ಮಂಡ್ಯ: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿ ಸುಮಾರು 10 ಕ್ಕೂ ಹೆಚ್ಚು ಮಳಿಗೆಗಳು ಬೆಂಕಿಗಾಗುತಿಯಾದ ಘಟನೆ ಇಲ್ಲಿನ ದೇವರಾಜ ಮಾರುಕಟ್ಟೆಯಲ್ಲಿ ನಡೆದಿದೆ.ಸುಮಾರು 100 ವರ್ಷಗಳ ಇತಿಹಾಸವಿರುವ ಮೈಸೂರಿನ ದೇವರಾಜ ಮಾರುಕಟ್ಟೆಗೆ ಇಂದು ಏಕಾಏಕಿ ಬೆಂಕಿ ಹೊತ್ತಿಕೊಂಡು ಉರಿದಿದೆ.ಗದ್ದಿಗೆ ಅಂಗಡಿ ಸೇರಿ ಹೂವಿನ ಅಂಗಡಿಗಳು ಹಾಗೂ ಹತ್ತಕ್ಕೂ ಹೆಚ್ಚು ಮಳಿಗೆಗಳು ಬೆಂಕಿಗೆ ಆಹುತಿಯಾಗಿವೆ.ಬೆಂಕಿ ಹೊತ್ತಿಕೊಂಡ ತಕ್ಷಣ ಮಾರುಕಟ್ಟೆಯಲ್ಲಿ ಜನರು ಚದುರಲಾರಂಭಿಸಿದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.ದಟ್ಟ ಹೊಗೆಯಿಂದ …
Read More »ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ಡಿ.ಕೆ.ಶಿ. ಸಂತ್ರಸ್ತರಿಗೆ ಅಗತ್ಯ ಸಾಮಾಗ್ರಿಗಳ ವಿತರಣೆ.
ಹುಬ್ಬಳ್ಳಿ:ಮಳೆಯಿಂದ ಹಾನಿಗೊಳಗಾದ ಹಳೇ ಹುಬ್ಬಳ್ಳಿ, ಗೌಸಿಯಾ ಗಲ್ಲಿ, ಆನಂದ ನಗರ, ಮುಲ್ಲಾನಗರ ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ಭೇಟಿ ನೀಡಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಸಂತ್ರಸ್ತರಿಗೆ ಅಗತ್ಯ ಸಾಮಗ್ರಿಗಳನ್ನ ವಿತರಿಸಿದ್ದಾರೆ.ಸರ್ಕಾರದಿಂದ ಪರಿಹಾರ ಒದಿಸುವುದಾಗಿ ಭರವಸೆ ನೀಡಿದರು. ಸಂತ್ರಸ್ತರ ಸಮಸ್ಯೆ ಆಲಿಸಿ, ಅಕ್ಕಿ, ಎಣ್ಣೆ, ಕಾಳುಗಳು, ಹಾಸಿಗೆ ನೀಡಿದರು. ಅಲ್ಲದೇ, ಸರ್ಕಾರ ಆದಷ್ಟು ಬೇಗ ಪರಿಹಾರ ನೀಡುತ್ತೆವೆ ಎಂದು ಭರವಸೆ ಕೊಟ್ಟರು. ಈ ವೇಳೆ ಶಾಸಕ ಪ್ರಸಾದ ಅಬ್ಬಯ್ಯ ಡಿಕೆಶಿಗೆ ಸಾಥ್ ನೀಡಿದರು.
Read More »ಹೇಮಾವತಿ ನದಿ ನೀರು ಮನೆಗೆ ನುಗ್ಗಿ ಕಟ್ಟಡ ಕುಸಿತ
ಮಂಡ್ಯ : ಹಾಸನ ದ ಗೋರೂರ್ ಡ್ಯಾಮ್ ನಿಂದ ಸುಮಾರು 1, 5 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಟ್ಟ ಹಿನ್ನಲೆಯಲ್ಲಿ ಚಿಕ್ಕ ಮಂದಗೆರೆ ಗ್ರಾಮದಲ್ಲಿ ಮಂಜುನಾಥ್ ಮತ್ತು ಚಂದ್ರಶೇಖರ ಎಂಬುವರ ಮನೆಗೆ ಹೇಮಾವತಿ ನಧಿಯ ನೀರು ನುಗ್ಗಿ ಮನೆಯ ಕಟ್ಟಡ ಕುಸಿದಿದೆ. ಅದೃಷ್ಟವಶಾತ್ ಮನೆಯಲ್ಲಿ ಇದ್ದ ಯಾರಿಗೂ ಏನು ತೊಂದರೆಯಾಗಿಲ್ಲ. ಈ ಕಾರಣದಿಂದಾಗಿ ನಮಗೆ ಊಟಕ್ಕೂ ತುಂಬಾ ತೊಂದರೆ ಆಗಿದೆ ಮಲಗುವದಕ್ಕೂ ಜಾಗವಿಲ್ಲ ಎಂದು ಪತ್ರಕರ್ತರ ಮೂಲಕ ಮಂಜುನಾಥ್ …
Read More »ಗೆಲುವಿನ ನಗೆ ಬೀರುವಲ್ಲಿ ಯಡವಿದ ಬುಲ್ಸ್
ಅಹಮದಾಬಾದ್:ಬೆಂಗಳೂರು ಬುಲ್ಸ್ನ ಪವನ್ ಶೆರಾವತ್ ಅವರ ಭರ್ಜರಿ ಪ್ರದರ್ಶನದ ಹೊರತಾಗಿಯೂ ಸೋಮವಾರ ನಡೆದ ಯುಪಿ ಯೋಧ ವಿರುದ್ಧ 35-33 ಅಂಕಳಿಂದ ಸೋಲು ಕಂಡಿದೆ.ಇಡೀ ಟೂರ್ನಿಯಲ್ಲಿ ಬೆಂಗಳೂರಿನ ಪರ ಪವನ್ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ. ಗೆಲುವಿಗಾಗಿ ಹೆಚ್ಚು ಅವರನ್ನೇ ನಂಬಿಕೊಂಡಿರುವುದೇ ತಂಡಕ್ಕೆ ಹಿನ್ನಡೆಯಾಗುತ್ತಿದೆ. ಶನಿವಾರ ಹರಿಯಾಣ ವಿರುದ್ಧ ಮುಗ್ಗರಿಸಿದ್ದ ಬುಲ್ಸ್ ಯೋಧ ವಿರುದ್ಧವೂ 33-30ರ ಅಂತರದಿಂದ ಮತ್ತೆ ಸೋಲುಕಂಡಿದೆ.ಬೆಂಗಳೂರು ತಂಡದ ಪರ ನಾಯಕ ರೋಹಿತ್ ಕುಮಾರ್ ವೈಫಲ್ಯವೇ ಸೋಲಿಗೆ ಪ್ರಮುಖ ಕಾರಣವಾಯಿತು. …
Read More »2.5 ಕಿಮೀ ಪ್ರವಾಹದಲ್ಲಿ ಈಜಿ, ಬಾಕ್ಸರ್ನಲ್ಲಿ ಬೆಳ್ಳಿ ಪದಕವನ್ನು ಗೆದ್ದನಿಶಾನ್ ಮನೋಹರ್ ಕದಂ
ಬೆಂಗಳೂರು:ಮನಸಿದ್ದರೆ ಮಾರ್ಗ ಎಂಬ ಒಂದು ಮಾತಿದೆ. ಈ ಮಾತನ್ನು ಅದೆಷ್ಟು ಜನ ನಿಜ ಮಾಡ್ತಾರೋ ಗೊತ್ತಿಲ್ಲ. ಆದ್ರೆ ಇಲ್ಲೋರ್ವ ಛಲ ಬಿಡದ ಯುವಕ ಈ ಮಾತನ್ನು ಸಾಬೀತು ಮಾಡಿದ್ದಾನೆ.ಬೆಳಗಾವಿ ಜಿಲ್ಲೆ ಮನ್ನೂರು ಗ್ರಾಮದ ನಿಶಾನ್ ಮನೋಹರ್ ಕದಂ ಎಂಬ ಬಾಕ್ಸರ್ ಕ್ರೀಡಾಪಟು 45 ನಿಮಿಷಗಳಲ್ಲಿ 2.5 ಕಿಮೀ ಪ್ರವಾಹದ ನೀರಿನಲ್ಲಿ ಈಜಿ ಹೋಗಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.ಹೌದು, ಆಗಸ್ಟ್ 7ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬಾಕ್ಸಿಂಗ್ ಚಾಂಪಿಯನ್ಶಿಪ್ ಇತ್ತು. ಆದರೆ …
Read More »ಟೀಂ ಇಂಡಿಯಾ ಕೋಚ್ ಹುದ್ದೆಗೆ ಆರು ಅಭ್ಯರ್ಥಿಗಳ ಲಿಸ್ಟ್ ಸಿದ್ಧ
ಮುಂಬೈ:ಟೀಂ ಇಂಡಿಯಾ ಕೋಚ್ ಹುದ್ದೆಗೆ ಸಲ್ಲಿಕೆಯಾಗಿದ್ದ ಅರ್ಜಿಗಳಲ್ಲಿ ಆರು ಅಭ್ಯರ್ಥಿಗಳು ಬಿಸಿಸಿಐನಿಂದ ಫೈನಲ್ ಆಗಿದ್ದು, ಆಗಸ್ಟ್ 16ರಂದು ಅವರ ಸಂದರ್ಶನ ನಡೆಯಲಿದೆ.ಟೀಂ ಇಂಡಿಯಾ ಪ್ರಮುಖ ಹುದ್ದೆ ಮೇಲೆ ಕಣ್ಣಿಟ್ಟು ಬರೋಬ್ಬರಿ 2 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದರು. ಅದರ ಶಾರ್ಟ್ ಲಿಸ್ಟ್ ಮಾಡಿರುವ ಬಿಸಿಸಿಐ ಆರು ಜನರನ್ನ ಫೈನಲ್ ಸಂದರ್ಶಕ್ಕಾಗಿ ಆಯ್ಕೆ ಮಾಡಿದೆ.ಲಭ್ಯವಾಗಿರುವ ಮಾಹಿತಿ ಪ್ರಕಾರ ನ್ಯೂಜಿಲ್ಯಾಂಡ್ನ ಮಾಜಿ ಕೋಚ್ ಮೈಕ್ ಹಸ್ಸನ್, ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಹಾಗೂ …
Read More »ಮಂಗಳವಾರದ ರಾಶಿಫಲ
ಮೇಷ: ಇಂದು ನೀವು ಹೊರಹೋಗಲು ಉತ್ಸಾಹಿಗಳಾಗಿದ್ದೀರಿ. ನಿಮ್ಮ ಈ ಹುರುಪನ್ನು ಒಳ್ಳೆಯ ಕೆಲಸಕ್ಕೆ ಬಳಸಿ. ಇದು ಕೆಲಸ ಮಾಡುವ ಸಮಯವೇ ಹೊರತು ಯೋಜಿಸುವುದಲ್ಲ.ವೃಷಭ: ಇಡೀ ದಿನ ನಿಮ್ಮ ಮನಸ್ಥಿತಿಯನ್ನು ಶಕ್ತಿ, ಸಮೃದ್ಧಿ ಮತ್ತು ಉತ್ಸಾಹ ಆಳುತ್ತವೆ. ಅಂತಹ ಉತ್ಸಾಹ ಸಾಂಕ್ರಾಮಿಕವಾಗಿದ್ದು ನಿಮ್ಮ ಪ್ರೀತಿಪಾತ್ರರು ಅದರಿಂದ ಮೋಡಿಗೆ ಒಳಗಾಗುತ್ತಾರೆ. ದಿನ ಮುಂದೆ ಸಾಗಿದಂತೆ ವಿಷಯಗಳು ಉತ್ತಮಗೊಳ್ಳುತ್ತವೆ. ನೀವು ಬೇಸರವೆನಿಸಿದರೆ ಕೆಲಸದಿಂದ ಬಿಡುವು ಪಡೆದು ವಿಶ್ರಾಂತಿ ಪಡೆದು ನವೋತ್ಸಾಹ ತಂದುಕೊಳ್ಳಿ.ಮಿಥುನ: ಇಂದು ನಿಮ್ಮ …
Read More »ಮಳೆಹಾನಿಗೆ ಒಳಗಾದ ಪ್ರದೇಶಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ಟ ಸಂತ್ರಸ್ಥರಿಗೆ ಮೂಲಭೂತ ಸಾಮಗ್ರಿಗಳನ್ನು ವಿತರಣೆ
ಧಾರವಾಡ: ಜಿಲ್ಲೆಯಲ್ಲಿ ಮಳೆಹಾನಿಗೆ ಒಳಗಾದ ಪ್ರದೇಶಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಸಂತ್ರಸ್ಥರಿಗೆ ಮೂಲಭೂತ ಸಾಮಗ್ರಿಗಳನ್ನು ವಿತರಿಸಿದರು.ಜಿಲ್ಲೆಯ ಹನುಮನಾಳ ಗ್ರಾಮದಲ್ಲಿ ಬಿದ್ದ ಮನೆಗಳಿಗೆ ಭೇಟಿ ನೀಡಿ, ನಿರಾಶ್ರಿತರಿಗೆ ಮೂಲಭೂತ ವಸ್ತುಗಳನ್ನು ವಿತರಿಸಿದರು. ಮತ್ತು ಗ್ರಾಮದ ಸೇತುವೆ ಮತ್ತು ದೇವಾಲಯಗಳಿಗೆ ಭೇಟಿ ನೀಡಿ ಸುರಕ್ಷತೆಯನ್ನು ಪರೀಕ್ಷಿಸಿದರು. ಈ ವೇಳೆ ಕೇಂದ್ರ ಸರ್ಕಾರ ನಿಮ್ಮ ಜೊತೆ ಇದೆ ಎಂದು ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಈ ಸಂದರ್ಭದಲ್ಲಿ ತಾಲೂಕು ಮಟ್ಟದ …
Read More »ಮಾಜಿ ತಾಲ್ಲೂಕು ಸಾಕ್ಷರತಾ ಸಂಯೋಜಕ ಸಿಂಧುಘಟ್ಟ ಮಂಜುನಾಥ್ ನಿಧನ
ಮಂಡ್ಯ: ವಯಸ್ಕರ ಶಿಕ್ಷಣ ಇಲಾಖೆಯ ಮಾಜಿ ತಾಲ್ಲೂಕು ಸಾಕ್ಷರತಾ ಸಂಯೋಜಕರು, ಮಂಡ್ಯ ಜಿಲ್ಲೆ ಮಂಡ್ಯ ಕ್ಯಾತನಹಳ್ಳಿ ಶಾಲೆಯ ಶಿಕ್ಷಕರಾದ ಸಿಂಧುಘಟ್ಟ ಮಂಜುನಾಥ್(50) ಅವರು ಅನಾರೋಗ್ಯದಿಂದ ನಿಧನ ಹೊಂದಿರುತ್ತಾರೆಮೃತರ ಅಂತ್ಯಕ್ರಿಯೆಯು ಆ.13ರಂದು ಮಂಗಳವಾರ ಮಧ್ಯಾಹ್ನ 12ರಿಂದ 1ಗಂಟೆಗೆ ಮೃತರ ಸ್ವಗ್ರಾಮ ಸಿಂಧುಘಟ್ಟ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಮೃತರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಾಜಿ ವಿಶೇಷಾಧಿಕಾರಿಗಳಾದ ಸಿಂಧುಘಟ್ಟ ಅರವಿಂದ್ ಅವರ ಸಹೋದರ ಸಂಬಂಧಿಯಾಗಿರುತ್ತಾರೆ.ಮೃತರ ನಿಧನಕ್ಕೆ ನಿವೃತ್ತ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ …
Read More »ಕೆಎಸ್ ಆರ್ ಟಿಸಿ ಬಸ್ ಚಾಲಕರ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ.
ಚಿಕ್ಕಬಳ್ಳಾಪುರ: ಕೆ ಎಸ್ ಆರ್ ಟಿ ಸಿ ಬಸ್ ಚಾಲಕರ ಧೋರಣೆಯನ್ನು ಖಂಡಿಸಿ ಇಂದು ನೂರಾರು ವಿದ್ಯಾರ್ಥಿಗಳು ಕೆ ಎಸ್ ಆರ್ ಟಿ ಸಿ ಬಸ್ ತಡೆದು ಪ್ರತಿಭಟನೆ ನಡೆಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕೈವಾರ ಕ್ರಾಸ್ ಬಳಿ ನಡೆದಿದೆ.ನಿತ್ಯ ಇಲ್ಲಿ ನೂರಾರು ವಿದ್ಯಾರ್ಥಿಗಳು ಪ್ರಯಾಣ ಮಾಡುತ್ತಿದ್ದು, ಕೈವಾರ ಕ್ರಾಸ್ ಗೆ ವೇಗದೂತ ನಿಲುಗಡೆ ಇದ್ದರೂ ಬಸ್ ನಿಲ್ಲಿಸುವದಿಲ್ಲ. ಇದರಿಂದ ಪ್ರತಿನಿತ್ಯ ವಿದ್ಯಾರ್ಥಿಗಳು ಸಮಯಕ್ಕೆ ಕಾಲೇಜಿಗೆ ಹೋಗಲಾರದೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





