Breaking News

admin

ದೇಶದಲ್ಲಿ 2,82,970 ಜನರಲ್ಲಿ ಕೋವಿಡ್ ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಮತ್ತೆ ಸ್ಫೋಟಗೊಂಡಿದ್ದು, ಕಳೆದ 24 ಗಂಟೆಯಲ್ಲಿ 2,82,970 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು, 24 ಗಂಟೆಯಲ್ಲಿ 441 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

Read More »

ವಿಜಯ ಮಲ್ಯಗೆ ಮನೆ ಖಾಲಿ ಮಾಡುವಂತೆ ಹೈಕೋರ್ಟು ಆದೇಶ

ಲಂಡನ್: ಭಾರತದ ಬ್ಯಾಂಕುಗಳಿಗೆ ಸುಮಾರು 9 ಸಾವಿರ ಕೋಟಿ ರೂಪಾಯಿ ಸಾಲ ಕೊಡದೇ ಪರಾರಿಯಾದ ಉದ್ಯಮಿ ವಿಜಯ ಮಲ್ಯ ಅವರನ್ನು ಕುಟುಂಬ ಸಮೇತ ಲಂಡನ್ ನಲ್ಲಿರುವ ಐಷಾರಾಮಿ ಮನೆಯಿಂದ ಹೊರಹಾಕಲು ಸ್ಥಳೀಯ ನ್ಯಾಯಾಲಯ ಆದೇಶಿಸಿದೆ. ಸ್ವಿಸ್ ಬ್ಯಾಂಕಿನ 200 ಕೋಟಿ ರೂಪಾಯಿ ಸಾಲ ವಸೂಲಿಗೆ ಮನೆಯನ್ನು ಜಪ್ತಿ ಮಾಡಲು ಕೋರ್ಟ್ ಆದೇಶ ನೀಡಿದೆ. ಸಾಲ ಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ಮಲ್ಯ ಅವರ ಲಂಡನ್ ನಿವಾಸವನ್ನು ವಶಕ್ಕೆ ಪಡೆಯಲು ಸ್ವಿಸ್ ಬ್ಯಾಂಕ್ ಸಲ್ಲಿಸಿದ್ದ …

Read More »

ಡಾ.ಚನ್ನವೀರ ಕಣವಿ ಆರೋಗ್ಯದಲ್ಲಿ ಏರುಪೇರು : ಚಿಕಿತ್ಸೆ ಮುಂದುವರಿದಿದ್ದು, ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ

ಧಾರವಾಡ : ಹಿರಿಯ ಕವಿ ಡಾ.ಚನ್ನವೀರ ಕಣವಿ ಅವರ ಆರೋಗ್ಯದಲ್ಲಿ ತುಸು ಮಟ್ಟಿನ ಏರುಪೇರು ಉಂಟಾಗಿದ್ದು, ವೈದ್ಯಕೀಯ. ಆಮ್ಲಜನಕ ಪ್ರಮಾಣವನ್ನು ಮಂಗಳವಾರ 8 ಲೀ. ಗೆ ಹೆಚ್ಚಿಸಲಾಗಿದೆ ಎಂದು ಎಸ್. ಡಿ. ಎಂ. ಆಸ್ಪತ್ರೆ ಹೆಲ್ತ್ ಬುಲೆಟಿನ್ ತಿಳಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾಡಳಿತ, ಡಾ. ಕಣವಿ ಅವರು ಪ್ರತಿದಿನದಂತೆ ಇಂದೂ ಸಹ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಅವರಿಗೆ ಉತ್ತಮ ಚಿಕಿತ್ಸೆ ನೀಡಲು ಜಿಲ್ಲಾಡಳಿತ, ಎಸ್.ಡಿ.ಎಮ್ ಆಸ್ಪತ್ರೆಯ ಆಡಳಿತ …

Read More »

ಕಾಂಗ್ರೆಸ್ ಮೇಕೆದಾಟು ಯೋಜನೆ ಪಾದಯಾತ್ರೆ ಬಗ್ಗೆ ಟೀಕೆ ಮಾಡಿದ ಕುಮಾರಸ್ವಾಮಿ

ಬೆಂಗಳೂರು: ಮೇಕೆದಾಟು ಯೋಜನೆಗೆ ಡಿಪಿಆರ್ ಮಾಡಿಸಿದ್ದೆವು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಸುಳ್ಳು. ಕಾಂಗ್ರೆಸ್ ಅಧಿಕಾರದಲ್ಲಿ ಯಾವುದೇ ಡಿಪಿಆರ್ ಮಾಡಿಲ್ಲ.  ಕಾಂಗ್ರೆಸ್ ನಾಯಕರ ಪಾದಯಾತ್ರೆ ಬಗ್ಗೆ ನನಗೆ ಯಾವುದೇ ಆತಂಕವಿಲ್ಲ, ಅವರು ಇನ್ನು 5 ವರ್ಷ ಬೇಕಾದರೂ ಪಾದಯಾತ್ರೆ ಮಾಡಲಿ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ನಾನು ಸಿಎಂ ಆಗಿದ್ದಾಗ ಹಲವು ನೀರಾವರಿ ಯೋಜನೆ ಜಾರಿಗೆ ತಂದಿದ್ದೆ ಎಂದರು. ಜನವರಿ 26ರಿಂದ ಜೆಡಿಎಸ್ …

Read More »

ಮೃತ ಸಮನ್ವಿ ಮನೆಗೆ ಭೇಟಿ : ಹೆತ್ತ ಕರಳಿಗೆ ಸಾಮಾಧಾನ ಹೇಳಿದ ಡಿಕೆಶಿ

ಬೆಂಗಳೂರು: : ಕನ್ನಡ ಖಾಸಗಿ ವಾಹಿನಿ ಜನಪ್ರಿಯ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಸಮನ್ವಿ(6) ಸಾವನ್ನಪ್ಪಿರುವ ಘಟನೆ ಕುಮಾರಸ್ವಾಮಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ತಾಯಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಸಮನ್ವಿ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದ್ದು, ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕಿರುತೆರೆ ನಟಿ ಅಮೃತಾ ಅವರ ಪುತ್ರಿ, ಖ್ಯಾತ ಹರಿಕಥಾ ವಿದ್ವಾಂಸ ಗುರುರಾಜಲು ನಾಯ್ಡು ಅವರ ಮರಿ ಮೊಮ್ಮಗಳು ಸಮನ್ವಿಯ ಗುಬ್ಬಲಾಳ ಸಮೀಪದ ಮನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ …

Read More »

ಹಾಸನದಲ್ಲಿ ಶಾಲೆಗಳಿಗೆ 3 ದಿನ ರಜೆ ಘೋಷಣೆ

ಹಾಸನ :  ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚಾಗಿದೆ. ಹಾಸನ, ಆಲೂರು ತಾಲೂಕಿನ ಶಾಲೆಗಳಲ್ಲಿ ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಶಾಲೆಗಳಿಗೆ 3 ದಿನ ರಜೆ ನೀಡಲಾಗಿದೆ. 1 ರಿಂದ 9ನೇ ತರಗತಿಗಳಿಗೆ ಮೂರು ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದೆ. ಕೋವಿಡ್ ಸಭೆ ನಡೆಸಿದ ಸಚಿವರು ಮಾಹಿತಿ ನೀಡಿ, ಆಲೂರು ತಾಲೂಕಿನ 39 ಶಾಲೆಯಲ್ಲಿ 161 ಮಕ್ಕಳಿಗೆ, ಹಾಸನದ 29 ಶಾಲೆಯ 288 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದ್ದು, ಎರಡು ತಾಲೂಕಿನ …

Read More »

ಫೆಬ್ರವರಿಗೂ ಶಾಲೆ, ಕಾಲೇಜು ಹಾಸ್ಟೆಲ್‍ಗಳನ್ನು ಬಂದ್ ಮಾಡುವುದು ಸೂಕ್ತ

ಬೆಂಗಳೂರು: ಕೋವಿಡ್ 3ನೇ ಅಲೆ ತೀವ್ರವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಫೆಬ್ರವರಿಗೂ ಶಾಲೆ, ಕಾಲೇಜು ಹಾಸ್ಟೆಲ್‍ಗಳನ್ನು ಬಂದ್ ಮಾಡುವುದು ಸೂಕ್ತ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾತ್ರಿ ಕಫ್ರ್ಯೂನಿಂದ ಸಮಸ್ಯೆ ಬಗೆಹರಿಯುವುದಿಲ್ಲ.ಇದರಿಂದ ಕೆಲವರಿಗೆ ಅನಾನುಕೂಲವಾಗಿದೆ. ಅಂಥವರಿಗೆ ರಿಯಾಯ್ತಿ ನೀಡಬೇಕು. ನೈಟ್ ಕರ್ಫ್ಯೂ ಜಾರಿ ಅವಶ್ಯಕತೆ ಇಲ್ಲ ಎಂದರು. ವೀಕೆಂಡ್ ಕರ್ಫ್ಯೂನಿಂದ ಕೆಲವರಿಗೆ ಕಷ್ಟವಾಗಿದೆ. ಅಂಥವರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ರೈತರು ತಮ್ಮ ಉತ್ಪನ್ನಗಳನ್ನು …

Read More »

ಹೆಣ್ಣಿನ ವಿಷಯಕ್ಕೆ ಬಿತ್ತು ಯುವಕನ ಹೆಣ

ಧಾರವಾಡ : ಜಿಲ್ಲೆ ಕಲಘಟಗಿ ತಾಲೂಕಿನ ಕುರುವಿನಕೊಪ್ಪ ಗ್ರಾಮದಲ್ಲಿ ಸುಮಾರು ಎರಡು ವರ್ಷಗಳಿಂದ ಹೆಣ್ಣು ಮಗಳೊಂದಿಗೆ ಸಲಿಗೆಯಿಂದ ನಡೆದುಕೊಂಡಿದ್ದ ಕ್ಕಾಗಿ ಸಿಟ್ಟು ತಾಳಲಾರದೆ ಯುವಕನ ಜೊತೆಗೆ ಜಗಳವಾಡುತ್ತಿದ್ದಾಗ ಕಲ್ಲಿನಿಂದ ಹೊಡೆದ ಪರಿಣಾಮ ಯುವಕ ಮೂರ್ಛೆ ಬಿದ್ದಿದ್ದು ಅವನನ್ನು ಕೂಡಲೇ ಕೆಎಂಸಿಗೆ ದಾಖಲಿಸಲಾಗಿತ್ತು. ಆದರೆ ಕೆಲವೇ ಕ್ಷಣಗಳಲ್ಲಿ ಮರಣ ಹೊಂದಿರುವ ಘಟನೆ ಇಂದು ನಡೆದಿದ್ದು ಈ ಪ್ರಕರಣ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಕಲಘಟಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ …

Read More »

ಬೆಂಗಳೂರುನಲ್ಲಿ 22,966 ಜನರಿಗೆ ಕೊರೋನಾ ಪಾಸಿಟಿವ್

ಬೆಂಗಳೂರು: ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಕೊಂಚ ಮಟ್ಟಿನ ಏರಿಕೆಯಾಗಿದ್ದು, ಇಂದು ನಗರದಲ್ಲಿ 22,966 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ. ಬೊಮ್ಮನಹಳ್ಳಿ ವಲಯದಲ್ಲಿ 2725, ದಾಸರಹಳ್ಳಿ 590, ಬೆಂಗಳೂರು ಪೂರ್ವ 3661, ಮಹದೇವಪುರ 3020, ಆರ್‍ಆರ್ ನಗರ 1672, ದಕ್ಷಿಣ ವಲಯ 3549, ಪಶ್ಚಿಮ 2232, ಯಲಹಂಕ 1489, ಅನೇಕಲ್ 950, ಬೆಂಗಳೂರು ಹೊರವಲಯ 1204 ಸೇರಿ ಒಟ್ಟು 22,966 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.

Read More »

ಮಾಸ್ಕ್ ಹಾಕೋದು ಬಿಡೋದು ಅವರವರ ನಿರ್ಧಾರ : ಉಮೇಶ್ ಕತ್ತಿ

ಬೆಳಗಾವಿ : ಮಾಸ್ಕ್ ಹಾಕೋದು ಬಿಡೋದು ಅವರವರ ನಿರ್ಧಾರ. ಯಾವುದೇ ನಿರ್ಬಂಧ ವಿಧಿಸಲ್ಲ ಎಂದು ಪ್ರಧಾನಿ ಮೋದಿಯವರೇ ಹೇಳಿದ್ದಾರೆ. ಹಾಗಾಗಿ ನನಗೆ ಮಾಸ್ಕ್ ಹಾಕಬೇಕೆನಿಸಿಲ್ಲ ಎಂದು ಉಮೇಶ್ ಕತ್ತಿಹೇಳಿದ್ದಾರೆ. ಮಾಸ್ಕ್ ಹಾಕದೇ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಸಚಿವ ಉಮೇಶ್ ಕತ್ತಿಯವರನ್ನು ಪ್ರಶ್ನಿಸಿದ್ದಕ್ಕೆ, ಸಚಿವರು ಬೇಜವಾಬ್ದಾರಿ ಉತ್ತರ ನೀಡಿದ್ದು, ಮಾಸ್ಕ್ ಹಾಕುವುದು ಬಿಡುವುದು ನನ್ನ ವೈಯಕ್ತಿಕ ನಿರ್ಧಾರ. ನನಗೆ ಮಾಸ್ಕ್ ಹಾಕಬೇಕಂತ ಅನಿಸಿಲ್ಲ, ಹೀಗಾಗಿ ಹಾಕಿಲ್ಲ ಎಂದಿದ್ದಾರೆ.

Read More »