ಧಾರವಾಡ : ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆಯಿಂದ 2022-23 ನೇ ಸಾಲಿನಲ್ಲಿ ಪಿಂಜಾರಾಪೋಳ ಮತ್ತು ಇತರೆ ಗೋಶಾಲೆಗಳಿಗೆ ನೆರವು ಯೋಜನೆ ಅಡಿಯಲ್ಲಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ .
ಅರ್ಹ ಆಸಕ್ತರು ಮೇ 10 ರೊಳಗಾಗಿ ಅರ್ಜಿ ಸಲ್ಲಿಸಬಹುದು . ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಛೇರಿ , ಪಶುಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆ ಧಾರವಾಡ ದೂರವಾಣಿ ಸಂಖ್ಯೆ 0836-2447672 ಅಥವಾ 9900675607 ಸಂಪರ್ಕಿಸಬಹುದು ಎಂದು ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

