Breaking News

admin

ಈಶ್ವರಪ್ಪ ಬಂಡತನ ಪ್ರದರ್ಶನ ಮಾಡದೇ ರಾಜೀನಾಮೆ ನೀಡಬೇಕು: ಪ್ರಸಾದ್ ಅಬ್ಬಯ್ಯ

ಹುಬ್ಬಳ್ಳಿ: ಕಮಿಷನ್ ವಿಚಾರವಾಗಿ ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಹೊತ್ತಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡುವುದಿಲ್ಲ ಎಂದು ಬಂಡತನ ತೋರುತ್ತಿರುವುದು ಆ ಪಕ್ಷಕ್ಕೆ ತಿರುಗುಬಾಣವಾಗಲಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜನರು ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಕಿಡಿಕಾರಿದರು. ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿಯ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆತ್ಮಹತ್ಯೆ …

Read More »

ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದ ಕೇಂದ್ರ ಸಚಿವ: ಎಲ್ಲ ವರ್ಗದ ಹಿತಕಾಯ್ದ ನಾಯಕ…!

ಹುಬ್ಬಳ್ಳಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜಯಂತೋತ್ಸವದ ಅಂಗವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು, ಹುಬ್ಬಳ್ಳಿಯಲ್ಲಿಂದು ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಹುಬ್ಬಳ್ಳಿಯ ಪ್ರಧಾನ ಅಂಚೆ ಕಚೇರಿಯ ಎದುರಿನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ಮಾತನಾಡಿದ ಅವರು, ಶೋಷಿತ ವರ್ಗದ ಧ್ವನಿಯಾಗಿ ಹಾಗೂ ತಾವೇ ಶೋಷಣೆಗೆ ಒಳಗಾಗಿದ್ದರೂ ಕೂಡ ಎಲ್ಲ ವರ್ಗದ ಜನರ ಅಭಿವೃದ್ಧಿಗಾಗಿ ಸಂವಿಧಾನವನ್ನು ಬರೆದಿದ್ದಾರೆ ಎಂದರು. ತಮ್ಮ ಜೀವನದಲ್ಲಿ ಸಾಕಷ್ಟು …

Read More »

ಸ್ಮಾರ್ಟ್ ಸಿಟಿ ಯೋಜನೆ ಹೆಸರಲ್ಲಿ ಅವ್ಯವಸ್ಥೆ

ಹುಬ್ಬಳ್ಳಿ: ನಗರದ ಸಿಬಿಟಿ ಶಾ ಬಜಾರ್ ನಲ್ಲಿ ಅವ್ಯವಸ್ಥೆ ತಲೆದೂರಿದೆ . ಚೆನ್ನಾಗಿದ್ದಫುಟ್ ಪಾತ್ ಅಗೆದು ಸ್ಮಾರ್ಟ್ ಸಿಟಿ ಯೋಜನೆ ಹೆಸರಲ್ಲಿ ಅವ್ಯವಸ್ಥೆ ಹುಟ್ಟು ಹಾಕಿದ್ದಾರೆ . ಫುಟ್ ಪಾತ್ ಮೇಲೆ ಫೀವರ್ಸ್ ಹೊಂದಿಸಿ ಸ್ಮಾರ್ಟ್ ಮಾಡುತ್ತೇವೆ ಎಂದು ಗುಂಡಿ ತೆಗೆದು ಹಾಗೆಯೇ ಬಿಟ್ಟಿದ್ದು , ಸಂಜೆ ವೇಳೆಯಲ್ಲಿ ಸಂಚರಿಸುವ ಸಾರ್ವಜನಿಕರು ಗುಂಡಿಯಲ್ಲಿ ಬಿದ್ದು ಅಪಘಾತಕ್ಕೆ ತುತ್ತಾಗುತ್ತಿದ್ದಾರೆ ದಿನಕ್ಕೆ ಸಾವಿರಾರು ಜನರು ಮಾರ್ಕೆಟ್ ಹಾಗೂ ಇನ್ನಿತರ ಕೆಲಸಕ್ಕೆ ಈ ರಸ್ತೆಯಲ್ಲಿಯೇ …

Read More »

ಏ.16 ರಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ

ಧಾರವಾಡ: ಏಪ್ರೀಲ್ ತಿಂಗಳ 3 ನೇ ಶನಿವಾರವಾದ 16 ರಂದು ಜಿಲ್ಲೆಯ ಏಳು ತಾಲೂಕುಗಳ ಆಯ್ದ ಗ್ರಾಮಗಳಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ತಹಸೀಲ್ದಾರರು ಗ್ರಾಮವಾಸ್ತವ್ಯ ಮಾಡಲಿದ್ದಾರೆ . ಕುಂದಗೋಳ ತಾಲೂಕಿನ ಬರದ್ವಾಡ , ಕಲಘಟಗಿ ತಾಲೂಕಿನ ಎಮ್ಮೆಟ್ಟಿ , ಧಾರವಾಡ ತಾಲೂಕಿನ ತಡಕೋಡ , ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಕಿರೇಸೂರ , ನವಲಗುಂದ ತಾಲೂಕಿನ ಗೊಬ್ಬರಗುಂಪಿ , ಅಣ್ಣಿಗೇರಿ ತಾಲೂಕಿನ ಕಿತ್ತೂರ ಹಾಗೂ ಅಳ್ಳಾವರ …

Read More »

ಏ.16 ರಂದು ಗ್ರಾಹಕರ ಸಂವಾದ ಸಭೆ

ಧಾರವಾಡ : ಗ್ರಾಮೀಣ ಉಪವಿಭಾಗದ ಶಾಖೆ -1,2 , ಹೆಬ್ಬಳ್ಳಿ , ಗರಗ ಮತ್ತು ಉಪ್ಪಿನಬೆಟಗೇರಿ , ಅಳ್ಳಾವರ , ಬೇಲೂರು ಶಾಖೆಗಳಲ್ಲಿ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸಲು ಏ . 16 ಶನಿವಾರದಂದು ಧಾರವಾಡದ ಗ್ರಾಮೀಣ ಉಪವಿಭಾಗ ಕಚೇರಿಯಲ್ಲಿ ಗ್ರಾಹಕರ ಸಂವಾದ ಸಭೆ ಹಾಗೂ ಸುರಕ್ಷತಾ ದಿನವನ್ನು ಆಯೋಜಿಸಲಾಗಿದೆ . ಈ ಸಭೆಯ ಸದುಪಯೋಗ ಪಡೆದುಕೊಳ್ಳುವಂತೆ ಹೆಸ್ಕಾಂ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

Read More »

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸಲಹೆ ನೀಡಿದ ಉಪವಿಭಾಗಾಧಿಕಾರಿ

ಈ ಬಾರಿ ಪುರಸಭೆ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿಯ ಮಹಿಳೆಗೆ ನೀಡುವಂತೆ ವಿವಿಧ ದಲಿತ ಪರ ಸಂಘ ಗಳು ಮಂಗಳವಾರ ರಾತ್ರಿಯಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ . ಪರಿಶಿಷ್ಟ ಜಾತಿಯ ಅಭ್ಯರ್ಥಿಗೆ ಮೀಸಲಾತಿ ನೀಡುವ ಸಲುವಾಗಿ 20 ನೇ ವಾರ್ಡಿನ ಸದಸ್ಯೆ ವೀಣಾ ಸಾತಪ್ಪ ಭೋವಿ ಸಲ್ಲಿಸಿರುವ ನ್ಯಾಯಾಲಯ ಅರ್ಜಿ ವಿಚಾರಣೆಯಲ್ಲಿದೆ. ಇದೇ 20 ರಂದು ನ್ಯಾಯಾಲಯದ ತೀರ್ಪು ಬರಲಿದೆ ಅಲ್ಲಿಯವರೆಗೆ ನಿಮ್ಮಧರಣಿಯನ್ನು ನಿಲ್ಲಿಸಬೇಕು ಎಂದು ಉಪವಿಭಾಗಾಧಿಕಾರಿ ಡಾ.ಮಾದವಗಿತ್ತೆ ಅವರು …

Read More »

ಸಂತೋಷ್ ಆತ್ಮಹತ್ಯೆ ಆಗ್ರಹಿಸಿ ಏ. 14ರಂದು ಸಿಎಂ ಮನೆ ಮುಂದೆ ಪ್ರತಿಭಟನೆ

ಬೆಳಗಾವಿ: ‘ಕಮಿಷನ್ ಕಿರುಕುಳ ನೀಡಿ ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿರುವ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಬಂಧಿಸುವಂತೆ ಆಗ್ರಹಿಸಿ ಏ.14ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದರು. ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಸಮ್ಮುಖದಲ್ಲಿ ಇಲ್ಲಿನ ಹೋಟೆಲ್‌ನಲ್ಲಿ ಬುಧವಾರ ರಾತ್ರಿ ನಡೆದ ಸಭೆಯ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ‘ಈಶ್ವರಪ್ಪ ರಾಜೀನಾಮೆ ಪಡೆಯುವುದು ಮುಖ್ಯವಲ್ಲ, …

Read More »

ಮೂಕ ಪ್ರಾಣಿಯನ್ನು ಬೀಡದ ಕಾಮುಕರು : ಅರಣ್ಯ ಅಧಿಕಾರಿಗಳೂ ಶಾಕ್

ಮುಂಬೈ : ಉಡದ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ನಾಲ್ವರು ಬೇಟೆಗಾರರನ್ನು ಮಹಾರಾಷ್ಟ್ರ ಅರಣ್ಯ ಇಲಾಖೆ ಬಂಧಿಸಿದೆ. ವರದಿಗಳ ಪ್ರಕಾರ, ಈ ಘಟನೆಯು ಗೋಥಾಣೆಯ ಗಭಾ ಪ್ರದೇಶದಲ್ಲಿ ನಡೆದಿದೆ. ಈ ನಾಲ್ವರು ವ್ಯಕ್ತಿಗಳು ಕಾಡಿನಲ್ಲಿ ತಿರುಗಾಡುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ ಎಂದು ಸಾಂಗ್ಲಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯಾಧಿಕಾರಿಗಳು ಮೊದಲು ಒಬ್ಬ ಶಂಕಿತನನ್ನು ಬಂಧಿಸಿದ್ದು, ಆತನ ಮೊಬೈಲ್ ಪರಿಶೀಲಿಸಿದಾಗ ಆಘಾತಕಾರಿ ವಿಡಿಯೋ ನೋಡಿ ಅರಣ್ಯಾಧಿಕಾರಿಗಳು ಶಾಕ್ ಆಗಿದ್ದಾರೆ.

Read More »

3-4 ದಿನಗಳ ಕಾಲ ಭಾರೀ ಮಳೆ ಸಾಧ್ಯತೆ

ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 3-4 ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರ್ನಾಲ್ಕು ದಿನ ಮಳೆಯಾಗುವ ಸಾಧ್ಯತೆ ಇದೆ. ಇಂದು ಹಾವೇರಿ, ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಲಿದೆ.

Read More »

ಸ್ವಗ್ರಾಮಕ್ಕೆ ತೆರಳಿದ ಸಂತೋಷ್ ಮೃತದೇಹ : ಆರೋಪಿಯನ್ನು ಬಂಧಿಸುವವರೆಗು ಅಂತ್ಯ ಕ್ರಿಯೆ ಇಲ್ಲ

ಬೆಳಗಾವಿ: ಸಚಿವ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ‌ ಲಂಚದ ಆರೋಪ‌ ಮಾಡಿ ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ ಸಂತೋಷ್ ಪಾಟೀಲ್‌ ಮೃತದೇಹವನ್ನು ಸ್ವಗ್ರಾಮ ಬಡಸದತ್ತ ತೆಗೆದುಕೊಂಡು ಹೋಗಲಾಗುತ್ತಿದೆ. ಕಿತ್ತೂರು ತಾಲ್ಲೂಕಿನ ಎಂ‌.ಕೆ. ಹುಬ್ಬಳ್ಳಿ ಮೂಲಕ ಬಡಸ ಗ್ರಾಮಕ್ಕೆ ಸಾಗಿಸಲಾಗುತ್ತಿದೆ. ಅಲ್ಲಿದ್ದ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ ಕುಟುಂಬದವರು, ಆರೋಪಗಳನ್ನು ಬಂಧಿಸಲು ಅಗತ್ಯವಾದ ದಾಖಲೆಗಳು ಇವೆ. ನಮ್ಮ ಬಳಿಯೂ ಸಾಕಷ್ಟಿವೆ. ಅವುಗಳನ್ನು ಕೊಡಲಾಗುವುದು. ಆರೋಪಗಳನ್ನು ಬಂಧಿಸುವವರೆಗೂ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. …

Read More »