ಹುಬ್ಬಳ್ಳಿ:ಅಪಘಾತಕ್ಕೀಡಾದ ಮಗನನ್ನು ನೋಡಲು ಬಂದ ಪಾಲಕರ ಮೇಲೆ ಅನಾಮಿಕರು ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಮಹಮ್ಮದ್ ಸಾಬ್, ಸಾಹೇರಾಬಾನು ದಂಪತಿಯ ಮಗ ಟಿಪ್ಪು ಸುಲ್ತಾನ್ ಇತ ನಾಲ್ಕು ವರ್ಷಗಳ ಹಿಂದೆ ಮನೆಯಲ್ಲಿ ಜಗಳವಾಡಿ ಮನೆ ಬಿಟ್ಟು ಬಂದಿದ್ದ ಎನ್ನಲಾಗಿದ್ದು, ಧಾರವಾಡದ ಅಜ್ಜಿ ಮನೆಯಲ್ಲಿದ್ದನೆಂದು ಹೇಳಿಕೊಂಡು ತನ್ನ ಗೆಳೆಯನ ಮನೆಯಲ್ಲಿದ್ದ ಎಂದು ತಿಳಿದು ಬಂದಿದೆ. ನಿನ್ನೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ವಿಷಯ ತಿಳಿದು ಕಿಮ್ಸ್ ಆಸ್ಪತ್ರೆಗೆ ಟಿಪ್ಪು ಸುಲ್ತಾನ್ ತಂದೆ-ತಾಯಿ ಬಂದಿದ್ದಾರೆ. ನೀವೆಕೆ ಆಸ್ಪತ್ರೆಗೆ ಬಂದಿದ್ದೀರಿ ಎಂದು ಟಿಪ್ಪು ಸುಲ್ತಾನ್ ಸ್ನೇಹಿತರಾದ ರೇಹಾನಾ ಖಾಜಾ ಅತ್ತಾರ ಸೇರಿದಂತೆ ಇನ್ನುಳಿದವರು ಹಲ್ಲೆ ಮಾಡಿದ್ದು, ಆತನನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡು ಕೆಲಸಕ್ಕೆ ಕಳಿಸುತ್ತಿದ್ದರಂತೆ ಆತ ನಿಮ್ಮ ಮಗಾ ನಮ್ಮ ಜೊತೆಗೆ ಇದ್ದಾನೆ. ಇಲ್ಲೆ ಏಕೆ ಬಂದ್ರಿ ಅಂತ ಯಾರನ್ನೋ ರೌಡಿಗಳನ್ನು ಕರೆಯಿಸಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಕುರಿತಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
Check Also
ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ
ಬೆಂಗಳೂರು: ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದ 80 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮೌಲ್ಯ ಸುಮಾರು ₹12 …
bigtvnews | Hubli Dharwad News | Kannada News | Karnataka News Hubli News | News In Hubli | Local news

