Breaking News

ಕೆಎಸ್‌ಆರ್‌ಟಿಸಿ ಬಸ್‌ ಜಮೀನಿಗೆ ನುಗ್ಗಿದೆ…..

ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಒಂದು ಹವಾ ಇಟ್ಟಿವೆ, ಹಾಗೇ ಹೊರ ರಾಜದಲ್ಲೂ ಕೆಎಸ್‌ಆರ್‌ಟಿಸಿ ಬಸ್ ಅಂದ್ರೆ ಒಂದು ಬೆಲೆ ಇದೆ. ಆ ಲೆಕ್ಕಾಚಾರದಲ್ಲಿ ನೋಡುವುದಾದರೆ, ಕನ್ನಡಿಗರ ನಾಡಿನ ಬಸ್‌ಗಳು ಉತ್ತಮ ಗುಣಮಟ್ಟ ಕೂಡ ಕಾಯ್ದುಕೊಂಡಿವೆ. ಆದ್ರೆ ಹೀಗೆ ಉತ್ತಮ ಹೆಸರು ಪಡೆದಿರುವ ಕೆಎಸ್‌ಆರ್‌ಟಿಸಿ ಸಂಸ್ಥೆಗೆ, ಕೆಲವು ಚಾಲಕರು ಮಾತ್ರ ಸಮಸ್ಯೆ ಮಾಡುತ್ತಿದ್ದಾರೆ. ತಮ್ಮ ಮನಸ್ಸಿಗೆ ಬಂದಂತೆ ಬಸ್ ಓಡಿಸಿ, ಪ್ರಯಾಣಿಕರ ಜೀವ ಬಾಯಿಗೆ ಬರಿಸುತ್ತಿದ್ದಾರೆ.

ಅಂದಹಾಗೆ ಇಂಥದ್ದೇ ಘಟನೆಯೊಂದು ಇಂದು ವರದಿಯಾಗಿದೆ. ಬಾಗೇಪಲ್ಲಿ ಕಡೆಯಿಂದ, ಗುಡಿಬಂಡೆಗೆ ಬರುತ್ತಿದ್ದ ಬಸ್ ದೊಡ್ಡ ಆಪತ್ತಿಗೆ ಸಿಲುಕಿ ಬಚಾವ್ ಆಗಿದೆ. ನೇರವಾಗಿ ರಸ್ತೆ ಮೇಲೆ ಹೋಗುತ್ತಿದ್ದ ಬಸ್ ಒಂದು, ಇದ್ದಕ್ಕಿದ್ದಂತೆ ಜಮೀನಿಗೆ ನುಗ್ಗಿದೆ. ಆದರೆ ಈ ಘಟನೆ ಹಿಂದೆ ಚಾಲಕನ ಎಡವಟ್ಟು ಪ್ರಮುಖ ಕಾರಣ ಎಂಬ ಆರೋಪ ಕೇಳಿಬಂದಿದೆ. ಹಾಗಾದ್ರೆ ದುರಂತದಲ್ಲಿ ಆಗಿದ್ದೇನು? ಪ್ರಯಾಣಿಕರು ಸೇಫ್ ಆಗಿದ್ದಾರಾ?

ಬಾಗೇಪಲ್ಲಿಯಿಂದ ಗುಡಿಬಂಡೆ ಕಡೆ ಬರುತ್ತಿದ್ದ ಕರ್ನಾಟಕ ಸಾರಿಗೆ ಬಸ್‌ ಅತಿ ವೇಗದ ಚಾಲನೆ ಕಾರಣ ಹೀಗೆ ಜಮೀನಿಗೆ ನುಗ್ಗಿದೆ ಎಂಬ ಆರೋಪ ಕೇಳಿಬಂದಿದೆ. ದುರಂತ ವೇಳೆ ಬಸ್‌ನಲ್ಲಿ ಸುಮಾರು 20 ಜನರಿದ್ದರು ಎನ್ನಲಾಗಿದೆ. ಪ್ರಯಾಣಿಕರು ತಿಳಿ ಹೇಳಿದರು ಕೂಡ ಚಾಲಕ ಹೀಗೆ ಅಜಾಗರೂಕತೆಯಿಂದ ಚಾಲನೆ ಮಾಡಿದ್ದು. ಅತಿ ವೇಗದ ಚಾನೆಯ ಹಿನ್ನೆಲೆ ಬಸ್ ನೋಡ ನೋಡುತ್ತಿದ್ದಂತೆ ರಸ್ತೆಯನ್ನ ಬಿಟ್ಟು ಬದಿಯಲ್ಲಿದ್ದ ಜಮೀನಿಗೆ ನುಗ್ಗಿದೆ. ಈ ವೇಳೆ ಬಸ್‌ನ ಮುಂದಿನ ಎರಡು ಚಕ್ರಗಳು ಕೂಡ ಕಳಚಿಕೊಂಡು ಹೊರಗೆ ಬಿದ್ದಿವೆ.
ಗುಡಿಬಂಡೆ ಪಟ್ಟಣದ ಸಮೀಪ ಇರುವ ಉಪ್ಪಾರಹಳ್ಳಿ ಬಿಡುತ್ತಿದ್ದಂತೆ ತಿರುವಿನಲ್ಲಿ, ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಜಮೀನಿಗೆ ಬಸ್ ನುಗ್ಗಿದೆ. ಈ ವೇಳೆ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ. ಆದರೆ ಅದೃಷ್ಟ ಚೆನ್ನಾಗಿತ್ತು ಅಂತಾ ಕಾಣುತ್ತೆ, ಹೀಗಾಗಿ ಜೀವ ಹಾನಿಯ ರೀತಿ ದುರ್ಘಟನೆ ತಪ್ಪಿದೆ. ಇನ್ನು ಕೆಲ ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ. ತಕ್ಷಣವೇ ಬಸ್ ಇದ್ದ ಜಾಗಕ್ಕೆ ಸ್ಥಳೀಯರು ಓಡಿ ಬಂದು ಗಾಯಾಳುಗಳಿಗೆ ಸಹಾಯ ಮಾಡಿದ್ದಾರೆ.

Share News

About BigTv News

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *