Breaking News

ಬಾಗಲಕೋಟೆಯಲ್ಲಿ ಬೆಚ್ಚಿಬೀಳಿಸಿದ ಕೃತ್ಯ: ಪತ್ನಿಯನ್ನು ನೇಣುಹಾಕಿ ವಿಡಿಯೋ ಮಾಡಿದ ಪಾಪಿ ಪತಿ

ಬಾಗಲಕೋಟೆ ಜಿಲ್ಲೆಯ ಗಲಗಲಿ ಗ್ರಾಮದಲ್ಲಿ 23 ವರ್ಷದ ಭಾಗ್ಯಶ್ರೀ ಉರ್ಫ್ ಪ್ರಗತಿ ಜಗಳೂರು ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣದಲ್ಲಿ, ಪತಿ ಪ್ರವೀಣ್ ಜಗಳೂರು ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ದಂಪತಿಯ ನಡುವೆ ಕಳೆದ ಕೆಲವು ದಿನಗಳಿಂದ ಕೌಟುಂಬಿಕ ಕಲಹ ನಡೆಯುತ್ತಿದ್ದು, ಘಟನೆ ನಡೆದ ದಿನವೂ ತೀವ್ರ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಮಹಿಳೆಯ ಸಾವಿನ ಕೆಲ ಕ್ಷಣಗಳನ್ನು ಆರೋಪಿ ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಮೊಬೈಲ್ ವಶಪಡಿಸಿಕೊಂಡು ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಸುಮಾರು ಆರು ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿಗೆ ಒಬ್ಬ ಗಂಡು ಮಗು ಇದ್ದಾನೆ. ಪ್ರಕರಣದಲ್ಲಿ ಅನೈತಿಕ ಸಂಬಂಧದ ಅನುಮಾನವೂ ಕೇಳಿಬಂದಿದ್ದರೂ, ಅದು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಮರಣೋತ್ತರ ಪರೀಕ್ಷೆ ವರದಿ ಹಾಗೂ ಡಿಜಿಟಲ್ ಸಾಕ್ಷ್ಯಗಳ ಆಧಾರದ ಮೇಲೆ ಬೀಳಗಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Share News

About BigTv News

Check Also

ಬೆಂಗಳೂರಲ್ಲೂ ಬೈಕ್ ಸವಾರನ ಕುತ್ತಿಗೆ ಸೀಳಿದ ಮಾರಕ ಮಾಂಜಾ ದಾರ

ಬೆಂಗಳೂರು: ನಿಷೇಧಿತ ಚೈನೀಸ್ ಮಾಂಜಾ ದಾರಕ್ಕೆ ಸಿಲುಕಿ ಬೈಕ್ ಸವಾರರೊಬ್ಬರ ಕುತ್ತಿಗೆ ಭೀಕರವಾಗಿ ಸೀಳಿರುವ ಘಟನೆ ಹೆಗಡೆನಗರದ ಫ್ಲೈ ಓವರ್ …

Leave a Reply

Your email address will not be published. Required fields are marked *