ಮತ್ತೊಂದು ಬಲಿ ಪಡೆದುಕೊಂಡ ಬಿಆರ್ ಟಿಎಸ್…
ಬಿಆರ್ ಟಿಎಸ್ ವಿರುದ್ಧ ರೊಚ್ಚಿಗೆದ್ದ ಸಾರ್ವಜನಿಕರು….
ಜನಪ್ರತಿನಿಧಿಗಳೆ ಈಗಲಾದರೂ ಕಣ್ತೆರೆದು ನೋಡಿ ಚಿಗರಿ ಅಡ್ಡಾದಿಡ್ಡಿ ಓಟಕ್ಕೆ ಬಡವರು ಬಲಿ!!!!!
ಹುಬ್ಬಳ್ಳಿ: ಬಿ.ಆರ್.ಟಿ.ಎಸ್ ಚಿಗರಿ ಬಸ್ ವೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಗರದ ವಿದ್ಯಾನಗರದ ಗುರುದತ್ ಭವನದ ಬಳಿಯಲ್ಲಿ ಬುಧವಾರ ನಡೆದಿದೆ.ನಗರದ ಗೋಕುಲ್ ರಸ್ತೆಯ ಮಂಜುನಾಥ ನಗರದ ವಯೋವೃದ್ಧರಾದ ಗಂಗಾಧರ್ ಬಸವಂತಪ್ಪ ಮಮ್ಮಿಗಟ್ಟಿ (84) ಎಂಬುವರೇ ಸಾವನ್ನಪ್ಪಿದ್ದಾರೆ.

ರಸ್ತೆಯಿಂದ ಇನ್ನೊಂದು ರಸ್ತೆಗೆ ದಾಟುತ್ತಿದ್ದಾಗ ವೇಳೆ ಹುಬ್ಬಳ್ಳಿಯಿಂದ ಧಾರವಾಡದ ಕಡೆಗೆ ಹೋಗುತ್ತಿದ್ದ ಚಿಗರಿ ಬಸ್ ನಿಂದ ಈ ಘಟನೆ ಸಂಭವಿಸಿದ್ದು, ಸಾವನ್ನಪ್ಪಿದ ವಯೋವೃದ್ಧನನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತಂತೆ ಉತ್ತರ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಾಗಿದೆ.ಪಾದಾಚಾರಿ

ಸಾವು ಖಂಡಿಸಿ ಸಾರ್ವಜನಿಕರ ಪ್ರತಿಭಟನೆ;ಚಿಗರಿ ಬಸ್ ನ ಅತೀ ವೇಗವೇ ಈ ಅನಾಹುತಕ್ಕೆ ಕಾರಣವೆಂದು ಸಾರ್ವಜನಿಕರು ಆರೋಪಿಸಿ, ಘಟನಾ ಸ್ಥಳದಲ್ಲಿಯೇ ವಯೋವೃದ್ಧನ ಸಾವು ಖಂಡಿಸಿ ಬಿ.ಆರ್.ಟಿ. ಎಸ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಪದೇ ಪದೇ ಚಿಗರಿ ಬಸ್ ನಿಂದಾಗಿ ಒಂದಿಲ್ಲಾ ಒಂದು ಅವಘಡಗಳು ಸಂಭವಿಸುತ್ತಿದ್ದು,

ಬಿ.ಆರ್.ಟಿ.ಎಸ್ ನಿಂದಾಗುವ ಅವಘಡಕ್ಕೆ ಬ್ರೇಕ್ ಹಾಕುವ ಮೂಲಕ ಪಾದಚಾರಿಗಳ ಜೀವಕ್ಕೆ ಕುತ್ತು ಬಾರದ ರೀತಿಯಲ್ಲಿ ಬಿ.ಆರ್.ಟಿ.ಎಸ್ ನೋಡಿಕೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ…
bigtvnews | Hubli Dharwad News | Kannada News | Karnataka News Hubli News | News In Hubli | Local news

