Breaking News

ಆಕಾಶ್ ಮಠಪತಿ ಕೊಲೆ: ಪತ್ನಿ, ಅತ್ತೆ, ಮಾವ ಸೇರಿದಂತೆ 12ಜನರ ವಿರುದ್ಧ ಎಫ್ ಐ ಆರ್..!

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಆಕಾಶ್ ಮಠಪತಿ‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕಾಶ್ ಪತ್ನಿ,ಅತ್ತೆ ಮಾವ ಸೇರಿ 12ಜನರ ವಿರುದ್ದ ಎಫ್ ಐ ಆರ್ ದಾಖಲಾಗಿದೆ… ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ 12 ಜನರ ವಿರುದ್ದ ದೂರು ದಾಖಲಾಗಿದ್ದು, ಆಕಾಶ್ ತಂದೆ ಶೇಖರಯ್ಯ ಮಠಪತಿ ದೂರಿನನ್ವಯ ಮೃತ ಆಕಾಶ್ ಹೆಂಡತಿ ಕಾವ್ಯಾ,ಅತ್ತೆ ಶ್ರಿದೇವಿ,ಮಾವ ಮೋಹನ ನಾಯಕ್ ಸೇರಿ 12 ಜನರ ವಿರುದ್ದ ದೂರು ದಾಖಲಾಗಿದೆ. ಅಲ್ಲದೇ ಭರತ್ ನಾಯಕ್, ಅರ್ಜುನ್

ಮಗಲಿ, ಸಂಜು ಕೊಪ್ಪದ್, ರಾಹುಲ್ ಕಾಂಬಳೆ, ವಿನಾಯಕ ತಾಳಿಕೋಟಿ, ಮನೋಜ್, ಚಮಕ್ ಮೌನೇಶ್, ಮಹೇಶ್ ,ಕಾರ್ತಿಕ್ ರಜಪೂತ್, ಕಾವ್ಯಾ,ಶ್ರೀದೇವಿ ಹಾಗೂ ಮೋಹನ್ ನಾಯಕ್ ವಿರುದ್ದ ದೂರು ದಾಖಲಾಗಿದೆ.ಇನ್ನೂ ಮೃತ ಆಕಾಶ್ ಪತ್ನಿ,ಅತ್ತೆ ಮಾವನ ಕುಮ್ಮಕ್ಕಿನಿಂದಲೇ ಕೊಲೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, 12 ಜನರಲ್ಲಿ ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಹಳೇ ಹುಬ್ಬಳ್ಳಿ ಠಾಣೆಯಲ್ಲಿ 12 ಜನರ ವಿರುದ್ದ IPC 1860 U/S 149-302 ಅಡಿಯಲ್ಲಿ ಕೇಸ್ ದಾಖಲಾಗಿದೆ.

Share News

About Shaikh BigTv

Check Also

ಯೋಗೇಶ್‌ ಗೌಡ ಹತ್ಯೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ

ಧಾರವಾಡದ ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೇಶ್‌ ಗೌಡ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ …

Leave a Reply

Your email address will not be published. Required fields are marked *