Breaking News

admin

ಬಿಟ್‌ ಕ್ವಾಯಿನ್‌ ಸಲುವಾಗಿ ಸಿಎಂ ದೆಹಲಿಗೆ ಹೋಗಿಲ್ಲಾ-ಕೈ ನಾಯಕರಿಗೆ ಶೆಟ್ಟರ ತಿರುಗೇಟು…

ಹುಬ್ಬಳ್ಳಿ: ಬಿಟ್ ಕ್ವಾಯಿನ್ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೇಸ್ ನಾಯಕರು ಬಿಜೆಪಿ ನಾಯಕರ ಮೇಲೆ ಮಾಡಿರುವ ಆರೋಪಕ್ಕೆ ಸಂಭಂದಿಸಿದಂತೆ ಇಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜಕಾರಣ ಸಲುವಾಗಿ ಈ ರೀತಿ ಆರೋಪ ಮಾಡೋದು‌ ಸರಿಯಲ್ಲ‌,ಸರಿಯಾದ‌ ದಾಖಲೆಗಳಿದ್ದರೆ ಬಿಡಿಗಡೆ ಮಾಡಿ,ಯಾರೋ‌ ಮಾಡ್ತಾರೆ ಅನ್ನೋ‌ ಸಲುವಾಗಿ ಬೇಜಾಬ್ದಾರಿ ಹೇಳಿಕೆ ನೀಡೋದು‌ ಸರಿಯಲ್ಲ ಎಂದು ಕಿಡಿ ಕಾರಿದರು.ಈ ರೀತಿ ಹೇಳಿಕೆ ನೀಡೋದು ರಾಜಕೀಯ ಪಕ್ಷಕ್ಕೆ …

Read More »

ದೇಶ ಬದಲಾವಣೆ ಬಯಸಿದೆ ಬನ್ನಿಬದಲಾವಣೆ ಭಾಗವಾಗಿ

Featured Video Play Icon

Read More »

ಮನೆ ಕೀಲಿ ಮುರಿದು ಕಳ್ಳತನ: ಹಳೆ ಹುಬ್ಬಳ್ಳಿಯಲ್ಲಿ ಘಟನೆ

ಹುಬ್ಬಳ್ಳಿ: ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿಮನೆಯೊಂದರ ಕೀಲಿ ಮುರಿದು ಕಳ್ಳತನ ಮಾಡಿರುವ ಘಟನೆ ಹಳೇ ಹುಬ್ಬಳ್ಳಿ ಗಣೇಶ ಕಾಲನಿ ಏಳನೇ ಕ್ರಾಸ್‌ನಲ್ಲಿ ನಡೆದಿದೆ. ಮನೆಗೆ ನುಗ್ಗಿದ ಖದೀಮರು ಮನೆಯಲ್ಲಿದ್ದ 35,000 ರೂ. ನಗದು ಕಳವು ಮಾಡಿರುವ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾರಾಯಣಗೌಡ ಎಂಬುವರ ಮನೆಯಲ್ಲಿ ಕಳವಾಗಿದೆ. ಅ.3ರಂದು ಕೆಲಸದ ನಿಮಿತ್ತ ಬೇರೆಡೆ ಹೋದಾಗ ಕಳ್ಳತನ ನಡೆದಿದೆ ಎಂದು ದೂರಿನಲ್ಲಿ ದಾಖಲಾಗಿದೆ.

Read More »

ಫುಡ್ ವಿಲ್ಲಾ ಕಂಪೌಂಡ್ ತೆರವುಗೊಳಿಸಿದ ಮಹಾನಗರ ಪಾಲಿಕೆ

ಹುಬ್ಬಳ್ಳಿ: ವಿದ್ಯಾನಗರದಲ್ಲಿ ಜನಮನ್ನಣೆ ಗಳಿಸಿದ್ದ ಫುಡ್ ವಿಲ್ಲಾ ಕಂಪೌಂಡ್‌ಅನ್ನು ಬೆಳ್ಳಂಬೆಳಿಗ್ಗೆ ಮಹಾನಗರ ಪಾಲಿಕೆ ನೇತೃತ್ವದಲ್ಲಿ ತೆರವುಗೊಳಿಸಲಾಗಿದೆ. ವಿದ್ಯಾನಗರದ ಪ್ರಮುಖ ಸ್ಥಳದಲ್ಲಿದ್ದ ಫುಡ್ ವಿಲ್ಲಾದ ಕಂಪೌಂಡ್ ಗೋಡೆಯೂ ಪುಟ್ ಪಾತ್‌ಅನ್ನು ಕಬಳಿಸಿತ್ತೆಂದು ಹೇಳಲಾಗಿದ್ದು, ಇದೇ ಕಾರಣಕ್ಕೆ ಕಾರ್ಯಾಚರಣೆ ಮಾಡಿದ ಮಹಾನಗರ ಪಾಲಿಕೆ ಗೋಡೆಯನ್ನ ತೆರವುಗೊಳಿಸಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ನಿಯೋಜನೆ ಮಾಡಿದ್ದರು. ಮಹಾನಗರ ಪಾಲಿಕೆಯ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

Read More »

ಟ್ರ್ಯಾಕ್ಟರ್‌ಗೆ ಟ್ಯಾಂಕರ್‌ ಡಿಕ್ಕಿ: ಇಬ್ಬರು ಸಾವು

ಹುಬ್ಬಳ್ಳಿ: ಇಲ್ಲಿನ ಪುಣೆ- ಬೆಂಗಳೂರು ರಸ್ತೆ ಬುಡರಸಿಂಗಿ ಕ್ರಾಸ್ ಬಳಿ ರಸ್ತೆಬದಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಟ್ಯಾಂಕರ್‌ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಹಿಂದಿದ್ದ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕಲ್ಮೇಶ ಯಂಕಮ್ಮನವರ (26) ಹಾಗೂ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಅಡವಿಸೋಮಾಪುರದ ಕಲ್ಮೇಶ ಜಾಧವ (26) ಮೃತಪಟ್ಟವರು. ಮುಂಡಗೋಡದ ವಿನಾಯಕ ಮಾನಾಬಾಯಿ ಎಂಬಾತ ಗಾಯಗೊಂಡಿದ್ದಾನೆ. ಟ್ರ್ಯಾಕ್ಟರ್‌ ಪಂಕ್ಚರ್‌ ಆಗಿದ್ದರಿಂದ ರಸ್ತೆ ಬದಿ ನಿಲ್ಲಿಸಿದ್ದರು. ಈ …

Read More »

ನೈಟ್ ಕರ್ಫ್ಯೂ

ಬೆಂಗಳೂರು: ಕೋವಿಡ್-19 ಸೋಂಕು ತಡೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೇರಲಾಗಿದ್ದ ನೈಟ್ ಕರ್ಫ್ಯೂ ಆದೇಶವನ್ನು ಶುಕ್ರವಾರ ಹಿಂಪಡೆದಿರುವ ಸರ್ಕಾರ, ಕೋವಿಡ್ ನಿಯಮ ಪಾಲನೆಯೊಂದಿಗೆ ಕುದುರೆ ರೇಸ್ ಗೂ ಅವಕಾಶ ಕಲ್ಪಿಸಿದೆ. ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಗಣನಾರ್ಹ ರೀತಿಯಲ್ಲಿ ಇಳಿಕೆ ಕಂಡುಬರುವುದರೊಂದಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್ ಈ ಆದೇಶ ಹೊರಡಿಸಿದ್ದಾರೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೂ ಜಾರಿಯಲ್ಲಿದ್ದ ನೈಟ್ ಕರ್ಫ್ಯೂವನ್ನು ಹಿಂಪಡೆಯಲಾಗಿದೆ ಎಂದು ಆದೇಶದಲ್ಲಿ …

Read More »

ಚುನಾವಣೆ ಫಲಿತಾಂಶವೇ ತೈಲ ಬೆಲೆ ಇಳಿಕೆಗೆ ಕಾರಣ-ಡಿ ಕೆ ಶಿವಕುಮಾರ..

ಹಾನಗಲ್ ಗೆದ್ದಿದೀವಿ ಅನಿಸುತ್ತಿಲ್ಲ, ಮತದಾರರ ಬಗ್ಗೆ ನಂಬಿಕೆ ಇತ್ತು. ಕೊನೆಗೆ ಜನರು ಅವರಿಗೆ ಪಾಠಕಲಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು,ಅವರ ಜೇಬಿಗೆ ಪಿಕ್ ಪಾಕೆಟ್ ಬಿದ್ದಿತ್ತು.ನಾನು ಭಾಷಣ ಮಾಡುವ ವೇಳೆ ನಾನೇನು ಬೋಧನೆ ಮಾಡಿಲ್. ನಿಮಗೆ ಸಹಾಯ ಆಗಿದ್ಯಾ ಇಲ್ವಾ, ಆದಾಯ ಹೆಚ್ಚಾಗಿದಿಯಾ ಇಲ್ವಾ ಅಷ್ಟೇ ಕೇಳಿದ್ದು.ಅದಕ್ಕೆ ಈಗ ಜನರೇ ಉತ್ತರ ಕೊಟ್ಟಿದ್ದಾರೆ.ಅಲ್ಲಿನ ಉತ್ತರಕ್ಕೆ ಈಗ ಸಿಎಂ ಪೆಟ್ರೋಲ್, ಡೀಸೆಲ್ …

Read More »

ಕಾಂಗ್ರೆಸ್ ಈಗಾಗಲೇ ಭಾರತದಲ್ಲೇ ಹೋಳಾಗುತ್ತಲಿದೆ- ಡಿಕೆಶಿಗೆ ಟಾಂಗ್ ನೀಡಿದ ಸಿಎಂ ಬೊಮ್ಮಾಯಿ..

ಕಾಂಗ್ರೆಸ್ ಈಗಾಗಲೇ ಭಾರತದಲ್ಲೇ ಹೋಳಾಗುತ್ತಲಿದೆ.ಅದರ ಬಗ್ಗೆ ಅವರು ಡಿಕೆ ಶಿವಕುಮಾರ ಗಮನ ಹರಿಸಲಿಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಡಿಕೆಶಿ ಟಾಂಗ್ ನೀಡಿದರು.ನಗರದ ವಿಮಾನ ‌ನಿಲ್ದಾಣದಲ್ಲಿ ಮಾತನಾಡಿದ ಅವರು,ಹಾನಗಲ್ ಚುನಾವಣೆ ಬಳಿಕ ಬಿಜೆಪಿಯ ಹಲವು ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಡಿಕೆಶಿವಕುಮಾರ ಹೇಳಿಕೆ ಪ್ರತಿಕ್ರಿಯಿಸಿದ ಅವರು,ಸಿಂದಗಿಯಲ್ಲಿ ಬಿಜೆಪಿ ದೊಡ್ಡ ಮಟ್ಟದ ಗೆಲುವು ಸಾಧಿಸಿದೆ.‌ಆದ್ರೆ ದೇಶದಲ್ಲಿ ಕಾಂಗ್ರೆಸ್ ಹೋಳಾಗುತ್ತಿದೆ.‌ ಅದರ ಬಗ್ಗೆ ಡಿಜೆ ಶಿವಕುಮಾರ ಅವರು ಗಮನಹರಿಸಲಿ‌ ಎಂದು ಟಾಂಗ್ ನೀಡಿದರು.ಮಾಧ್ಯಮಗಳಿಗೆ ಪಾಠ ಮಾಡಿದ …

Read More »

ರಾಜ್ಯದ ಜನರ ಮೇಲೆನ ಹೊರೆ ಕಡಿಮೆ ಮಾಡಿದೆ! ಶೆಟ್ಟರ್

ಹುಬ್ಬಳ್ಳಿ: ರಾಜ್ಯದ ಜನರ ಮೇಲಿನ ಹೊರೆ ಕಡಿಮೆ ಮಾಡುವ ದೃಷ್ಟಿಯಿಂದ ಪೆಟ್ರೋಲ್ ಮೇಲೆ 7, ಡಿಸೇಲ್ 7 ಸೇಸ್ ನ್ನು ಕಡಿಮೆ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್ ಹೇಳಿದರು‌.ನಗರದಲ್ಲಿಂದು ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯಿಂದ ಮಧ್ಯಮ ಮತ್ತು ಬಡವರಿಗೂ ಸಾಕಷ್ಟು ತೊಂದರೆಯಾಗಿತ್ತು. ಬೆಲೆ ಏರಿಕೆಯಿಂದ ಇತರ ತೊಂದರೆಗಳು ಉಂಟಾಗಿದ್ದವು. ಜನರು ಬೆಲೆ ಇಳಿಕೆ ಮಾಡಬೇಕೆಂಬ ಬೇಡಿಕೆ ಇತ್ತು. …

Read More »

ಜನಕ್ಕೆ ತೊಂದರೆಯಾಗಬಾರದೆಂದು ತೈಲ ಬೆಲೆ ಇಳಿಸಿದೆ

ಹುಬ್ಬಳ್ಳಿ: ಡಿ ಕಂಟ್ರೋಲ್ ಆಗಿದ್ದ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯನ್ನು ಕೇಂದ್ರ ಸರ್ಕಾರ ಜನಕ್ಕೆ ತೊಂದರೆಯಾಗಬಾರದೆಂದು ದೃಷ್ಟಿಯಿಂದ ಕಡಿಮೆಗೊಳಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಅಂತರಾಷ್ಟ್ರೀಯ ಬೆಲೆಗಳನ್ನು ಗಮನದಲ್ಲಿಟ್ಟುಕೊಂಡು, ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಜನಕ್ಕೆ ತೊಂದರೆಯಾಗಬಾರದೆಂಬ ದೃಷ್ಟಿಯಿಂದ ರಾಜ್ಯದಲ್ಲಿ ಒಟ್ಟಾರೆಯಾಗಿ ಪೆಟ್ರೋಲ್ 12, ಡಿಸೇಲ್ ಮೇಲಿನ 17 ರೂಪಾಯಿ ಕಡಿಮೆ ಮಾಡಿದ್ದೇವೆ ಎಂದರು. ರಾಜ್ಯ ಸರ್ಕಾರ ನೂರು ದಿನ ಪೂರೈಸಿ ಬಸವರಾಜ …

Read More »