Breaking News

admin

ಪ್ರವಾಹ ಕುರಿತು ಸಿಎಂ ಜೊತೆ ಚರ್ಚಿಸುವದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭರವಸೆ.

ಧಾರವಾಡ:ಜಿಲ್ಲೆಯಲ್ಲಿ ಪ್ರವಾಹದಿಂದ ಕೆರೆ ಒಡೆದು ನೂರಾರು ಎಕರೆ ಭೂಮಿ ಮತ್ತು ಬೆಳೆ ಹಾನಿಯಾಗಿದೆ. ಆದ್ದರಿಂದ ಇರುವ ನಿಯಮಗಳಲ್ಲಿಯೇ ಹೆಚ್ಚು ಜನರಿಗೆ ಸಹಾಯವಾಗುವ ರೀತಿಯಲ್ಲಿ ಪರಿಹಾರಕ್ಕೆ ಪರಿಗಣಿಸಬೇಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಮಯದಲ್ಲಿ ಮಾತನಾಡಿದ ಅವರು, ಒಂದು ಮನೆಯ ನಾಲ್ಕು ಗೋಡೆಗಳ ಮಧ್ಯೆ ಎರಡು ಗೋಡೆ ಬಿದ್ದರೆ ಅದನ್ನು ಶೇ‌ 50 ಪ್ರತಿಶತ ಮಾಡುತ್ತಿದ್ದಾರೆ. ಆದರೆ ಎರಡು ಗೋಡೆ ಬಿದ್ದರೂ ಅದನ್ನು …

Read More »

ಬೋರ್ಗರೆಯುತ್ತಾ ಹರಿಯುತ್ತಿರುವ ಹೇಮೆಯನ್ನು ಕಣ್ತುಂಬಿಕೊಳ್ಳಲು ಜನಜಂಗುಳಿ.

ಮಂಡ್ಯ: ಜಿಲ್ಲೆ ಹೇಮಾವತಿ ನದಿಯ ಜಲಸಾಯ ಹೇಮಗಿರಿ ಅಣೆಕಟ್ಟೆಯ ಮೇಲೆ ಹೇಮಾವತಿ ನದಿಯು ಬೋರ್ಗರೆಯುತ್ತಾ ಹರಿಯುತ್ತಿದೆಗೊರೂರು ಜಲಾಶಯದಿಂದ 60ಸಾವಿರ ಕ್ಯೂಸೆಕ್ಸ್ ನೀರನ್ನು ಹೇಮಾವತಿ ನದಿಗೆ ಹರಿಯ ಬಿಟ್ಟಿರುವುದರಿಂದ ಗದ್ದೇಹೊಸೂರಿನ ಖುರಾವು ನಡುಗಡ್ಡೆಯಂತಾಗಿದೆ.ಬೋರ್ಗರೆಯುತ್ತಾ ಹರಿಯುತ್ತಿರುವ ಹೇಮಾವತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಜನಜಂಗುಳಿ ನೆರೆದಿದೆ.ನದಿಯ ಬಳಿ ಬಿಗಿ ಪೋಲಿಸ್ ಭದ್ರತೆ ನೀಡಲಾಗಿದೆ.ತಾಲ್ಲೂಕು ಆಡಳಿತದ ವತಿಯಿಂದ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡರು.

Read More »

ಭಾರೀ ಮಳೆಗೆ ನಂಜನಗೂಡು ದೇವಾಲಯ ಸಂಪೂರ್ಣ ಜಲಾವೃತ

ಮೈಸೂರು- ಕೇರಳ ಹೆದ್ದಾರಿ ಬದಲಿ ಮಾರ್ಗಕ್ಕೆ ಸೂಚನೆ ನೀಡಲಾಗಿದ್ದು, ಸಂಪೂರ್ಣ ನಂಜನಗೂಡಿನ ದೇವಾಲಯಗಳು ಜಲಾವೃತಗೊಂಡಿವೆ ಕಬಿನಿ ಜಲಾಶಯದಿಂದ 90,000 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ ಚಿಕ್ಕಮಗಳೂರು ಹಾಸನ ದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವ ಕಾರಣ ಗೊರು ಡ್ಯಾಮ್ ನಿಂದ 50000 ಕ್ಯುಸೆಕ್ ನೀರನ್ನು ಕೆಆರ್ ಎಸ್ ಮುಖಾಂತರ ಕಾವೇರಿನದಿಗೆ ಬಿಡಲಾಗಿದೆ ಹೇಮಾವತಿ ಹೊಳೆಯ ತಗ್ಗು ಪ್ರದೇಶ ಹಾಗೂ ಕಾವೇರಿ ತೀರದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ

Read More »

ಮಲಪ್ರಭೆಯ ಮುನಿಸಿನಲ್ಲಿ ಗಮನಾರ್ಹ ಇಳಿಕೆ,ಘಟಪ್ರಭಾ ಏರಿಳಿಕೆ

ಬೆಳಗಾವಿ :ಜಿಲ್ಲೆಯ ಸವದತ್ತಿ ತಾಲೂಕಿನ ನವಿಲುತೀರ್ಥ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಗಮನಾರ್ಹವಾಗಿ ಇಳಿಕೆಯಾಗಿದ್ದು ಹೊರಹರಿವು 85 ಸಾವಿರ ಕ್ಯೂಸೆಕ್ಸದಿಂದ ಹತ್ತು ಸಾವಿರಕ್ಕೆ ಇಳಿದಿದೆ.ಖಾನಾಪುರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆ ಕಡಿಮೆಯಾಗಿದ್ದರಿಂದ ಒಳಹರಿವು 45 ಸಾವಿರ ಕ್ಯೂಸೆಕ್ಸಕ್ಕೆ ಇಳಿದಿದೆ.37.7 ಟಿ ಎಮ್ ಸಿ ಸಾಮರ್ಥ್ಯದ ಡ್ಯಾಮಿನಲ್ಲಿ ಈಗ 35 ಟಿ ಎಮ್ ಸಿ ನೀರು ಸಂಗ್ರಹವಾಗಿದೆ. ಹೊರಹರಿವು 85 ಸಾವಿರದಿಂದ ಒಂದು ಲಕ್ಷದವರೆಗೂ ತಲುಪಿದ್ದರಿಂದ ಮುನವಳ್ಳಿ,ಬಸರಗಿ,ಶಿಂಧೋಗಿ,ಅರಟಗಲ್,ತೊರಗಲ್ಲ,ಹಾಲೊಳ್ಳಿ,ಸುನ್ನಾಳ,ತೊರಗಲ್ಲ,ರಾಮದುರ್ಗ ನಗರದ …

Read More »

ಹಾಲಿನ ಪ್ಯಾಕೆಟ್ ಗಳಲ್ಲಿ ನೀರು ಪೂರೈಕೆ- ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ

ಬೆಳಗಾವಿ: ಪ್ರವಾಹದಲ್ಲಿ ಸಿಲುಕಿಕೊಂಡಿರುವ ಜನರಿಗೆ ಆಹಾರ ಪೊಟ್ಟಣಗಳ ಜತೆ ಬಾಟಲ್ ಗಳ ಬದಲಿಗೆ ನಂದಿನಿ ಹಾಲಿನ ಖಾಲಿ ಪ್ಯಾಕೆಟ್ ಗಳಲ್ಲಿ ಕುಡಿಯುವ ಶುದ್ಧ ನೀರು ತುಂಬಿಸಿ ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.ಹೆಲಿಕಾಪ್ಟರ್ ಮೂಲಕ ಆಹಾರ ಪೊಟ್ಟಣಗಳ ಜತೆ ನೀರಿನ ಬಾಟಲ್ ಗಳನ್ನು ವಿತರಿಸಲಾಗುತ್ತಿತ್ತು. ಬಾಟಲ್ ಭಾರವಾಗಿರುವುದರಿಂದ ಮೇಲಿನಿಂದ ಎಸೆದಾಗ ಜನರಿಗೆ ಗಾಯಗಳಾಗುವ ಸಾಧ್ಯತೆಗಳು ಕಂಡುಬಂದವು. ಆದ್ದರಿಂದ ಬಾಟಲ್ ಗಳ ಬದಲು ಪ್ಯಾಕೆಟ್ ಗಳಲ್ಲಿ ನೀರು ಪೂರೈಸಲಾಗುತ್ತಿದೆ.ಪ್ರವಾಹದಲ್ಲಿ ಸಿಲುಕಿರುವ ಜನರಿಗೆ …

Read More »

ಸಹಸ್ರಲಿಂಗೇಶ್ವರನ ಸನ್ನಿಧಿಯಲ್ಲಿ ಕುಮಾರಧಾರ – ನೇತ್ರಾವತಿಗಳ ಸಂಗಮ

ಮಂಗಳೂರು: ಕಳೆದ ಹಲವಾರು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ನಿರೀಕ್ಷೆಯಂತೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಗಯಾಪದ ಕ್ಷೇತ್ರ ಸಹಸ್ರಲಿಂಗೇಶ್ವರನ ಸನ್ನಿಧಿಯಲ್ಲಿ ಕುಮಾರಧಾರ – ನೇತ್ರಾವತಿಗಳ ಸಂಗಮವಾಗಿದೆ. ಉಪ್ಪಿನಂಗಡಿ ದೇಗುಲದಲ್ಲಿ ನದಿಗಳ ಸಂಗಮವಾಗಿದ್ದು, ನೆರೆದ ಸಹಸ್ರಾರು ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಉಪ್ಪಿನಂಗಡಿಯಲ್ಲಿ ನೇತ್ರಾವತಿ ಹಾಗೂ ಕುಮಾರಧಾರ ನದಿಗಳ ಸಂಗಮವಾಗಿದ್ದು, ಸಂಗಮದ ಬಳಿಕ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಗಂಗಾಪೂಜೆ ನೆರವೇರಿಸಲಾಯಿತು ಗಂಗಾಪೂಜೆ ಬಳಿಕ ಸಹಸ್ರಲಿಂಗೇಶ್ವರ ದೇವರಿಗೆ ಸಂಗಮ …

Read More »

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆ ಅಬ್ಬರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆ ಅಬ್ಬರದಿಂದ ಇದ್ದಕ್ಕಿದ್ದಂತೆ ನೇತ್ರಾವತಿ ನೀರಿನ ಮಟ್ಟ ಹೆಚ್ಚಳವಾಗಿದೆ.ನೇತ್ರಾವತಿ ನದಿ ನೀರಿನ ಅಪಾಯದ ಮಟ್ಟ 8.5 ಮೀ. ಆಗಿದೆ.ಬೆಳಗ್ಗೆ 10ರ ವೇಳೆಗೆ ನೇತ್ರಾವತಿ ನದಿ ನೀರಿನ ಮಟ್ಟ 8.7 ಮೀಟರ್ ಇತ್ತು. ಸದ್ಯ ನೇತ್ರಾವತಿ ನದಿ10.0 ಮೀ. ಅಪಾಯ ಮಟ್ಟದಲ್ಲಿ ಹರಿಯುತ್ತಿದೆ.‌ ಉಪ್ಪಿನಂಗಡಿ ನೇತ್ರಾವತಿ 31.5 MTR, ಉಪ್ಪಿನಂಗಡಿ 26.5 ಮೀ, ಕುಮಾರಧಾರ ನದಿ ಹಾಗೂ ಗುಂಡ್ಯ ನದಿಗಳು 5.0 ಮೀ. ಅಪಾಯ …

Read More »

ಮಳೆ ಸಂತ್ರಸ್ಥರನ್ನು ಸಂತೈಸಿದ ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ

ಕೂಡ್ಲಿಗಿ: ಬಳ್ಳಾರಿ ಸಂಸದರಾದ ವೈ. ದೇವೇಂದ್ರಪ್ಪನವರು ತುಂಗಭದ್ರಾ ನದಿಯ ಪ್ರವಾಹ ಪೀಡಿತ ಪ್ರದೇಶಗಳಾದ ಹಡಗಲಿ ತಾಲ್ಲೂಕಿನ ಮಾಗಳ,ಅಂಗುರು,ಕೋಟಿಹಾಳ,ಮಕರಬ್ಬಿ,ಕಾಂತೆ ಬೆನ್ನೂರು, ಮೈಲಾರ, ಹರವಿ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಬೇಟಿ ನೀಡಿ ನೆರೆ ಸಂತ್ರಸ್ಥರನ್ನು ಸಂತೈಸಿದರು.ಸ್ಥಳದಲ್ಲಿಯೇ ಅಗತ್ಯ ಪರಿಹಾರ ವದಗಿಸುವಲ್ಲಿ ಮುತುವಜಿ೯ವಹಿಸಿದರು.ನೆರೆ ನಿರಾಶ್ರಿತ ರಿಗೆ ಸೂಕ್ತಸೌಕಯ೯ಗಳನ್ನು ಸಮಪ೯ಕವಾಗಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ನಿರಾಶ್ರಿತರಿಗೆ ತಾತ್ಕಾಲಿಕ ಆಶ್ರಯ ಕೇಂದ್ರಗಳನ್ನು ತೆರೆದು ಆಹಾರ ಆರೋಗ್ಯ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ತಾಲೂಕು ಆಡಳಿತಾಧಿಕಾರಿಗಳಿಗೆ ಸೂಚಿಸಿದರು.ಮುಂಜಾಗ್ರತಾಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅವರು ಆದೇಶಿಸಿದರು.ಹಡಗಲಿ …

Read More »

ಮಳೆಯ ರಭಸಕ್ಕೆ ನೀರು ಪಾಲಾದ ವಳಾಲು ತೂಗು ಸೇತುವೆ

ಮಂಗಳೂರು: ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ನೀರಿನ ಪ್ರಮಾಣ ಹೆಚ್ಚುತ್ತಿರುವಂತೆಯೇ, ನದಿ ತೀರದ ಪ್ರದೇಶಗಳು ಮುಳುಗಡೆಗೊಳ್ಳುತ್ತಿದ್ದು, ನೀರಿನ ರಭಸಕ್ಕೆ ವಳಾಲು ತೂಗುಸೇತುವೆ ನೀರುಪಾಲಾಗಿದೆ. ಶುಕ್ರವಾರ ಸಂಜೆಯ ವೇಳೆಗಾಗಲೇ ತೂಗುಸೇತುವೆಯ ಮೇಲಕ್ಕೆ ನೀರು ಬಂದಿದ್ದು, ಮರಗಳು ಬಡಿದು ಹಾನಿ ಸಂಭವಿಸಿತ್ತು. ರಾತ್ರಿಯಾಗುತ್ತಿದ್ದಂತೆ ಸೇತುವೆಯ ಮಧ್ಯ ಭಾಗ ಮುರಿದು ಬಿದ್ದಿದ್ದು, ನೀರುಪಾಲಾಗಿದೆ.ನೇತ್ರಾವತಿ ನದಿ ಬಂಟ್ವಾಳ್ ದಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಮಣಿಹಳ್ಳ ಬಂಟ್ವಾಳ್ ಮುಂತಾದ ಕಡೆಗಳಲ್ಲಿ ನದಿ ನೀರು ರಸ್ತೆ ಗೆ ಬಂದಿರುವ …

Read More »

ಮಂಡ್ಯ ಜಿಲ್ಲೆಯ ಹೇಮಗಿರಿ, ಬಂಡಿಹೊಳೆ ಬಳಿ ಹೇಮಾವತಿ ನದಿಯ ರುದ್ರನರ್ತನ.

ಮಂಡ್ಯ: ಬಂಡಿಹೊಳೆ ಬಳಿ ತ್ರಿಶೂಲ್ ಜಲ ವಿದ್ಯುದಾಗಾರದೊಳಕ್ಕೆ ನುಗ್ಗಿದ ನೀರು ಕೋಟ್ಯಂತರ ರೂಪಾಯಿ ನಷ್ಠವಾಗಿದೆ.ಮಂಡ್ಯ ಹೇಮಗಿರಿ ಬಳಿ ತೆಪ್ಪೋತ್ಸವ ನಡೆಯುವ ಬೆಟ್ಟದ ಪಾದದವರೆಗೆ ಪ್ರವಾಹದ ನೀರು ಬಂದಿದ್ದು,.ತಗ್ಗು ಪಾತ್ರದ ಜಮೀನುಗಳಿಗೆ ನೀರು ನುಗ್ಗಿ ತೆಂಗು, ಬಾಳೆ, ಅಡಿಕೆ, ಕಬ್ಬು ಭಾಗಷಃ ಮುಳುಗಡೆಯಾಗಿವೆ.ಮಧ್ಯಾಹ್ನದ ವೇಳೆಗೆ ಒಂದು ಲಕ್ಷ ಕ್ಯೂಸೆಕ್ಸ್ ನೀರು ಹರಿಸುವ ಹಿನ್ನೆಲೆಯಲ್ಲಿ ಪ್ರವಾಹ ಪರಿಸ್ಥಿತಿ ಇನ್ನೂ ಹೆಚ್ಚಾಗಲಿರುವ ಆತಂಕ ಎದುರಾಗಿದೆ. ಬಂಡಿಹೊಳೆಯ ತ್ರಿಶೂಲ್ ಜಲವಿದ್ಯುತ್ ಘಟಕದೊಳಕ್ಕೆ ನೀರು ನುಗ್ಗಿ ಎರಡು …

Read More »