Breaking News

admin

ಪ್ರಧಾನಮಂತ್ರಿಯಿಂದ ನಾಳೆ ಸಮಾನತೆಯ ಪ್ರತಿಮೆ ಉದ್ಘಾಟನೆ

ನವದೆಹಲಿ : ICRISATನ 50ನೇ ವಾರ್ಷಿಕೋತ್ಸವದ ಪ್ರಯುಕ್ತ ಮತ್ತು 11ನೇ ಶತಮಾನದ ಭಕ್ತಿ ಸಂತ ರಾಮಾನುಜಾಚಾರ್ಯರ ಸ್ಮರಣಾರ್ಥ 216 ಅಡಿ ಎತ್ತರದ ‘ಸಮಾನತೆಯ ಪ್ರತಿಮೆ’ಯನ್ನು ಉದ್ಘಾಟಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ನಾಳೆ ಹೈದರಾಬಾದ್‌ಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆ ಹೈದರಾಬಾದ್‌ನಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ದಕ್ಷಿಣ ಭಾರತದ ಸಮಾಜ ಸುಧಾರಕರಲ್ಲಿ ಅತ್ಯಂತ ಪ್ರಮುಖರೆನಿಸಿದವರು ಶ್ರೀ ರಾಮಾನುಜಾಚಾರ್ಯರು. ವಿಶಿಷ್ಠಾದ್ವೈತ ಸಿದ್ಧಾಂತದ ಪ್ರತಿಪಾದಕರಾಗಿದ್ದ ಶ್ರೀಗಳು, ಭೂಮಿ ಮೇಲೆ ಅವತರಿಸಿ ಸಾವಿರ ವರ್ಷ ಪೂರ್ಣಗೊಂಡಿರುವ ನಿಮಿತ್ತ …

Read More »

ರಂಗಕಲೆಯೂ ಸಾಂಸ್ಕೃತಿಕ ವಲಯದಲ್ಲಿ ತನ್ನದೆ ಚಾಪು ಮೂಡಿಸುತ್ತಿದೆ : ರಮೇಶ ಪರವಿನಾಯ್ಕರ

ಕಲಘಟಗಿ : ರಂಗಾಯಣವು ಕಾಲೇಜು ಯುವಕರಲ್ಲಿ ರಂಗಕಲೆ ಆಸಕ್ತಿ ಮೂಡಿಸಲು ಇಂತಹ ತರಬೇತಿಗಳನ್ನು ಸಂಘಟಿಸಲಾಗಿದೆ. ಇದರಿಂದ ವ್ಯಕ್ತಿತ್ವ ವಿಕಸನದ ಜೊತೆಗೆ ವೇದಿಕೆಯ ಬಯ ತೊಡೆದುಹಾಕಲು ಅನುಕೂಲವಾಗುತ್ತದೆ ಮತ್ತು ರಂಗಾಯಣವು ಪ್ರತಿವಾರ ವಾರಾಂತ್ಯ ನಾಟಕಗಳನ್ನು ಆಯೋಜಿಸಿ ಕಲೆ ಸಾಹಿತ್ಯ ಸಾಂಸ್ಕೃತಿಕ ವಲಯದಲ್ಲಿ ತನ್ನದೆ ಚಾಪು ಮೂಡಿಸುತ್ತಿದೆ ಎಂದು ರಂಗಾಯಣ ನಿರ್ದೇಶಕರಾದ ರಮೇಶ ಪರವಿನಾಯ್ಕರ ಮಾತನಾಡಿದರು. ಕಲಘಟಗಿಯ ಗುಡ್ ನ್ಯೂಜ್ ಕಲಾ ಹಾಗೂ ವಾಣಿಜ್ಯ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಕರ್ನಾಟಕ ಸರಕಾರದ ರಂಗಾಯಣ …

Read More »

ಗಾಯಕಿ ಲತಾ ಮಂಗೇಶ್ಕರ್‌ ಅವರ ಆರೋಗ್ಯ ಸ್ಥಿತಿ ಗಂಭೀರ

ಕೊರೊನಾದಿಂದ ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಅವರ ಆರೋಗ್ಯ ಸ್ಥಿತಿ ಮತ್ತೆ ಬಿಗಡಾಯಿಸಿದೆ ಎನ್ನಲಾಗಿದೆ. 92 ವರ್ಷದ ಲತಾ ಮಂಗೇಶ್ಕರ್‌ ಅವರು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆಂದು ಕೆಲ ದಿನಗಳ ಹಿಂದಷ್ಟೇ ಹೇಳಲಾಗಿತ್ತಾದರೂ ಮತ್ತೆ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನಲೆಯಲ್ಲಿ ಐಸಿಯು ನಲ್ಲಿರಿಸಿ ವೈದ್ಯರ ತಂಡ ತೀವ್ರ ನಿಗಾ ವಹಿಸಿದೆ ಎಂದು ತಿಳಿದುಬಂದಿದೆ. ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದರೂ ಸಹ ಆತಂಕಪಡುವ ಅಗತ್ಯವಿಲ್ಲವೆಂದು ವೈದ್ಯರ ತಂಡ …

Read More »

ಕಾಂಗ್ರೆಸ್ ತೊರೆದು ಜೆಡಿಎಸ್​ ಸೇರಲು ದಿನಾಂಕ ಪ್ರಕಟಿಸುವೆ : ಸಿ.ಎಂ. ಇಬ್ರಾಹಿಂ

ಬೆಂಗಳೂರು : ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಅವರು ಜೆಡಿಎಸ್ ಸೇರುವ ಕುರಿತಂತೆ ಮಹತ್ವದ ಮಾಡಿದ್ದು, ಫೆ. 14 ರಂದು ಹುಬ್ಬಳ್ಳಿ ಸಭೆ ನಂತರ ಜೆಡಿಎಸ್ ಸೇರುವೆ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ತೊರೆದು ಜೆಡಿಎಸ್​ ಸೇರಲು ದಿನಾಂಕ ಪ್ರಕಟಿಸುವೆ.ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಡಲು ತೀರ್ಮಾನಿಸಿದ್ದೇ‌ನೆ. ನಾನು ಬಿಟ್ಟರೆ ಇನ್ನು ಕೆಲವರಿಗೆ ಅವಕಾಶ ಸಿಗುತ್ತದೆ. ಇಬ್ರಾಹಿಂಗೆ ಖಾದರ್ ಸರಿಸಮಾನ ಅನ್ನೋದಾದರೆ, ಸಿದ್ದರಾಮಯ್ಯಗೆ ವಿಶ್ವನಾಥ್ …

Read More »

ಹಿಜಾಬ್ ವಿವಾದಕ್ಕೆ ಕಿಡಿಕಾರಿದ ಯತ್ನಾಳ್

ಮೈಸೂರು: ಹಿಜಾಬ್ ಧರಿಸಬೇಕೆಂದರೆ ನೀವು ಪಾಕಿಸ್ತಾನಕ್ಕೆ ಹೋಗಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಶಾಸಕ ಯತ್ನಾಳ್, ಇಂದು ಕಾಲೇಜಿಗೆ ಹಿಜಾಬ್ ಧರಿಸಿ ಬರುತ್ತೇವೆ ಎಂದು ಹೇಳುವವರು ನಾಳೆ ಶಾಲೆಯಲ್ಲಿ ಮಸೀದಿ ಕಟ್ಟಲು ಅವಕಾಶ ಕೊಡಿ ಎನ್ನುತ್ತಾರೆ.ತಾಲಿಬಾನ್ ಸಂಸ್ಕೃತಿಗೆ ಅವಕಾಶ ಕೊಡಲ್ಲ ಎಂದು ವಾಗ್ದಾಳಿ ನಡೆಸಿದರು.

Read More »

ಬ್ರಾಹ್ಮಣ ಯುವಕ ಯುವತಿಯರಿಗೆ ಸ್ವ ಉದ್ಯೋಗಕ್ಕಾಗಿ ಸಾಲ ಸೌಲಭ್ಯ: ಲಕ್ಷ್ಮಣ ಚಿದಂಬರ ಕುಲಕರ್ಣಿ

ಹುಬ್ಬಳ್ಳಿ: ಸ್ವ ಉದ್ಯೋಗ ಕೈಗೊಳ್ಳುವ ದಿಶೆಯಿಂದ ಸಾಲ ಯೋಜನೆಯನ್ನು ಕೆನರಾ ಬ್ಯಾಂಕಿನ ಒಪ್ಪಂದ ಮೂಲಕ ಕೈಗೊಂಡಿದ್ದು ,ಸ್ವ – ಉದ್ಯೋಗ ಮಾಡುವ ಯುವಕ ಯುವತಿಯರಿಗೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಬ್ರಾಹ್ಮಣ ಯುವಕ ಯುವತಿಯರಿಗೆ ಆರ್ಥಿಕ ಸಬಲೀಕರಣ ಹೊಂದಲು ಶೇ.20 ಸಬ್ಸಿಡಿಯೊಂದಿಗೆ 1 ಲಕ್ಷ ರೂಪಾಯಿ ಸಾಲವನ್ನು ಕೊಡಲು ಹೊಸ ಯೋಜನೆ ಮಾಡಲಾಗಿದೆ ಎಂದು‌ ವಿಶ್ವ ವಿಪ್ರ ಸೇವಾ ಟ್ರಸ್ಟ್ ಅಧ್ಯಕ್ಷ ಲಕ್ಷ್ಮಣ ಚಿದಂಬರ ಕುಲಕರ್ಣಿ ಹೇಳಿದರು. ನಗರದಲ್ಲಿಂದು …

Read More »

ಪವರ್ ಸ್ಟಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ

ಬೆಂಗಳೂರು: ಪುನೀತ್​ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾದ ಪೋಸ್ಟರ್​ ಒಂದನ್ನ ಬಿಡುಗಡೆ ಮಾಡಿದ್ದ ಚಿತ್ರ ತಂಡ ಈಗ ಸಿನಿಮಾ ಟೀಸರ್​ ಬಿಡುಗಡೆಗೆ ದಿನಾಂಕ ಫಿಕ್ಸ್​ ಮಾಡಿದೆ. ಫೆಬ್ರವರಿ 11 ರಂದು ಸರಿಯಾಗಿ 11 ಗಂಟೆ 11 ನಿಮಿಷಕ್ಕೆ ಜೇಮ್ಸ್​ ಸಿನಿಮಾದ ಟೀಸರ್​ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇನ್ನೂ ಜೇಮ್ಸ್​ ಸಿನಿಮಾದಲ್ಲಿ ಪ್ರಿಯಾ ಆನಂದ್​ ಹಿರೋಯಿನ್​ ಆಗಿ ನಟಿಸಿದ್ದು, ತೆಲುಗು ನಟ ಶ್ರೀಕಾಂತ್​, ಶರತ್​ ಕುಮಾರ್​ ರಾಘವೇಂದ್ರ ರಾಜ್​ಕುಮಾರ್​, ಮುಂತಾದ ಕಲಾವಿದರು …

Read More »

ಪ್ರವಾಸಕ್ಕೆ ಹೋದ ವಿಮಾನ ಪತನ : 7 ಜನ ಸಾವು

ಲಿಮಾ: ವಿಶ್ವ ಪಾರಂಪರಿಕ ತಾಣ ಪೆರು ದೇಶದ ನಾಜ್ಕಾ ರೇಖೆಗಳನ್ನು ನೋಡಲು ಹೊರಟಿದ್ದ ವಿಮಾನವೊಂದು ಪತನವಾಗಿ ಏಳು ಜನ ಮೃತಪಟ್ಟ ಘಟನೆ ನಡೆದಿದೆ.ಪ್ರವಾಸಿಗರನ್ನು ಹೊತ್ತ ಲಘು ವಿಮಾನ ಇದಾಗಿತ್ತು. ಏರೋ ಸ್ಯಾಂಟೋಸ್ ಎಂಬ ಟೂರ್ ಸಂಸ್ಥೆಯ ವಿಮಾನ ಇದಾಗಿದೆ. ಐವರು ಪ್ರವಾಸಿಗರು, ಓರ್ವ ಪೈಲಟ್ ಮತ್ತು ಸಹ ಪೈಲಟ್ ಸೇರಿ ಏಳು ಜನ ಮೃತಪಟ್ಟಿದ್ದಾರೆ. ಪ್ರವಾಸಿಗರ ಗುರುತು ಮತ್ತು ದೇಶ ಪತ್ತೆ ಹಚ್ಚಲಾಗುತ್ತಿದೆ. 1500 ರಿಂದ 2000 ವರ್ಷಗಳ ಹಿಂದೆ …

Read More »

ಕೋವಿಡ್ ಸೋಂಕು ಇಳಿಕೆ : ಹೈಕೋರ್ಟ್ ಕಲಾಪಗಳಿಗೆ ವಿಧಿಸಿದ್ದ ನಿರ್ಬಂಧ ಸಡಿಲ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಮಾಣ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಕಲಾಪಗಳಿಗೆ ವಿಧಿಸಿದ್ದ ನಿರ್ಬಂಧಗಳನ್ನು ಸಡಿಲಿಸಲಾಗಿದ್ದು, ಸೋಮವಾರದಿಂದ ಜಾರಿಗೆ ಬರುವಂತೆ ಹೊಸ ಎಸ್‌ಒಪಿ ಹೊರಡಿಸಲಾಗಿದೆ. ಹೈಕೋರ್ಟ್ ಕಲಾಪಗಳಿಗೆ ಸಂಬಂಧಿಸಿದಂತೆ ನೂತನ ಎಸ್‌ಒಪಿ ಪ್ರಕಟಿಸಿ ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಿವಶಂಕರೇಗೌಡ ಆದೇಶ ಹೊರಡಿಸಿದ್ದು, ಬೆಂಗಳೂರು ಪ್ರಧಾನ ಪೀಠದಲ್ಲಿ ಭೌತಿಕ ಕಲಾಪಗಳಿಗೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಲಾಗಿದೆ.

Read More »

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 8.72 ಲಕ್ಷ ಹುದ್ದೆಗಳು ಖಾಲಿ

ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2020 ಮಾರ್ಚ್‌1ರ ವರೆಗೆ 8.72 ಲಕ್ಷ ಹುದ್ದೆಗಳು ಖಾಲಿ ಇದ್ದವು ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು  ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ (ಎಸ್‌ಎಸ್‌ಸಿ), ಕೇಂದ್ರ ಲೋಕ ಸೇವಾ ಆಯೋಗ(ಯುಪಿಎಸ್‌ಸಿ) ಮತ್ತು ರೈಲ್ವೆ ನೇಮಕಾತಿ ಮಂಡಳಿಗಳು (ಆರ್‌ಆರ್‌ಬಿ) 2018-19 ಮತ್ತು 2020-21ರ ಅವಧಿಯಲ್ಲಿ 2.65 ಲಕ್ಷ ನೇಮಕಾತಿಗಳನ್ನು ನಡೆಸಿವೆ ಎಂದೂ ಲಿಖಿತ ಉತ್ತರದಲ್ಲಿ ಸಚಿವರು …

Read More »