Breaking News
Featured Video Play Icon

ಗಾಂಜಾ ಫೆಡ್ಲರ್ ಮೇಲೆ ಖಾಕಿ ರೈಡ್: ಎಲ್ಲೆ ಹೋದರೂ ಬಿಡಲ್ಲ ಇನ್ನುಮುಂದೆ ನಿಮ್ಮ ಟೈಮ್ ಬ್ಯಾಡ್…

ಹುಬ್ಬಳ್ಳಿ : ಚೋಟಾ ಮುಂಬೈ ಎಂದೇ ಖ್ಯಾತಿ ಪಡೆದಿರುವ ಅವಳಿ ನಗರದಲ್ಲಿ ಗಾಂಜಾ ಪ್ರಕರಣಗಳು ದಿನದಿಂದ ದಿನಕ್ಕರ ಭಾರಿ ಪ್ರಮಾಣದಲ್ಲಿ ಬೆಳಕಿಗೆ ಬರುತ್ತೀವೆ. ಗಾಂಜಾ ಪೆಡ್ಲರ್ ಸೇವನೆಯ ಬಂಧನ ಸಂಖ್ಯೆ ಇನ್ನೂ ಕಮ್ಮಿ ಆಗುತ್ತೀಲ್ಲಾ. ಅಲ್ಲಿ ಏನು ಅಂತೀರಾ ಈ ಸ್ಟೋರಿ ನೋಡಿಹೌದು, ಹುಬ್ಬಳ್ಳಿ-ಧಾರವಾಡ ಅವಳಿ ನಗರ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಗಾಂಜಾ ಪ್ರಕರಣದಲ್ಲಿ 17 ಜನರನ್ನು ಬಂಧಿಸಿದ್ದಾರೆ. ಉಪನಗರ ಠಾಣೆ ಹಾಗೂ ಹಳೇ ಹುಬ್ಬಳ್ಳಿಯ ಪೊಲೀಸರು ಪ್ರತ್ಯೇಕ ಪ್ರಕರಣದಲ್ಲಿ ಗಾಂಜಾ ಪೆಡ್ಲರ್ ರ್ ಹಾಗೂ ಸೇವನೆ ಮಾಡುವವರನ್ನು ಬಂಧಿಸಲಾಗಿದೆ .

ಎರಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 17 ಜನರನ್ನು ಬಂಧಿಸಲಾಗಿದೆ. ಉಪನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಕಿಮ್ಸ್ ಆಸ್ಪತ್ರೆ ಹಿಂಭಾಗದಲ್ಲಿ ಗಾಂಜಾ ಮಾರಾಟ ಮಾಡುತ್ತ ಹಾಗೂ ಸೇವಿಸುತ್ತಿದ್ದವರಿಂದ 1630ಗ್ರಾಂ ಗಾಂಜಾ, ಒಂದು ಬೈಕ್, ಏಳು ಮೊಬೈಲ್ ಪೋನ್ಸ್ ಸೇರಿ ಒಟ್ಟು 2.5ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಗಾಂಜಾ ಸೇವಿಸುತ್ತಿದ್ದ ಶಾಂತಿನಗರ ಮಹಾವೀರ ಕಾಲೋನಿಯ ವೈಭವ ಪರಬ, ಗೋಪನಕೊಪ್ಪದ ರಾಕೇಶ ನಾಯ್ಕ ಬಂಧಿಸಿ, ವಿಚಾರಣೆ ಗೊಳಪಡಿಸಿದಾಗ ಮಾರಾಟಗಾರ ಮತ್ತು ಖರೀದಿರಾರರ ಬಗ್ಗೆ ಮಾಹಿತಿ ನೀಡಿದ್ದರು. ಮಾರಾಟ ಮಾಡುತ್ತಿದ್ದ ಕಮರಿಪೇಟೆಯ ಗಣಪತಸಾ ಅಥಣಿ, ಧಾರವಾಡ ಮಣಿ ಕಿಲ್ಲಾದ ಮಾರುತಿ ಸಬರದ, ನುಗ್ಗಿಕೇರಿಯ ಚಂದ್ರಪ್ಪ ಕಮ್ಮಾರ ಬಂಧಿಸಿ ಅವರಿಂದ 1576ಗ್ರಾಂ ಗಾಂಜಾ, ಒಂದು ಬೈಕ್, ನಾಲ್ಕು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಹಾಗೂ ಖರೀದಿದಾರರಾದ ಧಾರವಾಡ ಕುಮಾರೇಶ್ವರ ನಗರದ ಗಣೇಶ ಯಾದವ, ದೇವಗಿರಿಯ ರಮೇಶ ಮಾದರ, ಕೆಲಗೇರಿಯ ನಿತೀನ ಮೇದಾರ ಅವರನ್ನು ಬಂಧಿಸಿ, 54ಗ್ರಾಂ ಗಾಂಜಾ, ಮೂರು ಮೊಬೈಲ್ ವಶಪಡಿಸಿಕೊಂಡು ಎಲ್ಲರನ್ನೂ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಮತ್ತೊಂದೆಡೆ ಹಳೇಹುಬ್ಬಳ್ಳಿ ಆನಂದನಗರ ರಸ್ತೆಯ ನಿರ್ಮಾಣ ಹಂತದ ಜಯದೇವ ಆಸ್ಪತ್ರೆ ಹತ್ತಿರ ಮಂಗಳವಾರ ಬೆಳಗಿನ ಜಾವ ಗಾಂಜಾ ಮಾರುತ್ತಿದ್ದ 9 ಜನರನ್ನು ಹಳೇಹುಬ್ಬಳ್ಳಿ ಪೊಲೀಸರು ಬಂಧಿಸಿ, ಅವರಿಂದ ಅಂದಾಜು 1.25ಲಕ್ಷ ರೂ. ಮೌಲ್ಯದ 1.5ಕೆಜಿ ಗಾಂಜಾ, 6 ಮೊಬೈಲ್ ಪೋನ್ಸ್, 2ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ.

Share News

About Shaikh BigTv

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *