ಲಖನೌ/ವಾರಾಣಸಿ : ಉತ್ತರ ಪ್ರದೇಶ ಲೋಕಸಭಾ ಚುನಾವಣೆಯ ಏಳನೇ ಹಂತದ ಮತದಾನದಲ್ಲಿ ಬಳಸಲಾಗಿದ್ದ ಮತಯಂತ್ರಗಳ ಸಾಗಣೆ ಮತ್ತು ನಿರ್ವಹಣೆಯಲ್ಲಿ ಲೋಪವಾಗಿರುವ ಹಿನ್ನಲೆ ಮೂವರು ಅಧಿಕಾರಿಗಳನ್ನು ಚುನಾವಣಾ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಸಮಾಜವಾದಿ ಪಕ್ಷವು ರಾಜ್ಯ ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ನೀಡಿತ್ತು. ಮತಯಂತ್ರಗಳು ನಾಪತ್ತೆಯಾಗಿರುವ ಹಿನ್ನಲೆ ವಾರಾಣಸಿ ಜಿಲ್ಲಾಧಿಕಾರಿ ಮತ್ತು ವಿಭಾಗೀಯ ಆಯುಕ್ತರನ್ನು ವರ್ಗಾವಣೆ ಮಾಡಬೇಕು’ ಎಂದು ಸಮಾಜವಾದಿ ಪಕ್ಷದ ನಿಯೋಗವು ದೂರಿನಲ್ಲಿ ಆಗ್ರಹಿಸಿತ್ತು. ಘಟನೆ : ‘ಮತಯಂತ್ರಗಳನ್ನು …
Read More »ಕಿಮ್ಸ್ ಆಸ್ಪತ್ರೆಯ ಸಿಬ್ಬಂದಿಯ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯ ಕಳ್ಳತನ
ಹುಬ್ಬಳ್ಳಿ: ಮನೆಯ ಜನರು ಊರಿಗೆ ಹೋಗಿದ್ದ ವೇಳೆಯನ್ನು ಪರಿಗಣಿಸಿ ಮನೆಗೆ ನುಗ್ಗಿದ ಖದೀಮರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಘಟನೆ ನಗರದ ಕಿಮ್ಸ್ ಆಸ್ಪತ್ರೆ ಯ ಸಿಬ್ಬಂದಿಯ ವಸತಿ ಮನೆಯಲ್ಲಿ ನಡೆದಿದೆ. ನಿನ್ನೆ ಎಲಿಜಬೆತ್ ಎಂಬುವ ನರ್ಸಿಂಗ್ ಸಿಬ್ಬಂದಿಯ ಮನೆಯಲ್ಲಿಯೇ ಕಳ್ಳರು ಕೈಚಳಕ ತೋರಿಸಿದ್ದು, ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ವಿದ್ಯಾನಗರದ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Read More »ಉಕ್ರೇನ್ನಿಂದ ಧಾರವಾಡಕ್ಕೆ ಸುರಕ್ಷಿತವಾಗಿ ಬಂದ ಮಿಲನ್
ಧಾರವಾಡ: ಯುದ್ಧಪೀಡಿತ ಉಕ್ರೇನ್ ದೇಶದಲ್ಲಿ ಸಿಲುಕಿಕೊಂಡಿದ್ದ ಧಾರವಾಡದ ಮಿಲನ್ ದೇವಮಾನೆ ನಿನ್ನೆ ಸಂಜೆ ಸುರಕ್ಷಿತವಾಗಿ ಧಾರವಾಡಕ್ಕೆ ಬಂದು ತಲುಪಿದ್ದಾರೆ. ಉಕ್ರೇನ್ ದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವುದಕ್ಕಾಗಿ ತೆರಳಿದ್ದ ಮಿಲನ್, ರಷ್ಯಾ ಮತ್ತು ಉಕ್ರೇನ್ ದೇಶಗಳ ಮಧ್ಯೆ ನಡೆದ ಯುದ್ಧದಿಂದಾಗಿ ಉಕ್ರೇನ್ ದೇಶದಲ್ಲಿ ಸಿಲುಕಿ ವಾಪಸ್ ಭಾರತಕ್ಕೆ ಬರಲಾಗದೇ ಅಲ್ಲೇ ಸಿಲುಕಿಕೊಂಡಿದ್ದ. ಸುರಕ್ಷಿತವಾಗಿ ಧಾರವಾಡಕ್ಕೆ ಬರಲು ಅನುವು ಮಾಡಿಕೊಟ್ಟ ಭಾರತ ಸರ್ಕಾರಕ್ಕೆ ಮಿಲನ್ ಧನ್ಯವಾದ ಸಲ್ಲಿಸಿದ್ದಾರೆ. ಅಲ್ಲದೇ ಉಕ್ರೇನ್ನಲ್ಲಿ ನಡೆದ ಯುದ್ಧದ …
Read More »ಮಹಿಳೆ ಎಂದರೆ ಒಂದು ಶಕ್ತಿ : ಆಯುಕ್ತ ಗೋಪಾಲಕೃಷ್ಣ
ಧಾರವಾಡ: ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ದೀನದಯಾಳ ಅಂತ್ಯೋಂದಯ ಯೋಜನೆಯ ಧಾರವಾಡದಲ್ಲಿ ಮದಿಹಾಳದ ಜೋಶಿ ಭವನದಲ್ಲಿ ಸ್ವ ಸಹಾಯ ಗುಂಪುಗಳ ಪ್ರದೇಶ ಮಟ್ಟದ ಮತ್ತು ನಗರ ಮಟ್ಟದ ಒಕ್ಕೂಟದ ಸದಸ್ಯರಗಳಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಮ್ಮಿಕೋಳ್ಳಲಾಗಿತ್ತು . ಅಧ್ಯಕ್ಷತೆ ವಹಿಸಿ ಮಾತನಾಡಿದ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಗೋಪಾಲಕೃಷ್ಣ ಮಾತನಾಡಿ, ಮಹಿಳೆ ಎಂದರೆ ಒಂದು ಶಕ್ತಿ ಇಂತಹ ಅನೇಕ ಶಕ್ತಿ ಒಂದುಗೂಡಿ ಅಭಿವೃದ್ಧಿ ಹೊಂದಬೇಕು ಗುಜರಾತಿನ …
Read More »ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ: ಲೋಕಾಯುಕ್ತರಿಗೆ ಮನವಿ ಸಲ್ಲಿಕೆ
ಅಣ್ಣಿಗೇರಿ: ಬಸಾಪುರ ಗ್ರಾಮ ಸ್ಥಳಾಂತರ ಹಿನ್ನೆಲೆಯಲ್ಲಿ ನಡೆದ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಲೋಕಾಯುಕ್ತರಿಗೆ ದೂರು ನೀಡಿದ ವ್ಯಕ್ತಿಯ ಮೇಲೆ ನಡೆದ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಸೂಕ್ತ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಣ್ಣಿಗೇರಿ ತಾಲೂಕು ಘಟಕವು ತಾಲೂಕು ದಂಡಾಧಿಕಾರಿ ಮಂಜುನಾಥ ಅಮಾಸೆ ಅವರಿಗೆ ಮನವಿ ಸಲ್ಲಿಸಿದೆ. 2009-10ರಲ್ಲಿ ಬಾರಿ ಪ್ರವಾಹ ಬಂದು ಬಸಾಪುರ ಗ್ರಾಮ ಜಲಾವೃತಗೊಂಡಿತ್ತು. …
Read More »ರೈಲಿನಲ್ಲಿ ಚಾಕು ಇರಿದಿದ್ದ ಆರೋಪಿತರ ಬಂಧನ : ಕೃತ್ಯದಲ್ಲಿ ಅಪ್ರಾಪ್ತ ಭಾಗಿ
ಹುಬ್ಬಳ್ಳಿ: ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕರೊಬ್ಬರಿಗೆ ಚಾಕುವಿನಿಂದ ಇರಿದು ಹಣ, ಮೊಬೈಲ್ ಫೋನ್ ಸುಲಿಗೆ ಮಾಡಿದ್ದ ಆರೋಪಿ ಹಾಗೂ ಅಪ್ರಾಪ್ತ ಬಾಲಕನೊಬ್ಬನನ್ನು ಹುಬ್ಬಳ್ಳಿ ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಳೇ ಹುಬ್ಬಳ್ಳಿ ನೂರಾನಿ ಗೌಂಡ್ ನಿವಾಸಿ ಮಹಮ್ಮದ ರಫೀಕ್ ಅಲಿಯಾಸ್ ಕಲಾ ಅಬುಲ್ ರಜಾಕ್ ಮುಲ್ಲಾ (25) ಬಂಧಿತ ಆರೋಪಿ. ಫೆಬ್ರವರಿ 23ರಂದು ರಾತ್ರಿ ಬೆಳಗಾವಿ-ಬೆಂಗಳೂರು ಎಕ್ಸ್ಪ್ರೆಸ್ ರೈಲಿನಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಧಾರವಾಡದ ಆರ್.ಜೆ.ಬೆಟಸೂರ ಅವರಿಗೆ ಚಾಕುವಿನಿಂದ ಇರಿದಿದ್ದರು. ಹಣ, …
Read More »ಪೆಟ್ರೋಲಿಯ ಬೆಲೆ ಹೆಚ್ಚಳ ಕುರಿತು ಜನರಲ್ಲಿ ಆತಂಕ ಸೃಷ್ಟಿ
ಹುಬ್ಬಳ್ಳಿ : ಕೊರೊನಾದಿಂದ ಜನರು ಈಗಾಗಲೇ ತತ್ತರಿಸಿ ಹೋಗಿದ್ದಾರೆ. ಈಗ ಮತ್ತೆ ದಿನಸಿ ವಸ್ತುಗಳು ಹಾಗೂ ತೈಲ ಬೆಲೆ ಏರಿಕೆ ಆಗುವುದರಿಂದ ನಿತ್ಯದ ಜೀವನ ನಡೆಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಈ ಹಿನ್ನಲೆ ಮತ್ತೇ ಹುಬ್ಬಳ್ಳಿ ಜನರಲ್ಲಿ ಹೊಸ ಆತಂಕ ಸೃಷ್ಟಿ ಆಗಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧದ ಹಿನ್ನೆಲೆಯಲ್ಲಿ ಭಾರತದಲ್ಲಿ ತೈಲ ಬೆಲೆ ಹೆಚ್ಚಳ ಆಗುವ ಸಾಧ್ಯತೆ ಇದೆ ಎಂಬ ಚರ್ಚೆ ಪ್ರಾರಂಭವಾದ ಪರಿಣಾಮ ಸಾರ್ವಜನಿಕರಲ್ಲಿ ಮತ್ತೇ ಹೊಸ …
Read More »ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ
ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಮಾರ್ಚ್ ಅಂತ್ಯದೊಳಗೆ 100 ಕೃಷಿ ಸಂಜೀವಿನಿ ಸಂಚಾರಿ ವಾಹನಗಳನ್ನು ನೀಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಕೃಷಿ ಸಂಬಂಧ ಬೆಳೆ, ಕೀಟ ನಿಯಂತ್ರ ಕುರಿತು ಮಾಹಿತಿ ಹಾಗೂ ಮಣ್ಣು ಪರೀಕ್ಷೆಗಳನ್ನು ರೈತರ ಜಮೀನಿನ ಬಳಿಯೇ ನೀಡುವ ಕೃಷಿ ಸಂಜೀವಿನಿ ವಾಹನಗಳ ಸೇವೆಯನ್ನು ಕೊಪ್ಪಳ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, …
Read More »ಮೇಕೆದಾಟು ಯೋಜನೆ ಕುರಿತು ಸರ್ವಪಕ್ಷ ಸಭೆ ಕರೆಯಲಾಗುವುದು : ಬೊಮ್ಮಾಯಿ
ಬೆಂಗಳೂರು: ಮೇಕೆದಾಟು ಯೋಜನೆ ಕುರಿತು ಚರ್ಚಿಸಲು ಮುಂದಿನ ವಾರ ಸರ್ವಪಕ್ಷ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಮೇಕೆದಾಟು ಯೋಜನೆ ಕರಿತು ಎಲ್ಲ ಪಕ್ಷಗಳ ಮುಖಂಡರನ್ನು ಹಾಗೂ ಕಾನೂನು ತಜ್ಞರನ್ನು ಕರೆದು ಅವರ ಅಭಿಪ್ರಾಯ ಮತ್ತು ಸಲಹೆಗಳನ್ನು ಸಂಗ್ರಹಿಸಲಾಗುತ್ತದೆ.ಅವರ ಸಲಹೆ ಹಾಗೂ ಅಭಿಪ್ರಾಯಗಳನ್ನು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಂಡು ಅದರಂತೆ ಕೆಲಸ ಮಾಡಲಾಗುತ್ತದೆ.
Read More »ಕೊಲೆ ಪ್ರಕರಣ : 5 ಆರೋಪಿಗಳ ಬಂಧನ
ಬೆಂಗಳೂರು: ನಗರದಲ್ಲಿ ಮೊಹಮ್ಮದ್ ಉಸ್ಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಜಾನೆ ಕಾರ್ಯಾಚರಣೆ ನಡೆಸಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಸೈಯದ್ ಮೋಹಿನ್, ಅದ್ನಾನ್ ಖಾನ್ ಮೇಲೆ ಫೈರಿಂಗ್ ಮಾಡಲಾಗಿದೆ. ಕಾಲಿಗೆ ಗುಂಡುಹಾರಿಸಿ ಇಬ್ಬರನ್ನು ಬಂಧಿಸಲಾಗಿದೆ.ಇವರೊಂದಿಗೆ ಅರ್ಬಾಜ್, ಮಜರ್ ಮತ್ತು ಸೈಯದ್ ಶಾಹಿದ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ : ನಿನ್ನೆ ರಾತ್ರಿ ಗಲಾಟೆ ನಡೆದು ಮೊಹಮ್ಮದ್ ಉಸ್ಮಾನ್ ನನ್ನು ಕೊಲೆ ಮಾಡಲಾಗಿತ್ತು. ಪುಲಕೇಶಿನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





