ಹುಬ್ಬಳ್ಳಿ: ಉಪಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ದಲಿತರು ರಸ್ತೆಯಲ್ಲಿ ಮಾತನಾಡುತ್ತಾ ನಿಂತರೇ ಕೇರಿಗೆ ನುಗ್ಗಿ ಕೈ ಕಡಿದು ಮಾರಾಕಾಸ್ತರಗಳಿಂದ ಹಲ್ಲೆ ಮಾಡಿದನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ದಲಿತ ವಿಮೋಚನಾ ಸಮಿತಿಯ ವತಿಯಿಂದ ಹೋರಾಟ ನಡೆಸಿ ತಹಶಿಲ್ದಾರರ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.ಕನಕಪುರ ತಾಲೂಕಿನ ಮಾಳಗಾಳು ಗ್ರಾಮದ ಅನೀಶ ಅವರು ಸ್ನೇಹಿತರ ಜೊತೆ ಮಾತನಾಡುತ್ತಾ ರಸ್ತೆಯಲ್ಲಿ ನಿಂತಿದ್ದರು ಅದೇ ರಸ್ತೆಯಲ್ಲಿ ಹೊರಟಿದ್ದ ಒಕ್ಕಲಿಗ ಸಮುದಾಯದ ಯುವಕರ ಗುಂಪು ರಸ್ತೆಯಲ್ಲಿ ಏಕೆ ನಿಂತಿರುವಿರಿ ಎಂದು ಜಗಳ ತೆಗೆದಿದ್ದು, ರಾತ್ರಿ ದಲಿತರ ಕಾಲೋನಿಗೆ (ಎನ್.ಕೆ.ಕಾಲೋನಿಗೆ) ನುಗ್ಗಿದ ಒಕ್ಕಲಿಗ ಸಮುದಾಯದ ಯುವಕರು ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ವೃದ್ಧರೂ ಮಹಿಳೆಯರು ಎನ್ನದ ಕೇರಿ ಒಳಗೆ ದಲಿತರ ಮೇಲೆ ಮನ ಬಂದಂತೆ ಹಲ್ಲೆ ಮಾಡಿ ತಮ್ಮ ಜಾತಿ ಕ್ರೌರ್ಯ ಮೆರೆದಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಕ್ರಮಗಳನ್ನು ಜರುಗಿಸಬೇಕಿದೆ ಎಂದು ಆಗ್ರಹಿಸಿದರು.ಹಿಂದು ನಾವೆಲ್ಲಾ ಒಂದು ಎನ್ನುವ ಮಾತಿಗೆ ಯಾವ ಅರ್ಥ ಇದೆ ಮನಸ್ಸಿನಲ್ಲಿ ಜಾತಿಯ ಕೀಳು ವಿಷ ಇಟ್ಟಕೊಂಡು ಬಾಯಿ ಮಾತಿನಲ್ಲಿ ಹಿಂದು ನಾವು ಒಂದು ಹಾಗಾದರೆ ಕನಕಪುರದ ತಾಲೂಕಿನ ಮಾಳಗಾಳು ಗ್ರಾಮದ ಒಕ್ಕಲಿಗ ಸಮುದಾಯ ದಲಿತರ ಮೇಲಿನ ಈ ಹಲ್ಲೆ ಏಕೆ ನಡೆಯಿತು. ರಾಜ್ಯದ ಉಪಮುಖ್ಯಮಂತ್ರಿಗಳು ಡಿ.ಕೆ.ಶಿವಕುಮಾರ ಅವರ ಕ್ಷೇತ್ರದಲ್ಲಿ ಕೈ ಕತ್ತರಿಸಿ ಹಲ್ಲೆ ಮಾಡಿದರು ಡಿ.ಕೆ.ಶಿವಕುಮಾರ ಅವರು ಯಾವ ಸ್ವಾಂತನವ ನೋವು ವ್ಯಕ್ತಪಡಿಸದಿರುವುದು ವಿಷಾಧೀನಿಯ ಸಂಗತಿ ಅಂದರೆ ದಲಿತರ ಮೇಲಿನ ಇವರ ಕಾಳಜಿ ಎದ್ದು ಕಾಣುತ್ತಿದ್ದೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
Check Also
ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ
ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …
bigtvnews | Hubli Dharwad News | Kannada News | Karnataka News Hubli News | News In Hubli | Local news

