಿ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಟು ಆತಂಕ ಸೃಷ್ಟಿಯಾದರೂ, ಅನಾಹುತ ಸಂಭವಿಸದೇ ಪ್ರಯಾಣಿಕರು ಪಾರಾದ …

Leave a Reply

Your email address will not be published. Required fields are marked *