Breaking News

admin

ಪೋಲಿಸ್ ಕಾರ್ಯಾಚರಣೆ: 26,350 ರೂ. ಮೌಲ್ಯದ ಬೆಳ್ಳಿ ಆಭರಣ ವಶ

ಹುಬ್ಬಳ್ಳಿ: ಮನೆ ಕಳ್ಳತನ ಮಾಡಿದ ಇಬ್ಬರು ಖದೀಮರನ್ನು ಬಂಧಿಸಿ, ಸಾವಿರಾರು ರೂ. ಮೌಲ್ಯದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಎಪಿಎಂಸಿ ನವನಗರ ಪೋಲೀಸರು ಯಶಸ್ವಿಯಾಗಿದ್ದಾರೆ.ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರದ ಧನ್ಯಕುಮಾರ ಅರಸನಾಳ (30), ನಾರಾಯಣ ಬಾಚಣಕಿ(23) ಬಂಧಿತ ಆರೋಪಿಗಳು.ಮಹಾನಗರ ಪೋಲಿಸ್ ಹು-ಧಾ ಆಯುಕ್ತರಾದ ಎಂ‌ಎಸ್. ನಾಗರಾಜ ಅವರ ನೇತೃತ್ವದ ಪೋಲೀಸರ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿತರಿಂದ 26,350 ರೂ. ಮೌಲ್ಯದ ವಿವಿಧ ಬೆಳ್ಳಿ ಆಭರಣಗಳು ಹಾಗೂ ಒಂದು ಎಲ್.ಇ.ಡಿ. ಕಂಪನಿಯ ಟಿ.ವಿಯನ್ನು ಪೋಲಿಸರು …

Read More »

ಕಾಡಾನೆ ದಾಳಿಯಿಂದ ಲಕ್ಷಾಂತರ ಮೌಲ್ಯದ ಬೆಳೆ ಹಾನಿ

ಕೋಲಾರ: ಕೋಲಾರದಲ್ಲಿ ಕಾಡಾನೆಗಳ ದಾಳಿಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿ ಉಂಟಾಗಿದೆ.‌ಕೋಲಾರದ ಬಂಗಾರಪೇಟೆ ತಾಲೂಕಿನ ಮಾರಂಡಹಳ್ಳಿ ಬಳಿ ಶುಕ್ರವಾರ ಬೆಳ್ಳಗ್ಗಿನ ಜಾವ ಕಾಡಾನೆಗಳು ತೋಟದ ಮೇಲೆ ದಾಳಿ ಮಾಡಿವೆ.ಕಾಡಾನೆಗಳ ದಾಳಿಯಿಂದ ಟಮೋಟೋ, ಬಾಳೆ ಬೆಳೆಗಳು ಹಾನಿಗೊಳಗಾದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಗಳು ನಾಶಗೊಂಡಿವೆ.‌ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ದಾರೆ.‌ಇದೇ ವೇಳೆ ಅರಣ್ಯ ಇಲಾಖೆಯಿಂದ ಹೆಚ್ಚಿನ ಪರಿಹಾರ ನೀಡುವಂತೆ ರೈತರು ಆಗ್ರಹ ಪಡಿಸಿದರು.

Read More »

ಮನೆ ಟಿಜ್ಯೂರಿ ಹಣ ಒಡವೆ ದೋಚಿದ ಖದೀಮರು

ಬೆಳಗಾವಿ: ಜಿಲ್ಲೆ ಕಿತ್ತೂರ ತಾಲ್ಲೂಕಿನ ನಿಚ್ಚಣಕಿ ಗ್ರಾಮದಲ್ಲಿ ಮನೆ ಟಿಜ್ಯೂರಿ ಒಡೆದು ಚಿನ್ನ , ಹಣ ದೊಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಸುಭಾಸ ಗೌಡ ಪಾಟೀಲ ಎಂಬ ಮಾಲೀಕನ ಅಂಗಡಿಯಲ್ಲಿ ಇದ್ದ ಹಣ ಹಾಗೂ ಮನೆಯಲ್ಲಿದ್ದ ಎರಡು ತೊಲಿ ಚಿನ್ನವನ್ನು ಕಳ್ಳತನ ಮಾಡಿದ್ದಾರೆ. ಈ ಕುರಿತು ಕಿತ್ತೂರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

ಜಿಲ್ಲಾಸ್ಪತ್ರೆಯಲ್ಲಿ ಯಂತ್ರೋಪಕರಣಗಳ ಕೊರತೆ ಸರಿಯಾದ ಚಿಕಿತ್ಸೆಯಿಲ್ಲದೇ ಪರದಾಡುತ್ತಿರುವ ರೋಗಿಗಳು

ಚಿತ್ರದುರ್ಗ: ಅದೊಂದು ಹೆಸರಿಗೆ ಮಾತ್ರ ಜಿಲ್ಲೆಯ ಬೃಹತ್ ಸರ್ಕಾರಿ ಆಸ್ಪತ್ರೆ. ಆದ್ರೆ ಅಲ್ಲಿ ಯಂತ್ರೋಪಕರಣಗಳಿದ್ರೂ ತಜ್ಞ ವೈದ್ಯರಿಲ್ಲ. ವೈದ್ಯರಿದ್ರೂ ಯಂತ್ರೋಪಕರಣಗಳು ಕೆಲಸ ಮಾಡಲ್ಲ. ಹೀಗಾಗಿ ರೋಗಿಗಳು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗಲಾರದೇ ಪರದಾಡುವಂತಾಗಿದೆ. ಅಷ್ಟಕ್ಕೂ ಯಾವ್ದಪ್ಪ ಆ ಜಿಲ್ಲಾಸ್ಪತ್ರೆ ಅಂತೀರ! ಈ ಸ್ಟೋರಿ ನೋಡಿ……,ಹೌದು ಒಂದಲ್ಲ ಒಂದು ರೀತಿಯಲ್ಲಿ ಸದಾ ಸುದ್ದಿಯಲ್ಲಿರೋ ಸರ್ಕಾರಿ ಆಸ್ಪತ್ರೆಯೇ ಚಿತ್ರದುರ್ಗ ಜಿಲ್ಲಾಸ್ಪತ್ರೆ. ಇಲ್ಲಿ ಸುಸಜ್ಜಿತ ಕೊಠಡಿಗಳಿವೆ,ಆರು ಸಾವಿರ ಬೆಡ್‍ಗಳ ವ್ಯವಸ್ಥೆ ಇದೆ ಹಾಗು ಎಲ್ಲಾ …

Read More »

15 ರಂದು ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ ಆಚರಿಸಲು ನಿರ್ಧಾರ

ಮಂಡ್ಯ: ಜಿಲ್ಲೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ತಾಲ್ಲೂಕು ಕ್ರೀಡಾಂಗಣದಲ್ಲಿ ಆಗಷ್ಟ್ 15ರಂದು ಅರ್ಥಪೂರ್ಣವಾಗಿ ಸ್ವಾತಂತ್ರ್ಯೋತ್ಸವ ಸಮಾರಂಭವನ್ನು ಆಚರಿಸಲು ತಹಶೀಲ್ದಾರ್ ಎಂ.ಶಿವಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಯಿತು.ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಯೋಧರು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ತಾಲ್ಲೂಕು ಆಡಳಿತದ ವತಿಯಿಂದಸನ್ಮಾನಿಸಿ ಗೌರವಿಸುವುದು. ಸ್ವಾತಂತ್ರ್ಯ ಸಂಭ್ರಮದ ಮಹತ್ವವನ್ನು ಸಾರುವ ಸ್ಥಬ್ದ ಚಿತ್ರಗಳ ಮೆರವಣಿಗೆ ಸೇರಿದಂತೆ ನಾಡುನುಡಿಯ …

Read More »

ರಿಪೇರಿ ವೇಳೆ ಏಕಾಏಕಿ ಹೊತ್ತಿ ಉರಿದ ಮೊಬೈಲ್

ಕೋಲಾರ: ಮೊಬೈಲ್ ರಿಪೇರಿ ಮಾಡುವ ವೇಳೆ ಮೊಬೈಲ್ ಸ್ಫೋಟಗೊಂಡ ಘಟನೆ ಕೋಲಾರದ ಮಾಲೂರು ಪಟ್ಟಣದ ಸಾಯಿರಾಂ ಎಂಟರ್ ಪ್ರೈಸಸ್ ಶಾಪ್ ನಲ್ಲಿ ನಡೆದಿದೆ.ಮಾಲೂರು ಸುರೇಶ್ ಎಂಬುವರಿಗೆ ಸೇರಿದ ಮೊಬೈಲ್ ಶಾಪ್ ಇದಾಗಿದ್ದು, ಎಂ.ಐ ಕಂಪನಿಗೆ ಸೇರಿದ ಮೊಬೈಲ್ ನ್ನು ರಿಪೇರಿ ಮಾಡುವ ವೇಳೆ ಏಕಾಏಕಿ ಮೊಬೈಲ್ ಸ್ಪೋಟಗೊಂಡು ಬೆಂಕಿ ಹತ್ತಿಕೊಳ್ಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ನಡೆದಿಲ್ಲ.

Read More »

ರಾಜ್ಯದಲ್ಲಿ ಬಿಜೆಪಿಯ ಆಡಳಿತದ ಬಗ್ಗೆ ವಿಶ್ವಾಸವಿದೆ: ಅನಿತಾ ಕುಮಾರಸ್ವಾಮಿ

ರಾಮನಗರ: ಮಾಜಿ ಸಿಎಂ ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ಯಾರಿಗೂ ತೊಂದರೆ ಮಾಡಿಲ್ಲ. ಆದರೆ ಮೈತ್ರಿ ಸರ್ಕಾರದಿಂದ ಸಣ್ಣ ರಾಜಕೀಯ ಮಾಡಲಾಯಿತು. ಆದರೆ ಈಗ ಬಿಜೆಪಿಯವರು ಆ ರೀತಿಯ ಸಣ್ಣರಾಜಕೀಯ ಮಾಡುವುದಿಲ್ಲವೆಂಬ ವಿಶ್ವಾಸವಿದೆ ಎಂದು ಶಾಸಕಿ ಅನಿತಾಕುಮಾರಸ್ವಾಮಿ ಹೇಳಿದರು. ರಾಮನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಕ್ಷೇತ್ರದ ಅಭಿವೃದ್ದಿಗೆ ತೊಂದರೆಯಾಗುವ ವಿಚಾರದ ಕುರಿತು ಮಾತನಾಡಿ, ಕ್ಷೇತ್ರದ ಅಭಿವೃದ್ದಿಯನ್ನು ಮುಂದಿನ ದಿನಗಳಲ್ಲಿ ನೀವೆ ನೋಡಿ ಎಂದರು. ಅತೃಪ್ತರ ಕ್ಷೇತ್ರದಲ್ಲಿ ಉಪಚುನಾವಣೆಯಲ್ಲಿ ನಿಖಿಲ್ …

Read More »

ಆ. 3 ರಂದು ಕುಮಾರಸ್ವಾಮಿಯವರೊಂದಿಗೆ ಕಾರ್ಯಕರ್ತರ ಸಂವಾದ ಕಾರ್ಯಕ್ರಮ

ಮಂಡ್ಯ: ಆಗಷ್ಟ್ 3ರ ಶನಿವಾರ ಮಧ್ಯಾಹ್ನ 4ಗಂಟೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಭೇಟಿ ನಡೆಸಿ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಲಾಗುವದು ಎಂದು ಎಂದು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ವೆಂಕಟಸುಬ್ಬೇಗೌಡ ತಿಳಿಸಿದರು. ‌ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ರಣತಂತ್ರ ರಚಿಸಲು ಕಾರ್ಯಕರ್ತರ ಜೊತೆ ಸಂವಾದ ಏರ್ಪಡಿಸಲಾಗುತ್ತದೆ.ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣಕ್ಕೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಆಗಮಿಸುತ್ತಿದ್ದು ಮಧ್ಯಾಹ್ನ 4ಗಂಟೆಗೆ ಕೆ.ಆರ್.ಪೇಟೆ ಪಟ್ಟಣದ ಯಶಸ್ವಿನಿ ಸಮುದಾಯ ಭವನದಲ್ಲಿ ಜೆಡಿಎಸ್ ಕಾರ್ಯಕರ್ತರು …

Read More »

ವಾಣಿಜ್ಯ ನಗರಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಪಿಒಪಿ ಗಣೇಶ ಮೂರ್ತಿ ತಯಾರಿಕೆ

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಪಿಒಪಿ ಗಣೇಶ ಮೂರ್ತಿ ತಯಾರಿಕೆ ಎಗ್ಗಿಲ್ಲದೆ ನಡೆಯುತ್ತಿದ್ದು, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಈ ರೀತಿ ಗಣೇಶ ಮೂರ್ತಿ ತಯಾರಿಕೆಗೆ ಕಡಿವಾಣ ಹಾಕಿದರೂ ಕೂಡ ನಗರದ ಹೊರವಲಯದ ಗಬ್ಬೂರು ಬೈಪಾಸ್ ಬಳಿ ರಾಜಾರೋಷವಾಗಿ ಗಣೇಶ ಮೂರ್ತಿ ತಯಾರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.ಧಾರವಾಡ ಜಿಲ್ಲಾಡಳಿತ ಪಿಒಪಿ ಗಣೇಶ ಮೂರ್ತಿ ತಯಾರಿಕೆಗೆ ಕಡಿವಾಣ ಹಾಕುವ ಹಿನ್ನೆಲೆ ಸೂಚನೆ ನೀಡಿದ್ದರೂ ಕೂಡ ಯಾವುದೇ ನಿಯಮ‌ ಪರಿಪಾಲನೆಯಾಗದೇ ಮೂರ್ತಿಯ ತಯಾರಿಕೆ ಮುಂದುವರೆದಿದೆ. …

Read More »

ಮಂಡ್ಯ ಜಿಲ್ಲೆ ನಿವೃತ್ತ ನೌಕರರ ಸಂಘದ ಅಧ್ಯಕ್ಷ ದಿವಂಗತ ಹೆಚ್.ಎಲ್.ಹನುಮಂತೇಗೌಡರಿಗೆ ನುಡಿನಮನ, ಶ್ರದ್ಧಾಂಜಲಿ ಸಮರ್ಪಣೆ.

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆಯಹನುಮಂತೇಗೌಡರು ನಾಯಕತ್ವ ಗುಣಗಳನ್ನು ಹೊಂದಿದ್ದ ಹೃದಯವಂತ ವ್ಯಕ್ತಿಯಾಗಿ ಸದಾ ಸಮಾಜದ ಹಿತವನ್ನೇ ಬಯಸುತ್ತಿದ್ದರು..ಅವರ ಅಕಾಲಿಕ ನಿಧನವು ಇಡೀ ಸಮಾಜಕ್ಕೆ ತುಂಬಲಾರದ ನಷ್ಠವಾಗಿದೆ. ನಾನು ನನ್ನ ಆತ್ಮೀಯ ಗೆಳೆಯನನ್ನು ಕಳೆದುಕೊಂಡಿದ್ದೇನೆ. ಅವರ ಕೊನೆಯಾಸೆಯಂತೆ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಭವನವನ್ನು ನಿರ್ಮಿಸುವ ದಿಕ್ಕಿನಲ್ಲಿ ಕ್ರಿಯಾಶೀಲರಾಗಿ ಹೆಜ್ಜೆ ಹಾಕಬೇಕು. ನಿವೃತ್ತ ನೌಕರರ ಭವನದ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಮಾಜಿಸ್ಪೀಕರ್ ಕೃಷ್ಣ ತಿಳಿಸಿದರು.ಅವರು ಇಂದು ತಾಲ್ಲೂಕಿನ ಗೋವಿಂದೇಗೌಡನಕೊಪ್ಪಲು ಗ್ರಾಮದಲ್ಲಿ ನಡೆದ …

Read More »