Breaking News

admin

ಕರುಳು ಕುಡಿ ಮೃತದೇಹವನ್ನು ಕಂಡು ಕಣ್ಣೀರ ಧಾರೆ ಹರಿಸಿದ ಡಾ.ಸೌಂದರ್ಯ ತಂದೆ

ಬೆಂಗಳೂರು : ಯಡಿಯೂರಪ್ಪ ಅವರ ಪುತ್ರಿ ಪದ್ಮಾವತಿ ಅವರ ಮಗಳಾದ ಸೌಂದರ್ಯ(30) ವಸಂತ ನಗರದ ಫ್ಯಾಟ್ ನಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. 9 ತಿಂಗಳ ಪುಟ್ಟ ಮಗು ಇದ್ದರೂ ಆತ್ಮಹತ್ಯೆ ಮಾಡಿಕೊಂಡಿಕೊಂಡಿದ್ದಾರೆ ಈ ಘಟನೆ ಹಿನ್ನಲೆಡಾ.ಸೌಂದರ್ಯ ಅವರ ತಂದೆ ತಾಯಿ ಹುಬ್ಬಳ್ಳಿಯಿಂದ ಬೆಂಗಳೂರುಗೆ ಆಗಮಿಸಿದ್ದಾರೆ. ಅಳಿಯ ಡಾ.ನೀರಜ್ ಫಾರ್ಮ್ ಹೌಸ್ ತಲುಪಿದಂತ ಅವರು, ಮಗಳು ಡಾ.ಸೌಂದರ್ಯ ಮೃತದೇಹ ಕಾಣುತ್ತಿದ್ದಂತೆ ತಂದೆ ವಿರೂಪಾಕ್ಷಪ್ಪ ಅವರುಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇನ್ನೇನು …

Read More »

ಮೊಮ್ಮಗಳ ಹಣೆ ಮುಟ್ಟಿ ಕಣ್ಣೀರು ಹಾಕಿದ ಬಿಎಸ್ ವೈ

ಬೆಂಗಳೂರು: ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಅವರ ಮೊಮ್ಮಗಳು ಡಾ. ಸೌಂದರ್ಯ ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುದ್ದಿನ ಮೊಮ್ಮಗಳ ಪಾರ್ಥಿವ ಶರೀರ ಕಂಡು ಈ ವೇಳೆ ಯಡಿಯೂರಪ್ಪ ಮೊಮ್ಮಗಳ ಹಣೆ ಮುಟ್ಟಿಕಣ್ಣೀರು ಹಾಕಿದ್ದಾರೆ. ಡಾ. ಸೌಂದರ್ಯ ಅವರ ಅಂತ್ಯಕ್ರಿಯೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಶಿವಗಂಗೆಯ ಹೊನ್ನಮ್ಮಗವಿಮಠದ ರುದ್ರಮುನಿ ‌ಶ್ರೀಗಳ ನೇತೃತ್ವದಲ್ಲಿ ವಿಧಿವಿಧಾನಗಳು ನಡೆಯುತ್ತಿವೆ. ಜೊತೆಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಆಗಮಿಸಿದ ಡಾ. ಸೌಂದರ್ಯ ತಾಯಿ ಪದ್ಮಾ ಹಾಗೂ ತಂದೆ ವಿರೂಪಾಕ್ಷಪ್ಪ ಮರಡಿ ಮಗಳ ಪಾರ್ಥಿವ …

Read More »

ಬಿಎಸ್ ವೈ ಮೊಮ್ಮಗಳ ಆತ್ಯಹತ್ಯೆ ಪ್ರಕರಣ : ಗಣ್ಯರಿಂದ ಸಾಂತ್ವನ

ಬೆಂಗಳೂರು : ಯಡಿಯೂರಪ್ಪ ಅವರ ಪುತ್ರಿ ಪದ್ಮಾವತಿ ಅವರ ಮಗಳಾದ ಸೌಂದರ್ಯ(30) ವಸಂತ ನಗರದ ಫ್ಯಾಟ್ ನಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. 9 ತಿಂಗಳ ಪುಟ್ಟ ಮಗು ಇದ್ದರೂ ಆತ್ಮಹತ್ಯೆ ಮಾಡಿಕೊಂಡಿಕೊಂಡಿದ್ದಾರೆ ಈ ಘಟನೆ ಹಿನ್ನಲೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮೌನಕ್ಕೆ ಶರಣಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಮೌನಕ್ಕೆ ಶರಣಾಗಿದ್ದಾರೆ. ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಕರೆ …

Read More »

ಹುಬ್ಬಳ್ಳಿಯ ಚೆನ್ನಮ್ಮದಲ್ಲಿ ಬೃಹತ್ ರಂಗೋಲಿ ಹಾಕುವ ಮೂಲಕ ಸಿಎಂ ಹುಟ್ಟುಹಬ್ಬ ಆಚರಣೆ

ಹುಬ್ಬಳ್ಳಿ : ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರ 62 ನೇ ಹುಟ್ಟುಹಬ್ಬದ ಅಂಗವಾಗಿ ಚೆನ್ನಮ್ಮದಲ್ಲಿ ಬೃಹತ್ ರಂಗೋಲಿ ಹಾಕುವ ಮೂಲಕ ಆಚರಣೆ ಮಾಡಲಾಯಿತು. ಹುಬ್ಬಳ್ಳಿಯ ಕಿತ್ತೂರ ವರ್ತುಲದಲ್ಲಿಂದು ಕಲಾವಿದ ದಿನೇಶ್ ಚಿಲ್ಲಾಳ ಬೃಹತ್ ರಂಗೋಲಿ ಚಿತ್ರ ಬಿಡಿಸುವ ಮೂಲಕ ವಿನೂತನವಾಗಿ ಬೊಮ್ಮಾಯಿ ಅವರ ನಾಯಕ ಕಿರಣ ಹುಟ್ಟುಹಬ್ಬವನ್ನು ಆಚರಿಸಲಾಯಿತು . ಯುವ ಉಪ್ಪಾರ ಹಾಗೂ ಬೊಮ್ಮಾಯಿ ಅಭಿಮಾನಿಗಳು ಉಪಸ್ಥಿತರಿದ್ದರು .

Read More »

104 ಆರೋಗ್ಯವಾಣಿ ಸಿಬ್ಬಂದಿ ಮನವಿ ಸಲ್ಲಿಕೆ

ಹುಬ್ಬಳ್ಳಿ: ಸರಕಾರದ ನಿಯಮಾವಳಿಗಳ ಪ್ರಕಾರ ಪಿರಾಮಲ್ ಸ್ವಾಸ್ತ್ಯ ಕಂಪನಿ ಸಿಬ್ಬಂದಿಗಳಿಗೆ ಯಾವುದೇ ಸವಲತ್ತುಗಳನ್ನು ನೀಡದೇ ಅನ್ಯಾಯವೆಸಗುತ್ತಿದ್ದು ಕಂಪನಿ ವಿರುದ್ಧ ದೂರು ನೀಡಲು ಗುರುವಾರ 104 ಆರೋಗ್ಯ ವಾಣಿ ಸಿಬ್ಬಂದಿಗಳು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಗೃಹ ಕಚೇರಿಗೆ ತೆರಳಿ ದೂರು ಸಲ್ಲಿಸಿದರು. ಕಂಪನಿ ಬಾಕಿ ಉಳಿಸಿಕೊಂಡಿರುವ ಎರಡೂವರೆ ತಿಂಗಳ ವೇತನ, ಎರಡು ವರ್ಷಗಳ ವೇತನ ಬಡ್ತಿಯ ಮೊತ್ತ, ಗ್ರಾಚ್ಯುಟಿ ಗೆ ಸಂಬಂಧಿಸಿದ ಹಣ ಹಾಗೂ ಮುಷ್ಕರ ದಿನಗಳ ವೇತನವನ್ನು …

Read More »

ಮುಗದ ಕೆರೆಯಲ್ಲಿ ಅಳಿಯ, ಮಾವನ ದಾರುಣ ಸಾವು

ಧಾರವಾಡ: ಕೆರೆಯಲ್ಲಿ ಈಜಲೆಂದು ಹೋಗಿ ಈಜು ಬರದೇ ಮುಳುಗುತ್ತಿದ್ದ ಅಳಿಯನನ್ನು ರಕ್ಷಿಸಲು ಹೋಗಿ ಅಳಿಯನ ಸಮೇತ ಮಾವನೂ ದಾರುಣವಾಗಿ ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ಮುಗದ ಗ್ರಾಮದ ಕೆರೆಯಲ್ಲಿ ನಡೆದಿದೆ. ಅಳಿಯ ಕರೆಪ್ಪ ಎಂಬಾತ ಕೆರೆಯಲ್ಲಿ ಈಜಲು ಹೋಗಿದ್ದ. ಈತನಿಗೆ ಈಜು ಬರದೇ ಮುಳುಗುತ್ತಿದುದನ್ನು ಕಂಡು ಆತನ ರಕ್ಷಣೆಗೆ ಮಾವ ವಿಠ್ಠಲ ಕುರುಬರ ಧಾವಿಸಿದ್ದಾನೆ. ಆದರೆ, ಇಬ್ಬರಿಗೂ ಈಜು ಬರದೇ ಮುಳುಗಿ ಸಾವನ್ನಪ್ಪಿದ್ದಾರೆ. ಮುಗದ ಗ್ರಾಮದಲ್ಲಿ ಬೀರಲಿಂಗೇಶ್ವರ ಮೂರ್ತಿ ಸ್ಥಾಪನೆ …

Read More »

ನರಗುಂದದ ಸಮೀರ್ ಶಹಾಪುರ ಹತ್ಯೆ ಕೇಸ್‌ : ಕುಟುಂಬಕ್ಕೆ ನ್ಯಾಯ ಒದಗಿಸಲು ಒತ್ತಾಯ

ಹುಬ್ಬಳ್ಳಿ: ನರಗುಂದ ತಾಲೂಕಿನಲ್ಲಿ ನಡೆದ ಸಮೀರ್ ಶಹಾಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಸರ್ಕಾರ ಮೃತನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಬಹುತ್ವ ಕರ್ನಾಟಕ ಸಂಘಟನೆ ಕಾರ್ಯಕರ್ತ ಶಬ್ಬೀರ್ ಅಹ್ಮದ್ ಒತ್ತಾಯಿಸಿದ್ದಾರೆ. ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಜ.16ರಂದು ಗಲಾಟೆ ಆದಾಗ ಸಂಜು ನಾಲವಾಡ ಎಂಬಾತನನ್ನು ಬಂಧಿಸಿದ್ದರೆ ಈ ಘಟನೆ ಆಗುತ್ತಿರಲಿಲ್ಲ. ಆದರೆ ಪೊಲೀಸರ ನಿರ್ಲಕ್ಷ್ಯದಿಂದ ಸಮೀರ ಹತ್ಯೆಯಾಗಿದೆ. ಕೊಲೆ ಬಳಿಕ ಯಾವ …

Read More »

ನಿಧಿ ಆಸೆಗಾಗಿ ಈಶ್ವಲಿಂಗುವನ್ನೇ ಕದ್ದ ಕಳ್ಳರು

ಗದಗ:ಪುರಾತನ ದೇವಸ್ಥಾನದ ಈಶ್ವರಲಿಂಗುವನ್ನೆ ಕಳ್ಳರು ಕದ್ದೊಯ್ದ ಘಟನೆ ಗಜೇಂದ್ರಗಡದ ಎಪಿಎಂಸಿ ಪುರಾತನ ದೇವಾಸ್ಥಾನದಲ್ಲಿ ನಡೆದಿದೆ. ದೇವಸ್ಥಾನದ ಕೀಲಿ ಒಡೆದು ಈಶ್ವರಪೀಠದ ಮೇಲೆ ಇದ್ದ ಈಶ್ವರಲಿಂಗುವನ್ನ ಕಳ್ಳರು ಕದ್ದುಕೊಂಡು ಹೋಗಿದ್ದಾರೆ. ನಿಧಿ ಆಸೆಗಾಗಿಯೇ ಈಶ್ವಲಿಂಗುವನ್ನ ಕದಿಯಲಾಗಿದೆ ಅಂತಲೇ ಶಂಕಿಸಲಾಗಿದೆ. ಗಜೇಂದ್ರಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಸ್ಥಳಕ್ಕೆ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.

Read More »

ಶಕ್ತಿಧಾಮಕ್ಕೆ ಭೇಟಿ ನೀಡಿ ಮಕ್ಕಳಿಗೆ ಬಾಡೂಟ ಬಡಿಸಿದ ಶಿವಣ್ಣ

ಮೈಸೂರು: ಚಿತ್ರೀಕರಣದ ಬ್ಯೂಸಿ ಕೆಲಸದ ಮಧ್ಯೆಯೂ ಶಿವಣ್ಣ ಶಕ್ತಿಧಾಮಕ್ಕೆ ಭೇಟಿ ನೀಡಿ ಮಕ್ಕಳಿಗೆ ಬಾಡೂಟ ಬಡಿಸಿದ್ದಾರೆ. ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​ ಅಭಿನಯದ ಚಿತ್ರದ ಶೂಟಿಂಗ್​ ಮೈಸೂರಿನಲ್ಲಿ ನಡೆಯುತ್ತಿದ ಹಿನ್ನಲೆ ಶಕ್ತಿಧಾಮಕ್ಕೆ ಭೇಟಿ ನೀಡಿದ್ದಾರೆ. ಮೈಸೂರಿನ ದೊನ್ನೆ ಬಿರಿಯಾನಿ ಪ್ಯಾಲೇಸ್ ವತಿಯಿಂದ ಸಚಿನ್ ಗೌಡ ಎನ್ನುವವರು ಶಕ್ತಿಧಾಮದ ಮಕ್ಕಳಿಗೆ ಬಿರಿಯಾನಿ ಹಾಗೂ ಕಬಾಬ್​ ಊಟ ಹಂಚಿದ್ದಾರೆ.

Read More »

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ನಿಧನ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಕಟ್ಟೆ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನಲೆ ರಾಮಚಂದ್ರ (75) ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ. ಕಟ್ಟೆ ರಾಮಚಂದ್ರ ಅವರಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

Read More »