Breaking News

admin

ಆನ್‌ಲೈನ್‌ ಉದ್ಯೋಗ: ವಂಚನೆಗೆ ಒಳಗಾದ ಧಾರವಾಡ ಯುವತಿ

ಧಾರವಾಡ : ಆನ್‌ಲೈನ್‌ನಲ್ಲಿ ಉದ್ಯೋಗ ಹುಡುಕಲು ಹೋಗಿ ಧಾರವಾಡ ಯಾಲಕ್ಕೆ ಶೆಟ್ಟರ ಕಾಲೋನಿ ಮಯೂರ ಪಾರ್ಕ್ ನಿವಾಸಿ ಸುಹಾಸಿನಿ ಶಿಗ್ಗಾವಿ ಅವರಿಗೆ ಅಪರಿಚಿತ ವ್ಯಕ್ತಿ ೮೭,೭೯೧ ರೂ ವಂಚಿಸಿರುವ ಪ್ರಕರಣ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ . ಸುಹಾಸಿನಿಯವರು ಉದ್ಯೋಗ ಹುಡಕಲು ಲಿಂಕ್ ಡಿನ್ ಆಯಪ್‌ನಲ್ಲಿ ತನ್ನ ಎಲ್ಲ ಸ್ವವಿವರ ದಾಖಲಿಸಿದ್ದಾರೆ.ನಂತರ ಅಪರಿಚಿತ ವ್ಯಕ್ತಿ ಸಂದೇಶ ಕಳುಹಿಸಿ ಮನಿ ಮೇಕಿಂಗ್ ಲಿಂಕ್ ಕಳುಹಿಸಿದ್ದಾನೆ. ಅದನ್ನು ನಂತರ ಅವರು ಓಪನ್ ಮಾಡಿದ್ದಾರೆ …

Read More »

ದಲಿತ ಹೋರಾಟಗಾರ , ಬರಹಗಾರ ರವೀಂದ್ರ ಹಾರೋಹಳ್ಳಿ‌ ಬಂಧನ

ಚಿಕ್ಕೋಡಿ/ ಬೆಳಗಾವಿ: ದಲಿತ ಹೋರಾಟಗಾರ ಹಾಗೂ ಬರಹಗಾರ ರವೀಂದ್ರ ಹಾರೋಹಳ್ಳಿ ಅವರನ್ನು ಜಿಲ್ಲೆಯ ಚಿಕ್ಕೋಡಿ ಠಾಣೆಯ ಪೊಲೀಸರು ಮೈಸೂರಿನ ಹಾರೋಹಳ್ಳಿಯಲ್ಲಿ ಶುಕ್ರವಾರ ಬಂಧಿಸಿದ್ದಾರೆ. ‘ಅವರನ್ನು, 2017ರ ಡಿಸೆಂಬರ್‌ನಲ್ಲಿ ವಾಟ್ಸ್‌ಆಯಪ್‌ ಮತ್ತು ಫೇಸ್‌ಬುಕ್‌ನಲ್ಲಿ ಹಾಕಿದ್ದ ಪೋಸ್ಟ್‌ಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.

Read More »

ಕೊನೆಯ ಉಸಿರುವಿರುವವರೆಗೂ ಮುಸ್ಲಿಂ ಸಮುದಾಯದಕ್ಕೆ ದ್ರೋಹ ಮಾಡಲ್ಲ : ಸೋಮಶೇಖರ ರೆಡ್ಡಿ

ಬಳ್ಳಾರಿ: ನನ್ನ ಕೊನೆಯ ಉಸಿರು ಇರುವವರೆಗೂ ಮುಸ್ಲಿಂ ಸಮುದಾಯದಕ್ಕೆ ದ್ರೋಹ ಮಾಡಲ್ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದ್ದಾರೆ. ಅವರು ನಗರದ ಕೌಲಬಜಾರ್​​​​ನ ಎಂ.ಆರ್. ಫಂಕ್ಷನ್ ಹಾಲ್‌ನಲ್ಲಿ ರಂಜಾನ್ ಪ್ರಯುಕ್ತ ಮಾಜಿ ಸಚಿವ ಜನಾರ್ದನರೆಡ್ಡಿ ಆಪ್ತ ಮೆಹಫೂಜ್ ಅಲಿಖಾನ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು. ನಾನೇನಾದರೂ ಮುಸ್ಲಿಂರಿಗೆ ದ್ರೋಹ ಬಗೆದರೆ ರಾಜಕೀಯ ನಿವೃತ್ತಿ ಹೊಂದುವೆ .ನಾನು ನಿಷ್ಠುರವಾದಿ, ಮನಸ್ಸಿನಲ್ಲಿ ಇರುವುದನ್ನು ಹೇಳಿ ಬಿಡುತ್ತೇನೆ, ಮತ್ತೆ ಅದನ್ನು ಮರೆತು …

Read More »

ರಾಜ್ಯ ಸರ್ಕಾರ ಯುವ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ

ಬೆಂಗಳೂರು : ರಾಜ್ಯದ ಪ್ರತಿ ಗ್ರಾಮಪಂಚಾಯಿತಿ ಗೊಂದು ಸ್ವಾಮಿ ವಿವೇಕಾನಂದ ಹೆಸರಿನ ಸಂಘಗಳನ್ನು ರೂಪಿಸಿ, ಯುವಕರ ಸ್ವಾವಲಂಬನೆ,ನಿರುದ್ಯೋಗ ನಿವಾರಣೆಗೆ ಕ್ರಮ ಕೈಗೊಳ್ಳಲು ಕ್ರೀಡಾ ಮತ್ತು ಯುವಸಬಲೀಕರಣ ಇಲಾಖೆ ಯೋಜನೆ ರೂಪಿಸಲಿದೆ. ಈ ಕುರಿತು ಮಾಹಿತಿ ನೀಡಿರುವ ಕ್ರೀಡಾ ಸಚಿವ ನಾರಾಯಣಗೌಡ, ರಾಜ್ಯದ ಪ್ರತಿ ಗ್ರಾಮಪಂಚಾಯಿತಿಗೊಂದು ಯುವ ಸಂಘಗಳನ್ನು ಸ್ಥಾಪಿಸಿ, ಯುವಕರಿಗೆ ಅಗತ್ಯ ಸಂಪನ್ಮೂಲಗಳನ್ನು ಒದಗಿಸಿ,ಯುವಸಮುದಾಯಕ್ಕೆ ನಾಯಕತ್ವದ ಗುಣ, ನಿರುದ್ಯೋಗ ನಿವಾರಣೆಗೆ ಯೋಜನೆ ರೂಪಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

Read More »

ಡಿವೈಎಸ್ಪಿ ಶಿವಕುಮಾರ್ ನಿಧನ

ತುಮಕೂರು: ಜಿಲ್ಲೆಯ ಗುಪ್ತಚರ ವಿಭಾಗದಲ್ಲಿ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದ ಶಿವಕುಮಾರ್ ಅವರು ಹೃದಯಾಘಾತದಿಂದ ಮಧ್ಯರಾತ್ರಿ 12 ಗಂಟೆ ಸಮಯದಲ್ಲಿ ಕೊನೆಯುಸಿರೆಳೆದಿದ್ದಾರೆ. ದಾವಣಗೆರೆ ಜಿಲ್ಲೆ ಜಗಳೂರು ಮೂಲದ ನಿವಾಸಿಯಾಗಿರುವ ಶಿವಕುಮಾರ್​ ಕಳೆದ ಒಂದೂವರೆ ವರ್ಷದಿಂದ ತುಮಕೂರು ಜಿಲ್ಲೆಯ ಗುಪ್ತಚರ ವಿಭಾಗದಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.‌

Read More »

ರಾಜ್ಯಕ್ಕೆ ಕೇಂದ್ರ ಗೃಹಸಚಿವ ಭೇಟಿ : ರಾಜಕೀಯದಲ್ಲಿ ಮಹತ್ವದ ತಿರುವು

ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಮೇ 3ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದು, ಸರ್ಕಾರಿ ಕಾರ್ಯಕ್ರಮಗಳ ಜೊತೆಗೆ ರಾಜ್ಯ ಬಿಜೆಪಿ ಕಚೇರಿಗೂ ಭೇಟಿ ನೀಡಿ ಪಕ್ಷದ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಅಮಿತ್ ಶಾ ರಾಜ್ಯ ಭೇಟಿ ಹಿನ್ನೆಲೆಯಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಬಹುದೆಂಬ ವಿಚಾರ ಮುನ್ನೆಲೆಗೆ ಬಂದಿದ್ದು, ಹೀಗಾಗಿ ಸಚಿವಾಕಾಂಕ್ಷಿಗಳ ರಾಜಕೀಯ ಚಟುವಟಿಕೆ ಗರಿಗೆದರಿದೆ.

Read More »

PSI ನೇಮಕ ಹಗರಣ : ಉಪವಾಸ ಸತ್ಯಾಗ್ರಹಕ್ಕೆ ಅಭ್ಯರ್ಥಿಗಳು ಪಟ್ಟು

ಬೆಂಗಳೂರು: ರಾಜ್ಯ ಸರ್ಕಾರದ ನಿದ್ದೆಕೆಡಿಸಿರುವ PSI ನೇಮಕ ಹಗರಣ ದಿನದಿಂದ ದಿನಕ್ಕೆ ಒಂದ ತಿರುವು ಪಡೆದುಕೊಳ್ಳುತ್ತಿದ್ದು, ನೇಮಕಾತಿ ಪ್ರಕ್ರಿಯೆಯನ್ನು ರದ್ದು ಮಾಡಿ ಮತ್ತೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನಡುವೆ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ದ ಅಭ್ಯರ್ಥಿಗಳ ಸೇರಿದಂತೆ ವಿರೋಧ ಪಕ್ಷಗಳು ಟೀಕೆ ಮಾಡುತ್ತಿದ್ದು, ಸರ್ಕಾರದ ಕ್ರಮವನ್ನು ಖಂಡಿಸುತ್ತಿದ್ದಾರೆ. ಸರ್ಕಾರ ಯಾರದ್ದೂ ತಪ್ಪನ್ನು ನಮಗೆ ಶಿಕ್ಷೆ ನೀಡಲು ಮುಂದಾಗಿರುವುದು ನಮಗೆ ಬೇಸರ ತಂದಿದ್ದೆ, ಈ ನಿಟ್ಟಿನಲ್ಲಿ ಕಾನೂನು ಸಮರಕ್ಕೆ …

Read More »

PSI ನೇಮಕಾತಿ ರದ್ದು : ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ ಎಚ್ ಡಿ‌ ಕೆ

ಹುಬ್ಬಳ್ಳಿ : PSI ನೇಮಕಾತಿ ರದ್ದು ಮಾಡಿದ ಹಿನ್ನಲೆ ರಾಜ್ಯ ಸರ್ಕಾರದ ವಿರುದ್ಧ ಎಚ್ ಡಿ‌ ಕೆ ವಾಗ್ದಾಳಿ ನಡೆಸಿದ್ದಾರೆ. ಮಾಧ್ಯಮರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಗಳಿಗೆ ಕರೆ ಮಾಡಿ ಮಾತನಾಡುತ್ತೇನೆ . ತನಿಖೆ ಪೂರ್ಣಗೊಳ್ಳುವ ಮುನ್ನವೇ ಸರ್ಕಾರ ನಿರ್ಧಾರ ಮಾಡಿದ್ದು ಸರಿಯಲ್ಲ. ತಪ್ಪಿತಸ್ಥರನ್ನ ಶಿಕ್ಷಿಸಿ, ಬಡಮಕ್ಕಳಿಗೆ ಅನ್ಯಾಯ ಮಾಡಬೇಡಿ. ಯಾರು ಹಣ ಕೊಟ್ಟ, ಪರೀಕ್ಷಾ ಅಕ್ರಮದ ಭಾಗಿಯಾಗಿದ್ದಾರೆ ಅಂತರವನ್ನು ಶಿಕ್ಷಿಸಿ ಎಂದರು.

Read More »

PSI ನೇಮಕಾತಿ ರದ್ದು : ಯಾವುದೇ ದಾರಿ ಇಲ್ಲ, ನಾವು ವಿಷ ಕುಡಿಯಬೇಕು ಅಷ್ಟೇ, ಅಭ್ಯರ್ಥಿಗಳ ಅಳಿಲು

ಹುಬ್ಬಳ್ಳಿ : ಪಿ ಎಸ್ ಐ ಪರೀಕ್ಷೆ ರದ್ದು ಕುರಿತು ಅಭ್ಯರ್ಥಿಗಳು ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವನ್ನು ಹೊರಹಾಕಿದ್ದಾರೆ. ಮಾಧ್ಯಮರೊಂದಿಗೆ ಮಾತನಾಡಿದ ಅಭ್ಯರ್ಥಿಗಳು, ಪರೀಕ್ಷೆ ಬರೆದು ನೇಮಕಾತಿ ಹೊಂದಿದವರ ಸಿ ಐ ಡಿ ತನಿಖೆ ಎದುರಿಸಿದ್ರು ರದ್ದು ಮಾಡಿದ್ದು ಖಂಡನೀಯವಾಗಿದೆ. ನಮಗೆ ಯಾವುದೇ ದಾರಿ ಇಲ್ಲ, ನಾವು ವಿಷ ಕುಡಿಯಬೇಕು ಅಷ್ಟೇ ಎಂದ ಅಭ್ಯರ್ಥಿಗಳು ತಮ್ಮ ನೋವುನ್ನು ಹೇಳಿದ್ದಾರೆ. ಸರ್ಕಾರ ಸಿಐಡಿ ತನಿಖೆ ಎದುರಿಸಿ ಅಂತ ಹೇಳಿತ್ತು ಅದರಲ್ಲಿ …

Read More »

ಗೋಶಾಲೆಗಳಿಗೆ ನೆರವು ಯೋಜನೆಗೆ ಅರ್ಜಿ‌ಆಹ್ವಾನ

ಧಾರವಾಡ :  ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆಯಿಂದ 2022-23 ನೇ ಸಾಲಿನಲ್ಲಿ ಪಿಂಜಾರಾಪೋಳ ಮತ್ತು ಇತರೆ ಗೋಶಾಲೆಗಳಿಗೆ ನೆರವು ಯೋಜನೆ ಅಡಿಯಲ್ಲಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ . ಅರ್ಹ ಆಸಕ್ತರು ಮೇ 10 ರೊಳಗಾಗಿ ಅರ್ಜಿ ಸಲ್ಲಿಸಬಹುದು . ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಛೇರಿ , ಪಶುಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆ ಧಾರವಾಡ ದೂರವಾಣಿ ಸಂಖ್ಯೆ 0836-2447672 ಅಥವಾ 9900675607 ಸಂಪರ್ಕಿಸಬಹುದು ಎಂದು ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

Read More »