Breaking News
Featured Video Play Icon

ಕೋಡಿ ಹರಿಯುತ್ತಿದೆ ನೋಡ ಉಣಕಲ್ ಕೆರೆ: ವರುಣನ ಅಬ್ಬರಕ್ಕೆ ಮೈತುಂಬಿದ ಪ್ರತಿಷ್ಠಿತ ತಾಣ..!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ಎಲ್ಲೆಡೆಯೂ ನಿರಂತರ ಮಳೆಯಾಗುತ್ತಿದ್ದು, ಬಹುತೇಕ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ನಡುವೆ ಹುಬ್ಬಳ್ಳಿಯ ಪ್ರತಿಷ್ಠಿತ ಉಣಕಲ್ ಕೆರೆಯು ಕೋಡಿ ಹರಿಯುತ್ತಿದೆ.ಹೌದು.. ನಗರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಉಣಕಲ್ ಕೆರೆ ಶುಕ್ರವಾರದಿಂದಲೇ ಕೋಡಿ ಹರಿಯುತ್ತಿದೆ. ಕೆರೆ ಬಳಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಡಿಗೆ ಪಥ ನಿರ್ಮಿಸಲಾಗಿದ್ದು, ಕೋಡಿ ಹರಿಯುವುದನ್ನು ವೀಕ್ಷಿಸಲು ಜನರಿಗೆ ಅನುಕೂಲವಾಗಿದೆ.ಉಣಕಲ್ ಕೆರೆ ಮೈದುಂಬಿದೆ. ಪ್ರತಿವರ್ಷ ಕೋಡಿ ಹರಿದಾಗಲೂ ಜನರು ತಂಡಗಳಲ್ಲಿ ಬಂದು, ವೀಕ್ಷಿಸುತ್ತಾರೆ. ಆದರೆ, ಕೆರೆಯಲ್ಲಿ ಸಂಗ್ರಹವಾದ ತ್ಯಾಜ್ಯ ಕೋಡಿ ಹರಿವ ನೀರಿನ ಮೂಲಕ ರಾಜಕಾಲುವೆ ಸೇರುತ್ತಿದೆ. ರಾಜಕಾಲುವೆ ತುಂಬಿದರೆ, ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ಈಗಾಗಲೇ ಬಹುತೇಕ ಕಡೆಯಲ್ಲಿ ರಾಜಕಾಲುವೆ ಸಂಪೂರ್ಣ ಕಸದಿಂದ ತುಂಬಿದ್ದು, ಜನರಲ್ಲಿ ಆತಂಕ ಮನೆಮಾಡಿದೆ.

Share News

About Shaikh BigTv

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *