Breaking News
Featured Video Play Icon

ರೌಡಿಶೀಟರ್ ಗ್ಯಾಂಗ್ ಗಳ ನಡುವೆ ಹೊಡೆದಾಟ: ಆರೋಪಿ ಬಂಧನ‌ದ ಮೇಲೆ ಪೊಲೀಸ್ ಫೈರಿಂಗ್.

ಗನ್ನ ಸದ್ದಿಗೆ ಹೆದರಿದ ಪುಡಿ ರೌಡಿಗಳು..

ಗ್ಯಾಂಗ್ ಕಟ್ಟಿಕೊಂಡು ರೌಡಿಸಂ ಮಾಡಿದವನ ಕಾಲಿಗೆ ಗುಂಡೆಟು..

ಪುಡಿರೌಡಿಗಳ ಹಿಂದೆ ಇರುವ ದೊಡ್ಡವರತ್ತ ತಿರಗುತ್ತಾ ಗನ್ನ…????

ರೌಡಿಗಳಿಗೆ ಕಿಮ್ಸ್ ನಲ್ಲಿ ಬೆಡ್ ಬುಕ್‌..!! ಬಾಲಬಿಚ್ಚಿದ್ರೆ ಸಹಿಸಲ್ಲ ಕಮೀಷನರ್..

ಅವಳಿನಗರದಲ್ಲಿ ಖಾಕಿ ಪಡೆ ಮತ್ತು ಕಳ್ಳರ ನಡುವೆ ಗನ್ ಸದ್ದು ಜೋರಾಗಿ ನಡೆದಿದ್ದು ಕಳೆದ ತಡರಾತ್ರಿ ಕಸಬಾ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಗ್ಯಾಂಗವಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಬಂಧನ‌ಕ್ಕೆ ತೆರಳಿದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದ ರೌಡಿ ಶೀಟರಗೆ ಕಾಲಿಗೆ ಗುಂಡು ಹೊಡೆದು ಬಂಧನ ಮಾಡಲಾಗಿದೆ ರೌಡಿಶೀಟರ್ ಅಪ್ತಾಬ್ ಕರಡಿಗುಡ್ಡ ಕಳೆದ ಕಸಬಾ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಗ್ಯಾಂಗ ವಾರ್‌ನಲ್ಲಿ ಜಾವೂರ್ ಎಂಬಾತ ಗಾಯವಾಗೊಂಡಿದ್ದ, ಈ ಘಟನೆಯ ಜಾಡು ಹಿಡಿದು ಆರೋಪಿಗಳ ಬಂಧನಕ್ಕೆ ಕಸಬಾ ಠಾಣೆಯ ಪೊಲೀಸರು. ಬುಡರಸಿಂಗಿ ರಸ್ತೆಯಲ್ಲಿ ಆರೋಪಿ ಅಪ್ತಾಬ್ ಕರಡುಗುಡ್ಡ ಬಂಧನಕ್ಕೆ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರು ತಂಡ ತೆರಳಿತ್ತು. ಆದರೆ ಈ ವೇಳೆ ಅಪ್ತಾಬ್ ಪೊಲೀಸ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಮುಂದಾದಾಗ ಅಲರ್ಟ್ ಆದ ಇನ್ಸ್ಪೆಕ್ಟರ್ ರಾಘವೇದ್ರ ಅವರು ಅಪ್ತಾಬ್ ಕಾಲಿಗೆ ಗುಂಡು ಹಾರಿಸಿ ಬಂಧನ ಮಾಡಿದ್ದಾರೆ. ಗಾಯಾಳು ಆರೋಪಿ ಸೇರಿ ಪೋಲೀಸ ಸಿಬ್ಬಂದಿಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಇನ್ನು ಪುಡಿ ರೌಡಿಗಳ ಹಿಂದೆ ಇರುವ ದೊಡ್ಡ ಹೆಸರು ಮಾಡಿ ಹಿಂದೆ ನಿಂತು ಈ ರೌಡಿಸಂ ಅಡ್ಡಾದ ನಾಯಕರ ಬೇಟೆಯತ್ತ ಪೊಲೀಸ್ ಪಡೆಯ ಗನ್ನ ತಿರುಗಿದರೆ ಮತ್ತಷ್ಟು ರೌಡಿಗಳು ಕಂಬಿ ಹಿಂದೆ ಮುದ್ದೆ ಮುರಿಯುತ್ತಾರೆ ಅನ್ನುವದೆ ಸಾರ್ವಜನಿಕರ ಮಾತಾಗಿದೆ

Share News

About Shaikh BigTv

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *