Breaking News

ಗವಿಸಿದ್ದೇಶ‌ ಸ್ವಾಮೀಜಿ ತುಂಗಭದ್ರಾ ಆಣೆಕಟ್ಟೆಗೆ ಭೇಟಿ

ಹೊಸಪೇಟೆ: ತುಂಗಭದ್ರಾ ಆಣೆಕಟ್ಟೆಯ 19 ನೇ ಕ್ರಸ್ಟ್‌ ಗೇಟ್ ಕೊಚ್ಚಿಹೋದ ಹಿನ್ನೆಲೆಯಲ್ಲಿ ಸೋಮುವಾರ ಜಲಾಶಯಕ್ಕೆ ದೌಡಾಯಿಸಿದ ಕೊಪ್ಪಳದ ಅಭಿನವ ಗವಿಸಿದ್ದೇಶ‌ ಸ್ವಾಮೀಜಿ ಜಲಾಶಯ ವೀಕ್ಷಣೆ ಮಾಡಿದರು.

ತುಂಗಭದ್ರಾ ಆಣೆಕಟ್ಟೆಗೆ ಬಂದ ಶ್ರೀಗಳು ಆಣೆಕಟ್ಟೆಯ ಮೇಲೆ‌ ವಾಹನದಲ್ಲಿ ತೆರಳದೇ ನಡೆದುಕೊಂಡೇ ಹೋಗಿ ಜಲಾಶಯ ವೀಕ್ಷಣೆ ಮಾಡಿದ್ದಾರೆ.ಗೇಟ್ ಕಿತ್ತುಹೋದ, ಮರು ಅಳವಡಿಕೆ ಬಗ್ಗೆ ಅಲ್ಲಿದ್ದ ಸಿಬ್ಬಂದಿಯಿಂದ ಗವಿಶ್ರೀಗಳು ಮಾಹಿತಿ ಪಡೆದರು. ಜಲಾಶಯದ ಸ್ಥಿತಿ ಗತಿ, ಈಗಿರುವ ಪರಿಸ್ಥಿತಿಯನ್ನು ಕಂಡುಕೊಂಡರು. ಕಲ್ಯಾಣ ಕರ್ನಾಟಕದ ನಾಲ್ಕು ಜಿಲ್ಲೆಯ ಜೀವನಾಡಿಯಾಗಿರುವ ಜಲಾಶಯಕ್ಕೆ ಇದೇ ಮೊದಲ ಬಾರಿಗೆ ಇಂತಹ ಅವಘಡ ಎದುರಾಗಿದ್ದು, ರೈತರಿಗೆ ಇದರಿಂದ ಆಗುವ ತೊಂದರೆಗಳ ಬಗ್ಗೆ ಆಲಿಸಿ ಮರಕುಪಟ್ಟರು.

Share News

About Shaikh BigTv

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *