Breaking News

ಪೊಲೀಸ್ ಆಯುಕ್ತರಿಗೆ ಶ್ರೀರಾಮ ಸೇನೆಯಿಂದ ಮನವಿ: ಫೇಸ್ ಬುಕ್, ಇನಸ್ಟಾ ಪುನರ್ ಚಾಲ್ತಿಗೆ ಆಗ್ರಹ…

ಹುಬ್ಬಳ್ಳಿ: ಶ್ರೀರಾಮ ಸೇನೆ ಸಂಘಟನೆ ಪ್ರಮುಖರ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆಗಳು 15 ದಿನಗಳಿಂದ ಬಂದ್ ಆಗಿದ್ದು, ಅವುಗಳ ಪುನರ್ ಚಾಲ್ತಿಗೆ ಕೋರಿ ಸಂಘಟನೆಯ ರಾಷ್ಟ್ರೀಯ ಘಟಕದ ಅಧ್ಯಕ್ಷ ಪ್ರಮೋದ ಮುತಾಲಿಕ್ ಅವರು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರಿಗೆ ಮನವಿಪತ್ರ ಸಲ್ಲಿಸಿದರು.ಸಂಘಟನೆಯ 20 ಪ್ರಮುಖರ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆಗಳನ್ನು ಬಂದ್ ಆಗಿದೆ. ಲವ್ ಜಿಹಾದ್ ವಿರುದ್ಧ ಸಹಾಯವಾಣಿ ಆರಂಭಿಸಿ, ತ್ರಿಶೂಲ ದೀಕ್ಷೆ ನೀಡಿದ್ದಕ್ಕೆ ಮುಸ್ಲಿಮರು ಹೀಗೆ ಮಾಡಿರಬಹುದು. ಭಟ್ಕಳ, ಮಂಗಳೂರು, ವಿದೇಶಿಯರು ಇದಕ್ಕೆ ಕಾರಣರಾಗಿರಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರ ಮುಸ್ಲಿಂ, ಕ್ರಿಶ್ಚಿಯನ್ನರಿಗೆ ಪ್ರೋತ್ಸಾಹ ನೀಡುತ್ತಿದೆ. ಹಿಂದೂ ಹೆಣ್ಣುಮಕ್ಕಳು ಹೂವು, ಬಿಂದಿ, ಬಳೆ ತೆಗೆದು ಬರಬೇಕೆಂಬ ಕ್ರಮ ಶಾಲಾ- ಕಾಲೇಜುಗಳಲ್ಲಿ ಆಗುತ್ತಿದೆ. ನಾಸ್ತಿಕ- ವಾದಿಗಳು, ಹಿಂದೂ ಹಾಗೂ ರಾಷ್ಟ್ರ ವಿರೋಧಿಗಳ ಸಲಹೆಯಿಂದ ಸರ್ಕಾರ ಹೀಗೆ ನಡೆದುಕೊಳ್ಳುತ್ತಿದೆ’ ಎಂದು ಅವರು ಆರೋಪಿಸಿದರು.

Share News

About Shaikh BigTv

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *